ಹಾಸನದಲ್ಲಿ 30ಕ್ಕೂ ಹೆಚ್ಚು ಮಂಗಗಳನ್ನು ರಾತ್ರೋ ರಾತ್ರಿ ಕೊಂದು ಬಿಸಾಡಿ ಹೋಗಿರುವ ದುರುಳರು

TV9 Digital Desk

| Edited By: shruti hegde

Updated on:Jul 29, 2021 | 6:19 PM

30 ಮಂಗಗಳ ಹತ್ಯೆ ಮಾಡಲಾಗಿದೆ. ಕೆಲವು ಮಂಗಗಳು ಗಂಭೀರ ಸ್ಥಿತಿಯಲ್ಲಿದೆ. ರಾತ್ರೋರಾತ್ರಿ ಕಾರಿನಲ್ಲಿ ತುಂಬಿಕೊಂಡು ರಸ್ತೆಯಲ್ಲಿ ಬಿಸಾಡಿ ಹೋಗಿರುವ ಮಾಹಿತಿ ತಿಳಿದು ಬಂದಿದೆ.

ಹಾಸನದಲ್ಲಿ 30ಕ್ಕೂ ಹೆಚ್ಚು ಮಂಗಗಳನ್ನು ರಾತ್ರೋ ರಾತ್ರಿ ಕೊಂದು ಬಿಸಾಡಿ ಹೋಗಿರುವ ದುರುಳರು
ಮೂಕ ಪ್ರಾಣಿಗಳ ಮಾರಣ ಹೋಮ

ಹಾಸನ: ಮಾನವರಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕನಿಷ್ಠ ವಿವೇಚನೆಯನ್ನೂ ಮರೆತು ಮೂಕ ಜೀವಿಗಳನ್ನು ಜನರು ಕೊಲ್ಲುತ್ತಿದ್ದಾರೆ, ಕ್ರೂರವಾಗಿ ವರ್ತಿಸುತ್ತಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ  30ಕ್ಕೂ ಹೆಚ್ಚು ಮಂಗಗಳನ್ನು ಕೊಂದು ಚೀಲದಲ್ಲಿ ತುಂಬಿ ರಸ್ತೆಯಲ್ಲಿ ಬಿಸಾಡಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಚೌಡನಹಳ್ಳಿ ನಡೆದಿದೆ.

ಸ್ಥಳೀಯರು ರಾತ್ರಿ 10 ಗಂಟೆ ಸಮಯದಲ್ಲಿ ಓಡಾಡುತ್ತಿರುವಾಗ ರಸ್ತೆಯ ಪಕ್ಕದಲ್ಲಿ ದೊಡ್ಡದಾದ ಚೀಲವೊಂದು ಬಿದ್ದಿರುವುದು ಗಮನಕ್ಕೆ ಬಂದಿದೆ. ಪ್ರಾಣಿಗಳ ಕಿರುಚಾಟವೂ ಕೇಳತೊಡಗಿದೆ. ತಡಮಾಡದೆ ಚೀಲದ ಗಂಟು ಬಿಚ್ಚಿ ನೋಡುವಷ್ಟರಲ್ಲಿ 30ಕ್ಕೂ ಹೆಚ್ಚು ಮಂಗಗಳು ಬಲಿಯಾಗಿದ್ದವು. ಇನ್ನು ಕೆಲವು ಗಂಭೀರ ಸ್ಥಿತಿಯಲ್ಲಿದ್ದು ಕಿರುಚಾಡುತ್ತಿದ್ದವು. 15 ಕ್ಕೂ ಹೆಚ್ಚು ಕೋತಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು. 30 ಮಂಗಗಳ ಹತ್ಯೆ ಮಾಡಲಾಗಿದೆ. ಕೆಲವು ಮಂಗಗಳು ಗಂಭೀರ ಸ್ಥಿತಿಯಲ್ಲಿದೆ. ರಾತ್ರೋರಾತ್ರಿ ಕಾರಿನಲ್ಲಿ ತುಂಬಿಕೊಂಡು ರಸ್ತೆಯಲ್ಲಿ ಬಿಸಾಡಿ ಹೋಗಿರುವ ಮಾಹಿತಿ ತಿಳಿದು ಬಂದಿದೆ.

ತಕ್ಷಣವೇ ಸ್ಥಳಿಯರು ಅರಣ್ಯ ಇಲಾಖೆ, ಪೊಲೀಸ್ ಹಾಗೂ ಪಶು ವೈದ್ಯರಿಗೆ ಕರೆಮಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಒದ್ದಾಡುತ್ತಿರುವ ಮಂಗಗಳಿಗೆ ಸ್ಥಳೀಯರು ಆರೈಕೆ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ವಿಷಪ್ರಾಶಾನ ಮಾಡಿ ಮಂಗಗಳನ್ನು ಹತ್ಯೆ ಮಾಡಲಾಗಿದೆ ಹಾಗೂ ಬೇರೊಂದು ಪ್ರದೇಶದಿಂದ ತಂದು ರಸ್ತೆಯ ಬದಿಯಲ್ಲಿ ಬಿಸಾಡಿರುವ ಶಂಕೆ ಮೂಡಿದೆ. ಈ ಘಟನೆಯನ್ನು ನಟ ರಣದೀಪ್​ ಹೂಡಾ ಸಹ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಮಂಗನಿಂದ ಮಾನವನೆಂಬ ಅಂಶವನ್ನು ಈ ತಾಯಿ ಮಂಗ ಅಕ್ಷರಶಃ ಸಾಬೀತು ಮಾಡುತ್ತಿದೆ! ವಿಡಿಯೋವನ್ನೊಮ್ಮೆ ನೋಡಿ

Viral Video: ಪ್ರವಾಸಿ ತಾಣದ ನಡುರಸ್ತೆಯೊಂದರಲ್ಲಿ ಮಂಗಗಳ ಗ್ಯಾಂಗ್ ವಾರ್; ಆಹಾರದ ಕೊರತೆ ಕಾರಣವಿರಬಹುದೆಂದ ತಜ್ಞರು!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada