ಚಿರತೆ ದಾಳಿಗೆ ಮೂರು ಕರುಗಳ ಬಲಿ: ದಾವಣಗೆರೆ ಅರಣ್ಯ ಅಧಿಕಾರಿಗಳ ಮೊರೆ ಹೋದ ಗ್ರಾಮಸ್ಥರು
ಬೆಟ್ಟಕಡೂರು ಗ್ರಾಮದ ಜಯಪ್ಪ ಎಂಬ ರೈತನಿಗೆ ಸೇರಿದ ಹಸುವಿನ ಮೇಲೆ ಚಿರತೆ ಏಕಾಎಕಿ ದಾಳಿ ನಡೆಸಿದ್ದು, ಕರುಗಳು ಸಾವನ್ನಪ್ಪಿವೆ. ಅರಣ್ಯ ಅಂಚಿನಲ್ಲಿ ಇರುವ ತೋಟದ ಮನೆಯಾಗಿರುವುದರಿಂದ ಇಲ್ಲಿ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಚಿರತೆ ದಾಳಿ ತಪ್ಪಿಸುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ದಾವಣಗೆರೆ: ತೋಟದ ಮನೆಯಲ್ಲಿ ಕಟ್ಟಿದ್ದ ಹಸುಗಳ ಮೇಲೆ ಚಿರತೆಯೊಂದು ದಾಳಿ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಟ್ಟಕಡೂರು ಗ್ರಾಮದಲ್ಲಿ ನಡೆದಿದೆ. ಚಿರತೆ ದಾಳಿಯ ವೇಳೆ ಮೂರು ಕರುಗಳು ಸಾವನ್ನಪ್ಪಿದ್ದು, ನಾಲ್ಕು ಹಸುಗಳಿಗೆ ಗಾಯವಾಗಿದೆ.
ಬೆಟ್ಟಕಡೂರು ಗ್ರಾಮದ ಜಯಪ್ಪ ಎಂಬ ರೈತನಿಗೆ ಸೇರಿದ ಹಸುವಿನ ಮೇಲೆ ಚಿರತೆ ಏಕಾಎಕಿ ದಾಳಿ ನಡೆಸಿದ್ದು, ಕರುಗಳು ಸಾವನ್ನಪ್ಪಿವೆ. ಅರಣ್ಯ ಅಂಚಿನಲ್ಲಿ ಇರುವ ತೋಟದ ಮನೆಯಾಗಿರುವುದರಿಂದ ಇಲ್ಲಿ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಚಿರತೆ ದಾಳಿ ತಪ್ಪಿಸುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ಕಾರಿನ ಮೇಲೆ ಒಂಟಿ ಸಲಗ ದಾಳಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡ ಗ್ರಾಮದ ಬಳಿ ಓಮ್ನಿ ಕಾರಿನ ಮೇಲೆ ಆನೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಓಮ್ನಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರಡ ಗ್ರಾಮದಲ್ಲಿ ಆನೆ ದಾಳಿಯ ವೇಳೆ ಓಮ್ನಿ ಪಲ್ಟಿಯಾಗಿದ್ದು, ಓಮ್ನಿಯಲ್ಲಿದ್ದ ಐವರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ.
ಓಮ್ನಿ ಕಾರಿಗೆ ಕೊಂಬಿನಿಂದ ಆನೆ ತಿವಿದು ಮಗುಚಿ ಹಾಕಿದ್ದು, ಕಾರಿನೊಳಗೆ ಇದ್ದ ಐವರು ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದಾರೆ. ಇವರ ಬೊಬ್ಬೆ ಕೇಳಿದ ಕಾಡನೆ ಅಲ್ಲಿಂದ ಕಾಲ್ಕಿತ್ತಿದೆ. ಇನ್ನು ಈ ಘಟನೆಯ ಪರಿಣಾಮದಿಂದಾಗಿ ಮಾರುತಿ ಓಮ್ನಿ ಕಾರು ಸಂಪೂರ್ಣ ಜಖಂ ಆಗಿದೆ.
ಇದನ್ನೂ ಓದಿ: Leopard Attack: ತೋಟಕ್ಕೆ ಹೋದವರ ಮೇಲೆ ಚಿರತೆ ದಾಳಿ; ನಾಯಿಯೊಂದಿಗೆ ಲಾಕ್ ಆಗಿದ್ದ ಚಿರತೆಯೇ ಇರಬಹುದೆಂಬ ಅನುಮಾನ
ಇದನ್ನೂ ಓದಿ: ಆನೆ ದಾಳಿ: ಅರಣ್ಯ ಇಲಾಖೆ ಅಧಿಕಾರಿ ಸೇರಿ ಇಬ್ಬರ ಸಾವು.. ಎಲ್ಲಿ?