ಆನೆ ದಾಳಿ: ಅರಣ್ಯ ಇಲಾಖೆ ಅಧಿಕಾರಿ ಸೇರಿ ಇಬ್ಬರ ಸಾವು.. ಎಲ್ಲಿ?

ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಆನೆಗಳ ಸಾವು ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ವನ್ಯ ಪ್ರಾಣಿಗಳ‌ ಮಾಹಿತಿ‌‌ ಸಂಗ್ರಹಿಸಲು ಅರಣ್ಯ ಪ್ರದೇಶಕ್ಕೆ ತೆರಳಿದ್ದಾಗ ಅಧಿಕಾರಿಗಳ ಮೇಲೆ ಆನೆ ದಾಳಿ ನಡೆಸಿದ್ದು ಇಬ್ಬರು ಮೃತಪಟ್ಟಿದ್ದಾರೆ. ಹಾಗೂ ಒಬ್ಬರಿಗೆ ಗಂಭೀರ ಗಾಯಗಳಾಗಿವೆ.

ಆನೆ ದಾಳಿ: ಅರಣ್ಯ ಇಲಾಖೆ ಅಧಿಕಾರಿ ಸೇರಿ ಇಬ್ಬರ ಸಾವು.. ಎಲ್ಲಿ?
ಆನೆ ದಾಳಿಗೆ ಇಬ್ಬರು ಬಲಿ
Follow us
ಆಯೇಷಾ ಬಾನು
|

Updated on: Dec 18, 2020 | 7:47 AM

ಹೈದರಾಬಾದ್: ಆನೆ ದಾಳಿಗೆ ಅರಣ್ಯ ಇಲಾಖೆ ಅಧಿಕಾರಿ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯ ಸಿಂಗಮಲೈ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಆನೆಗಳ ಸಾವು ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ವನ್ಯ ಪ್ರಾಣಿಗಳ‌ ಮಾಹಿತಿ‌‌ ಸಂಗ್ರಹಿಸಲು ಅರಣ್ಯ ಪ್ರದೇಶಕ್ಕೆ ತೆರಳಿದ್ದಾಗ ಅಧಿಕಾರಿಗಳ ಮೇಲೆ ಆನೆ ದಾಳಿ ನಡೆಸಿದೆ. ಈ ವೇಳೆ ಆನೆ ತುಳಿತಕ್ಕೆ ಅರಣ್ಯ ಇಲಾಖೆ ಅಧಿಕಾರಿ ಸತೀಶ್ ಮತ್ತು ಚೇರಪಾಂಡಿಯನ್ ಸೇರಿ ಇಬ್ಬರು ಮೃತಪಟ್ಟಿದ್ದು, ಗಣೇಶ್‌ ಎಂಬ ಮತ್ತೋರ್ವರಿಗೆ ಗಂಭೀರ ಗಾಯಗಳಾಗಿವೆ.

ತೀವ್ರವಾಗಿ ಗಾಯಗೊಂಡ ಗಣೇಶ್​ನನ್ನು ಸತ್ಯಮಂಗಲ‌ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಂಗಮಲೈ ಅರಣ್ಯ ಪ್ರದೇಶದಲ್ಲಿ ಮೃತಪಡುತ್ತಿರುವ ವನ್ಯ ಜೀವಿಗಳ ಮರಣದ ರಹಸ್ಯ ತಿಳಿಯಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅರಣ್ಯ ಇಲಾಖೆಯಲ್ಲಿ ದುಃಖದ ಚಾಯೆ ಆವರಿಸಿದೆ.

ಆಟೋ ಹತ್ತಿದ ಯುವತಿ ಮೇಲೆ ಕಾಮುಕ ಚಾಲಕನಿಂದ ನೀಚ ಕೃತ್ಯ, ಆರೋಪಿ ಬಂಧನ