ಗಣೇಶ ಹಬ್ಬದ ನಂತರ ವಾರಕ್ಕೊಮ್ಮೆ ಜಿಲ್ಲಾ ಪ್ರವಾಸ, ಸಚಿವ ಸಂಪುಟ ರಚನೆಯಲ್ಲಿ ಮಧ್ಯಪ್ರವೇಶಿಸಲ್ಲ: ಮಾಜಿ ಸಿಎಂ ಯಡಿಯೂರಪ್ಪ ಘೋಷಣೆ

| Updated By: guruganesh bhat

Updated on: Jul 29, 2021 | 7:44 PM

BS Yediyurappa: ಸರ್ಕಾರ ಬರಲು ಕಾರಣರಾದ ವಲಸಿಗ ಸಚಿವರನ್ನು ಮುಂದುವರಿಸುವ ಬಗ್ಗೆ ಸಿಎಂ ಜೊತೆ ಮಾತಾಡುತ್ತೇನೆ. ಏನೇ ಇದ್ದರೂ ಸಿಎಂ ಬಳಿ ಹೋಗಿ ಮಾತನಾಡಿ ಅಂತಾ ನಾನು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಗಣೇಶ ಹಬ್ಬದ ನಂತರ ವಾರಕ್ಕೊಮ್ಮೆ ಜಿಲ್ಲಾ ಪ್ರವಾಸ, ಸಚಿವ ಸಂಪುಟ ರಚನೆಯಲ್ಲಿ ಮಧ್ಯಪ್ರವೇಶಿಸಲ್ಲ: ಮಾಜಿ ಸಿಎಂ ಯಡಿಯೂರಪ್ಪ ಘೋಷಣೆ
ಬಿ.ಎಸ್,ಯಡಿಯೂರಪ್ಪ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಗಣೇಶ ಹಬ್ಬದ ಬಳಿಕ ವಾರಕ್ಕೊಮ್ಮೆ ಪ್ರತಿ ಜಿಲ್ಲೆಗೆ ಪ್ರವಾಸ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಘೋಷಿಸಿದ್ದಾರೆ. ಅಧಿಕಾರ, ಸ್ಥಾನಮಾನ ಇಲ್ಲದೆಯೂ ಕೆಲಸ ಮಾಡಬಹುದು ಅಂತಾ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ. ರಾಜ್ಯದಲ್ಲಿ ಪ್ರವಾಸ ಮಾಡಿ ಸಂಘಟನೆ ಬಲಗೊಳಿಸುತ್ತೇನೆ. ನಾಳೆ ಗುಂಡ್ಲುಪೇಟೆಗೆ ಹೋಗಿ ರವಿ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದು ಅವರು ತಿಳಿಸಿದರು.

ಸಂಪುಟ ರಚನೆ ವಿಚಾರ ತೀರ್ಮಾನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರದ್ದು. ನಾನು ಯಾವುದೇ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಜಗದೀಶ್ ಶೆಟ್ಟರ್ ನನ್ನ ಬಳಿ ಬಂದು, ಯುವಕರಿಗೆ ಅವಕಾಶ ಮಾಡಿಕೊಡಬೇಕು ಅದಕ್ಕೆ ಸಂಪುಟ ಸೇರುವುದಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಬರಲು ಕಾರಣರಾದ ವಲಸಿಗ ಸಚಿವರನ್ನು ಮುಂದುವರಿಸುವ ಬಗ್ಗೆ ಸಿಎಂ ಜೊತೆ ಮಾತಾಡುತ್ತೇನೆ. ಏನೇ ಇದ್ದರೂ ಸಿಎಂ ಬಳಿ ಹೋಗಿ ಮಾತನಾಡಿ ಅಂತಾ ನಾನು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: 

Uttara Kannada Flood: ಭೂಕುಸಿತಕ್ಕೊಳಗಾದ ಕಳಚೆ ಗ್ರಾಮದ ಸಂಪೂರ್ಣ ಸ್ಥಳಾಂತರ, ನೊಂದವರಿಗೆ ಶೀಘ್ರ ಪರಿಹಾರ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

ಬಿ.ಎಸ್​.ಯಡಿಯೂರಪ್ಪ ಕೆಳಗಿಳಿದರು ಅದಕ್ಕೆ ಗಡ್ಡ ತೆಗೆದೆ; ಬಸನಗೌಡ ಪಾಟೀಲ್ ಯತ್ನಾಳ್

(Former CM Yediyurappa announces no interference in ministries of CM Basavaraj Bommai cabinet and visit districts after Ganesh Festival )

Published On - 7:19 pm, Thu, 29 July 21