ಚಿಕ್ಕಬಳ್ಳಾಪುರ: ಜಿಲ್ಲೆಯ ವಿದುರಾಶ್ವತ್ಥ ಪ್ರಸಿದ್ಧ ಪ್ರವಾಸಿ ತಾಣ. ದೇಶದ ವಿವಿಧ ಭಾಗಗಳಿಂದ ವಿದುರಾಶ್ವತ್ಥಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ವಿಧುರಾಶ್ವತ್ಥಕ್ಕೆ ಬಂದು ಪ್ರವಾಸಿ ತಾಣ ವಿಕ್ಷಣೆ ಮಾಡುವುದಕ್ಕೂ ಮುನ್ನ ಅಲ್ಲಿರುವ ಕೋತಿಗಳ ಕಾಟವನ್ನು ಸಹಿಸಿಕೊಳ್ಳುವ ಪರಿಸ್ಥಿತಿ ಇದೀಗ ಎದುರಾಗಿದೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಎಂದರೆ ಒಂದೆಡೆ ಅಶ್ವತ್ಥನಾರಾಯಣಸ್ವಾಮಿಯ ಪುರಾಣ ಪ್ರಸಿದ್ಧ ಧಾರ್ಮಿಕ ತಾಣ. ಮತ್ತೊಂದೆಡೆ ಸ್ವಾತಂತ್ರ್ಯ ಸೇನಾನಿಗಳು ಹುತಾತ್ಮರಾದ ತಾಣ. ಇದರಿಂದ ವಿದುರಾಶ್ವತ್ಥ ನೋಡಲು ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಆದರೆ ಇಲ್ಲಿರುವ ಕೋತಿಗಳ ಉಪಟಳ ಒಂದಲ್ಲ ಎರಡಲ್ಲ. ಸ್ವತಃ ಅರಣ್ಯ ಇಲಾಖೆ ಸಿಬ್ಬಂದಿ ಮುಖಕ್ಕೆ ಕಪ್ಪು ಕೋತಿಯ ಮಾರುವೇಷ ಧರಿಸಿ ಕೋತಿಗಳನ್ನು ಹೆದುರಿಸುವ ಪರಿಸ್ಥಿತಿ ಉದ್ಭವವಾಗಿದೆ.
ಪ್ರವಾಸಿ ತಾಣದಲ್ಲಿ ಕೋತಿಗಳ ಉಪಟಳ ನಿಯಂತ್ರಿಸುವಂತೆ ಪ್ರವಾಸಿಗರು ಹಾಗೂ ಸ್ಥಳಿಯರು ಅರಣ್ಯ ಇಲಾಖೆಗೆ ದೂರು ನೀಡಿದ ಕಾರಣ ಸ್ವತಃ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಗಳನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ. ಪಟಾಕಿ ಹೊಡೆದು, ಬೆದರಿಸಿದರು ಕೋತಿಗಳು ಹೋಗುತ್ತಿಲ್ಲ. ಆದರೆ ನಾಡಿನ ಕೋತಿಗಳಿಗೆ ಕಾಡಿನ ಕಪ್ಪು ಕೋತಿ ಹಾಗೂ ಲಂಗೂರು ಕೋತಿ ಕಂಡರೆ ಪ್ರಾಣ ಭಯ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿದಿನ ಕಪ್ಪು ಕೋತಿಯ ವೇಷ ಧರಿಸಿ ಕೋತಿಗಳು ಇರುವ ಕಡೆ ಹೋಗಿ ಕೋತಿಗಳನ್ನು ಓಡಿಸುತ್ತಾರೆ.
ವಿದುರಾಶ್ವತ್ಥಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ದೇವರ ಪೂಜೆ ಮಾಡಲು ಹೋಗೋಣ ಎಂದರೆ ಕೋತಿಗಳು ಕೈಯಲ್ಲಿರುವ ಪೂಜಾ ಸಾಮಾಮಗ್ರಿಗಳು ಕಿತ್ತು ಬಿಸಾಡುತ್ತವೆ. ದೇವರಿಗೆ ನೈವೇದ್ಯ ಮಾಡೋಣ ಅಂತ ಹಾಲು, ಮೊಸರು ತೆಗೆದುಕೊಂಡರೆ ದೇವರ ಗುಡಿ ತಲುಪುವ ಮೊದಲೇ ಕೋತಿಗಳ ಪಾಲಾಗುತ್ತದೆ. ಈಗ ಬೇಸಿಗೆಯಾದ ಕಾರಣ ಕಾಡಿನ ಕೋತಿಗಳು ಸಹಜವಾಗಿ ಜನ ಜಂಗುಳಿಯ ಪ್ರವಾಸಿ ಧಾಮದತ್ತ ಲಗ್ಗೆಯಿಡುತ್ತವೆ. ಆದರೆ ವಿದುರಾಶ್ವತ್ಥಸ್ವಾಮಿ ದೇವಸ್ಥಾನದ ಬಳಿ ಇರುವ ಕೋತಿಗಳು ಭಕ್ತರಿಗೆ ತೀರಾ ತೊಂದರೆಗಳನ್ನು ನಿಡುತ್ತಿವೆ. ಇದಕ್ಕಾಗಿ ಮಂಗಗಳ ಕಾಟದಿಂದ ಪಾರು ಮಾಡುವಂತೆ ಭಕ್ತರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದು, ಕೋತಿಗಳನ್ನು ಓಡಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.
ಇದನ್ನೂ ಓದಿ
ಮಹಾರಾಷ್ಟ್ರ: ಥಾಣೆ ಬಳಿ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ; 28 ವಿದ್ಯುತ್ ಮೀಟರ್ಗಳು ಭಸ್ಮ
ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜು ಪರ ನಿಂತ ಬಾಲಿವುಡ್ನ ಖ್ಯಾತ ನಟಿ; ಆರೋಪ ಮಾಡಿದ ಮಹಿಳೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ