IAS ಅಧಿಕಾರಿ ದಿವಂಗತ ಡಿ.ಕೆ.ರವಿ ತಂದೆ ಕರಿಯಪ್ಪ ವಿಧಿವಶ

|

Updated on: Mar 08, 2021 | 10:44 PM

IAS ಅಧಿಕಾರಿ ದಿ. ಡಿ.ಕೆ.ರವಿ ತಂದೆ ಕರಿಯಪ್ಪ ವಿಧಿವಶರಾಗಿದ್ದಾರೆ. 70 ವರ್ಷದ ಕರಿಯಪ್ಪ ಹೃದಯಾಘಾತದಿಂದ ನಿಧನರಾಗಿದ್ದಾರೆ.

IAS ಅಧಿಕಾರಿ ದಿವಂಗತ ಡಿ.ಕೆ.ರವಿ ತಂದೆ ಕರಿಯಪ್ಪ ವಿಧಿವಶ
IAS ಅಧಿಕಾರಿ ದಿ. ಡಿ.ಕೆ.ರವಿ ತಂದೆ ಕರಿಯಪ್ಪ ವಿಧಿವಶ
Follow us on

ತುಮಕೂರು: IAS ಅಧಿಕಾರಿ ದಿ. ಡಿ.ಕೆ.ರವಿ ತಂದೆ ಕರಿಯಪ್ಪ ವಿಧಿವಶರಾಗಿದ್ದಾರೆ. 70 ವರ್ಷದ ಕರಿಯಪ್ಪ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಕ್ತದೊತ್ತಡ ಕಡಿಮೆಯಾಗಿ ಕರಿಯಪ್ಪ ಕುಸಿದು ಬಿದ್ದಿದ್ದರು. ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದ ಮನೆಯಲ್ಲಿ ಕುಸಿದು ಬಿದ್ದಿದ್ದರು.

ಈ ವೇಳೆ, ಕರಿಯಪ್ಪ ಅವರನ್ನು ಹುಲಿಯೂರುದುರ್ಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ತಾಲೂಕು ಆಸ್ಪತ್ರೆಯಲ್ಲಿ ಕರಿಯಪ್ಪ ನಿಧನರಾಗಿದ್ದಾರೆ.

ಇದನ್ನೂ  ಓದಿ: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಖಾಕಿ ದಾಳಿ