ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪೊಲೀಸ್ ಆಯುಕ್ತ ಪಿ.ಜಿ ಹಲರನ್ಕರ್ (88) ವಿಕ್ರಮ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 10.15 ಕ್ಕೆ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ನಗರ ಕಮಿಷನರ್ ಮತ್ತುಸಿಆರ್‌ಪಿಎಫ್‌ನ ಡಿಜಿಪಿಯಾಗಿ ಸೇವಸಲ್ಲಿಸಿದ್ದ ಪಿ.ಜಿ. ಹಲರನ್ಕರ್ ಅನಾರೋಗ್ಯ ಹಿನ್ನೆಲೆಯಲ್ಲಿ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ರು.
ನಿನ್ನೆ ರಾತ್ರಿ 10.15ರ ಸಮಯಕ್ಕೆ ವಿಧಿವಶರಾಗಿದ್ದಾರೆ. ಪಿ.ಜಿ ಹಲರನ್ಕರ್ ತಾವು ಸತ್ತ ಮೇಲೆ ತಮ್ಮ ಮೃತದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಬೇಕೆಂಬ ಇಚ್ಛೆ ಹೊಂದಿದ್ದರು. ಸೇಂಟ್ ಜಾನ್ಸ್ ಆಸ್ಪತ್ರೆಗೆ ಮೃತದೇಹ ಸ್ಥಳಾಂತರಿಸಲಾಗಿದ್ದು ದೇಹವನ್ನು ಶವಾಗಾರದಲ್ಲಿ ಇಡಲಾಗಿದೆ. ಹಾಗೂ ಪಿ.ಜಿ ಹಲರನ್ಕರ್ ಅವರ ದೇಹವನ್ನು ದಾನ ನೀಡುವ ಪ್ರಕ್ರಿಯೆ ಸೋಮವಾರ ಕುಟುಂಬಸ್ಥರು ಹಾಗೂ ವೈದ್ಯಕೀಯ ಸಿಬ್ಬಂದಿ ಸಮ್ಮುಖದಲ್ಲಿ ನಡೆಯಲಿದೆ.
Delhi Chalo ಸಿಂಘು ಗಡಿ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ಸೋಂಕು
Published On - 10:50 am, Sun, 3 January 21