
ಬೆಂಗಳೂರು: ಭಾರತೀಯ ಜನತಾ ಪಕ್ಷವನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತೊಂದಿದೆ; ಭಾ.ಜ.ಪ ಸೇರಿದ ಮಾತ್ರಕ್ಕೆ ಯಾರೂ ಭಾ.ಜ.ಪ ನಾಯಕರಾಗೋಲ್ಲ. ಪಕ್ಷಕ್ಕೆ ತಾಯಿಯಂತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಹತ್ತಿರವಾಗಬೇಕು ಮತ್ತೂ ಅದಕ್ಕೆ ನಿಷ್ಠೆ ತೋರಿಸಬೇಕು. RSS ತತ್ವವನ್ನು ಒಪ್ಪಿಕೊಂಡರೆ ಮಾತ್ರ ಹೊರಗಿನಿಂದ ಬಂದವರನ್ನು ಪಕ್ಷ ಸಂಪೂರ್ಣವಾಗಿ ಸ್ವೀಕರಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಥಟ್ಟನೆ ಯಾರೋ ಹೋಗಿ RSS ಟೋಪಿ ಧರಿಸಿ ಮಾತನಾಡಲು ಸಂಘ ಯಾವಾಗಲೂ ಅವಕಾಶ ನೀಡುವುದಿಲ್ಲ. ಆ ಟೋಪಿ ಧರಿಸಿ ಅಲ್ಲಿ ಮಾತನಾಡಿದರು ಎಂದರೆ ಸಂಪೂರ್ಣವಾಗಿ RSS ಫಿಲಾಸಫಿಯನ್ನು ಒಪ್ಪಿಕೊಂಡಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ.
ಕಟ್ಟಾ ಸಮಾಜವಾದಿಯಾಗಿ ರಾಜಕೀಯ ಪ್ರಾರಂಭಿಸಿದ ಮಾಜಿ ಮುಖ್ಯಮಂತ್ರಿ SM ಕೃಷ್ಣ BJP ಸೇರಿದಾಗಲೇ ಜನರಿಗೆ ಆಶ್ಚರ್ಯವಾಗಿತ್ತು. ಈಗ RSS ಜೊತೆ ತಮ್ಮನ್ನು ಕ್ರಿಯಾತ್ಮಕವಾಗಿ ಗುರುತಿಸಿಕೊಂಡ ಕೃಷ್ಣ, ತಮ್ಮದು ಬರೀ ರಾಜಕೀಯ ಬೂಟಾಟಿಕೆ ಅಲ್ಲ. ತಾನು RSS ತತ್ವವನ್ನು ಒಪ್ಪಿಕೊಂಡು RSS ಜೊತೆಗೂ ನಂಟು ಬೆಳೆಸಬಲ್ಲೆ ಎಂದು ನಿರೂಪಿಸಲು ಹೊರಟಂತಿದೆ. ಮೂಲಗಳ ಪ್ರಕಾರ, ಕೃಷ್ಣ ಈಗಾಗಲೇ ಎರಡು ಅಥವಾ ಮೂರು ಬಾರಿ RSS ಕೇಂದ್ರಸ್ಥಾನವಿರುವ ನಾಗಪುರಕ್ಕೆ ಹೋಗಿ RSS ಮುಖ್ಯಸ್ಥ ಡಾ. ಮೋಹನ ಭಾಗವತರನ್ನು ಭೇಟಿ ಮಾಡಿ ಬಂದಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
Published On - 2:19 pm, Mon, 26 October 20