ಮೈಸೂರಿನ ಲಾಡ್ಜ್​ನಲ್ಲಿ ಉದ್ಯಮಿ ನಿಗೂಢ ಸಾವು: ಪತಿ ಜೊತೆಗಿದ್ದ ಪತ್ನಿ ನಾಪತ್ತೆ

 ಉದ್ಯಮಿ ಉಮಾಶಂಕರ್ ಬಹಳಷ್ಟು ಸಾಲ ಮಾಡಿಕೊಂಡಿದ್ದರು . ಕೆಲವರು ಸಾಲದ ಹಣ ಮರುಪಾವತಿ ಮಾಡುವಂತೆ ಪೀಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದು ದಂಪತಿ ಸಹಿ ಹಾಕಿರುವ ಪತ್ರ ಪತ್ತೆಯಾಗಿದೆ.

ಮೈಸೂರಿನ ಲಾಡ್ಜ್​ನಲ್ಲಿ ಉದ್ಯಮಿ ನಿಗೂಢ ಸಾವು: ಪತಿ ಜೊತೆಗಿದ್ದ ಪತ್ನಿ ನಾಪತ್ತೆ
ಪ್ರಾತಿನಿಧಿಕ ಚಿತ್ರ
Follow us
preethi shettigar
| Updated By: ರಶ್ಮಿ ಕಲ್ಲಕಟ್ಟ

Updated on: Jan 03, 2021 | 11:09 AM

ಮೈಸೂರು: ಲಾಡ್ಜ್‌ನಲ್ಲಿ ಬೆಂಗಳೂರಿನ ಉದ್ಯಮಿಯೊಬ್ಬರು ನಿಗೂಢವಾಗಿ ಸಾವಿಗೀಡಾದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಗೊಂದಲ ಸೃಷ್ಟಿಯಾಗಿದೆ.

ಮೈಸೂರಿನ ಲಾಡ್ಜ್‌ನಲ್ಲಿ ಉಮಾಶಂಕರ್(45) ಅನುಮಾನಾಸ್ಪದ ಸಾವನ್ನಪ್ಪಿದ್ದು, ಆತನ ಜೊತೆಯಲ್ಲಿ ಬಂದಿದ್ದ ಪತ್ನಿ ಕವಿತಾ ನಾಪತ್ತೆಯಾಗಿದ್ದಾರೆ. ಉಮಾಶಂಕರ್ ಮತ್ತು ಕವಿತಾ ಇದ್ದ ಕೊಠಡಿಯಲ್ಲಿ ಇನ್ಸುಲಿನ್, ಔಷಧ ಬಾಟಲ್, ಪತಿ-ಪತ್ನಿ ಸಹಿ ಮಾಡಿರುವ ಪತ್ರ ಪತ್ತೆಯಾಗಿದ್ದು, ಅತಿಯಾದ ಇನ್ಸುಲಿನ್‌ನಿಂದ ಉಮಾಶಂಕರ್ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಉದ್ಯಮಿ ಉಮಾಶಂಕರ್ ಬಹಳಷ್ಟು ಸಾಲ ಮಾಡಿಕೊಂಡಿದ್ದರು . ಕೆಲವರು ಸಾಲದ ಹಣ ಮರುಪಾವತಿ ಮಾಡುವಂತೆ ಪೀಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದು ದಂಪತಿ ಸಹಿ ಮಾಡಿದ್ದಾರೆ.  ಉಮಾಶಂಕರ್ ಪತ್ನಿ  ಕವಿತಾ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IAS ಅಧಿಕಾರಿ ಆತ್ಮಹತ್ಯೆ, ರಾಜಕಾರಣಿಗಳ ಕಡೆ ಬೊಟ್ಟು ಮಾಡಿದ ಮಾಜಿ IPS ಅಧಿಕಾರಿ