AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷಾಚರಣೆ ಅಫರ್​! ‘ಶಿವನ ದರ್ಶನ ಮಾಡಿಸುತ್ತೇನೆ’ ಕೈಲಾಸ ದೇಶಕ್ಕೆ ಬರುವಂತೆ ಭಕ್ತರಿಗೆ ನಿತ್ಯಾನಂದನ ಆಹ್ವಾನ..

ಸ್ವಘೋಷಿತ ದೇವಮಾನವ, ಭಾರತದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ನಿತ್ಯಾನಂದ ತನ್ನದೇ ದೇಶ ಕಟ್ಟಿ ವಾಸಿಸುತ್ತಿದ್ದಾನೆ. ಕೈಲಾಸ ಎಲ್ಲಿದೆ, ಅಲ್ಲಿಗೆ ಹೋಗುವುದು ಹೇಗೆ ಅನ್ನೋ ಬಗ್ಗೆ ಭಕ್ತರಿಗೂ ಖುದ್ದಾಗಿ ನಿತ್ಯ ಮಾಹಿತಿ ನೀಡಿದ್ದಾನೆ. ಎಲ್ಲ ಮಾಹಿತಿಯನ್ನು ಖುದ್ದಾಗಿ ಸ್ವಘೋಷಿತ ದೇವಮಾನವ ನಿತ್ಯಾನಂದನೇ ನೀಡಿದ್ದಾನೆ.

ಹೊಸ ವರ್ಷಾಚರಣೆ ಅಫರ್​! 'ಶಿವನ ದರ್ಶನ ಮಾಡಿಸುತ್ತೇನೆ' ಕೈಲಾಸ ದೇಶಕ್ಕೆ ಬರುವಂತೆ ಭಕ್ತರಿಗೆ ನಿತ್ಯಾನಂದನ ಆಹ್ವಾನ..
ನಿತ್ಯಾನಂದ ಸ್ವಾಮಿ
ಆಯೇಷಾ ಬಾನು
|

Updated on:Dec 18, 2020 | 10:44 AM

Share

ಅರೆ ನಿತ್ಯಾನಂದನ ಸದ್ದೇ ಇಲ್ಲ, ಎಲ್ಲಿ ಹೋದನಪ್ಪಾ ಆಸಾಮಿ ಅಂತಾ ಎಲ್ಲರಿಗೂ ಆಶ್ಚರ್ಯ ಆಗ್ತಿರಬಹುದು. ನಿಮ್ಮ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಖುದ್ದು ನಿತ್ಯಾನಂದನೇ ವೀಡಿಯೋ ಮೂಲಕ ತನ್ನ ಭಕ್ತರಿಗೆ ವಿಶೇಷ ಸಂದೇಶ ರವಾನಿಸಿದ್ದಾನೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಈ ಅಫರ್ ಬಂದಿರುವುದು ವಿಶೇಷವಾಗಿದೆ​!

ಸ್ವಘೋಷಿತ ದೇವಮಾನವ ನಿತ್ಯಾನಂದ ತನ್ನ ಕೈಲಾಸ ದೇಶಕ್ಕೆ ಬರುವ ಮಾರ್ಗ ತೋರಿದ್ದಾನೆ. ಇಷ್ಟು ದಿನಗಳ ಕಾಲ ಟ್ರಿನಿಡಾ-ಟೊಬ್ಯಾಗೋ ಬಳಿ ದ್ವೀಪದಲ್ಲಿ ನಿತ್ಯಾನಂದ ಇದ್ದಾನೆ. ಅಲ್ಲೇ ಕೈಲಾಸ ದೇಶವನ್ನ ಸ್ಥಾಪಿಸಿದ್ದಾನೆ ಅಂತಾ ನಂಬಲಾಗಿತ್ತು. ಆದ್ರೆ, ಈಗ ತನ್ನ ಭಕ್ತರಿಗೆ ಸೀದಾ ಆಸ್ಟ್ರೇಲಿಯಾಗೆ ಬನ್ನಿ. ಅಲ್ಲಿಂದ ವಿಮಾನದಲ್ಲಿ ಕೈಲಾಸಕ್ಕೆ ಕರೆದುಕೊಂಡು ಹೋಗ್ತೀವಿ ಅಂತಾ ವಿಡಿಯೋದಲ್ಲಿ ನಿತ್ಯಾನಂದ ಸಂದೇಶ ನೀಡಿದ್ದಾನೆ.

ಶಿವನ ದರ್ಶನ ಮಾಡಿಸುತ್ತೇನೆ ಎಂದ ನಿತ್ಯಾನಂದ! ಸ್ವಘೋಷಿತ ದೇವಮಾನವ, ಭಾರತದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ನಿತ್ಯಾನಂದ ತನ್ನದೇ ದೇಶ ಕಟ್ಟಿ ವಾಸಿಸುತ್ತಿದ್ದಾನೆ. ಕೈಲಾಸ ಎಲ್ಲಿದೆ, ಅಲ್ಲಿಗೆ ಹೋಗುವುದು ಹೇಗೆ ಅನ್ನೋ ಬಗ್ಗೆ ಭಕ್ತರಿಗೂ ಖುದ್ದಾಗಿ ನಿತ್ಯ ಮಾಹಿತಿ ನೀಡಿದ್ದಾನೆ. ಎಲ್ಲ ಮಾಹಿತಿಯನ್ನು ಖುದ್ದಾಗಿ ಸ್ವಘೋಷಿತ ದೇವಮಾನವ ನಿತ್ಯಾನಂದನೇ ನೀಡಿದ್ದಾನೆ.

ವೆಬ್​ಸೈಟ್​ನಲ್ಲಿ ತನ್ನ ದೇಶ ಕೈಲಾಸಕ್ಕೆ ಬರಲು ಇ-ವೀಸಾಕ್ಕೆ ಭಕ್ತರು ಅರ್ಜಿ ಸಲ್ಲಿಸಬಹುದು. ವೀಸಾ ಉಚಿತವಾಗಿ ನೀಡಲಾಗುತ್ತೆ. ಕೈಲಾಸಕ್ಕೆ ಹೋಗಲು ನಿತ್ಯಾನಂದ ಭಕ್ತರು ಸೀದಾ ಆಸ್ಟ್ರೇಲಿಯಾಕ್ಕೆ ಮೊದಲು ಹೋಗಬೇಕು. ಬಳಿಕ ಅಲ್ಲಿಂದ ಗರುಡ ಹೆಸರಿನ ವಿಮಾನದಲ್ಲಿ ಕೈಲಾಸಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ ಅಂತಾ ನಿತ್ಯಾನಂದ ವಿಡಿಯೋ ಸಂದೇಶದಲ್ಲಿ ತನ್ನ ಭಕ್ತರಿಗೆ ಹೇಳಿದ್ದಾನೆ.

ಯಾರೇ ಬಂದರೂ 3 ದಿನ ಮಾತ್ರ ಅವಕಾಶ! ಇನ್ನು ಕೈಲಾಸ ದೇಶದಲ್ಲಿ ಭಕ್ತರು ಹೆಚ್ಚಿನ ದಿನ ಇರುವಂತಿಲ್ಲವಂತೆ. 3 ದಿನ ಮಾತ್ರ ಕೈಲಾಸದಲ್ಲಿರಲು ನಿತ್ಯಾನಂದ ಅವಕಾಶ ಕೊಡ್ತಿದ್ದಾನೆ. 3 ದಿನಕ್ಕಿಂತ ಹೆಚ್ಚಿನ ದಿನಕ್ಕೆ ವೀಸಾ ಕೊಡಲ್ಲವಂತೆ. 3 ದಿನಗಳಲ್ಲಿ ಒಮ್ಮೆ ಮಾತ್ರ ನಿತ್ಯಾನಂದ ದರ್ಶನಕ್ಕೆ ಅವಕಾಶ ಇರುತ್ತೆ. 10 ನಿಮಿಷದಿಂದ 1 ಗಂಟೆಯವರೆಗೆ ಮಾತ್ರ ನಿತ್ಯಾನಂದ ದರ್ಶನಕ್ಕೆ ಅವಕಾಶ ಇರುತ್ತೆ. ಊಟ, ವಸತಿ ವ್ಯವಸ್ಥೆಯನ್ನು ಕೈಲಾಸದಲ್ಲಿ ಬಂದ ಭಕ್ತರಿಗೆ ಉಚಿತವಾಗಿ ನೀಡ್ತೀವಿ ಎಂದಿದ್ದಾನೆ.

ಒಟ್ನಲ್ಲಿ ಇಷ್ಟು ದಿನ ಕಾಣದ ನಿತ್ಯಾನಂದ ಈಗ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಅಲ್ದೆ ತನ್ನ ಭಕ್ತರಿಗೆ ಸ್ಪೆಷಲ್ ಆಫರ್ ಕೂಡ ಕೊಟ್ಟಿದ್ದಾನೆ. ಇದನ್ನೆಲ್ಲಾ ಭಕ್ತರು ಯಾವ ರೀತಿ ಸ್ವಿಕರಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಬೆಂಗಳೂರಿನ ಬಿಡದಿಯಲ್ಲಿ ನನ್ನ ದೇಹ ಸಜೀವ ಸಮಾಧಿಯಾಗಲಿದೆ -ಇದು ನಿತ್ಯಾನಂದನ ಸ್ವಘೋಷಣೆ

Published On - 10:41 am, Fri, 18 December 20