Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1. ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ಗಾತ್ರ ಎಷ್ಟು ವಿಧಾನಸಭೆಯಲ್ಲಿ ಸೋಮವಾರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಿದರು. ಕಳೆದ ವರ್ಷದಂತೆ ಈ ವರ್ಷವೂ ಅನುದಾನ ಹಂಚಿಕೆಯನ್ನು ವಲಯವಾರು ವಿಂಗಡಿಸಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ. Link: Karnataka Budget 2021: ಯಡಿಯೂರಪ್ಪ ಮಂಡಿಸಿದ ಕರ್ನಾಟಕ ಬಜೆಟ್ ಗಾತ್ರ ₹ 2.46 ಲಕ್ಷ ಕೋಟಿ, ಬಂಡವಾಳ ವೆಚ್ಚ ಕೇವಲ ₹ 44 ಸಾವಿರ ಕೋಟಿ
2. ಇಂದಿನ ಬಜೆಟ್ನಲ್ಲಿ ಮಹಿಳೆಯರಿಗಿದೆ ಹಲವು ಕೊಡುಗೆ ಇಂದು ಮಂಡನೆಯಾದ ಬಜೆಟ್ನಲ್ಲಿ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ಸಿಎಂ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಮಹಿಳಾ ಸರ್ಕಾರಿ ನೌಕರರಿಗೆ ಆರು ತಿಂಗಳ ಮಕ್ಕಳ ಆರೈಕೆ ರಜೆ ಸಿಗಲಿದೆ. Link: Karnataka Budget 2021 Highlights: ಮಹಿಳಾ ಸರ್ಕಾರಿ ನೌಕರರಿಗೆ 6 ತಿಂಗಳು ಮಕ್ಕಳ ಆರೈಕೆ ರಜೆ; ಬಜೆಟ್ನಲ್ಲಿ ಮಹಿಳೆಯರಿಗಿದೆ ಹಲವು ಕೊಡುಗೆಗಳು
3. ಮಹಿಳೆಯರಿಗೆ ಗೂಗಲ್ ಡೂಡಲ್ ವಿಶೇಷ ಗೌರವ ಎಲ್ಲ ಕ್ಷೇತ್ರಗಳ ಮೊದಲುಗಳು ಇಂದು ಅಸಂಖ್ಯಾತ ಮಹಿಳೆಯ ಸಾಧನೆಗೆ ಬುನಾದಿಯಾಗಿವೆ. ಅದೆಷ್ಟೋ ವಿಭಾಗಗಳಲ್ಲಿ ಮಹಿಳೆಯರ ಪಾಲಿಗೆ ಗಾಜಿನ ಬಾಗಿಲುಗಳಿದ್ದವು. ಅಲ್ಲಿ ಮೊದಲು ಪ್ರವೇಶಿಸಿದ ಮಹಿಳೆಯರು ಆ ಗಾಜನ್ನು ಒಡೆದಿದ್ದಾರೆ. ಅದೆಷ್ಟೋ ಕ್ಷೇತ್ರಗಳ ಬಾಗಿಲನ್ನು ತೆರೆದ ಪ್ರಥಮ ಸಾಧಕಿಯರಿಗೆ ಗೂಗಲ್ ಡೂಡಲ್ ವಿಶೇಷ ಗೌರವ ಸಲ್ಲಿಸಿದೆ. Link: International Women’s Day 2021: ಅದೆಷ್ಟೋ ಕ್ಷೇತ್ರಗಳ ಬಾಗಿಲನ್ನು ತೆರೆದ ಪ್ರಥಮ ಸಾಧಕಿಯರಿಗೆ ಗೂಗಲ್ ಡೂಡಲ್ ವಿಶೇಷ ಗೌರವ
4. ದೃಷ್ಟಿಹೀನತೆ ಒಂದು ವೈಕಲ್ಯವೇ ಅಲ್ಲ.. ನಿಂದನೆಗಳಿಗೆಲ್ಲ ಸಾಧನೆಯ ಮೂಲಕವೇ ಉತ್ತರ ಕೊಟ್ಟ ಛಲಗಾರ್ತಿ ಈ ರಕ್ಷಿತಾ ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡು, ನೆರೆಹೊರೆಯವರ, ಸಂಬಂಧಿಕರಿಂದ ನಿಂದನೆಯ ಮಾತುಗಳನ್ನೆಲ್ಲ ಕೇಳುತ್ತ, ದೃಷ್ಟಿಹೀನತೆ ಒಂದು ವೈಕಲ್ಯವೇ ಅಲ್ಲ ಎಂದು ದಿಟ್ಟತನದಿಂದ ಬೆಳೆದ ಚಿಕ್ಕಮಗಳೂರಿನ ಈ ಕುವರಿ ಯಶಸ್ಸಿನ ಮೆಟ್ಟಿಲುಗಳನ್ನೇರುತ್ತಿದ್ದಾಳೆ.. Link: Women’s Day Special: ನಿಂದನೆಗಳಿಗೆಲ್ಲ ಸಾಧನೆಯ ಮೂಲಕವೇ ಉತ್ತರ ಕೊಟ್ಟ ಛಲಗಾರ್ತಿ ಈ ರಕ್ಷಿತಾ; ದೃಷ್ಟಿಹೀನತೆ ಒಂದು ವೈಕಲ್ಯವೇ ಅಲ್ಲವೆಂದು ತೋರಿಸಿದಾಕೆ
5. ಋತುಚಕ್ರ ಸಮಸ್ಯೆ ನಿವಾರಣೆಗೆ ಈ 5 ಯೋಗಾಸನಗಳು ಸಹಕಾರಿ ಮಹಿಳೆಯರು ಅನುಭವಿಸುವ ಋತುಚಕ್ರದ ಸಮಸ್ಯೆಯಿಂದ ಹೊರಬರಲು ಸಹಾಯವಾಗುವ ಐದು ಯೋಗಾಸನಗಳ ಪಟ್ಟಿ ಇಲ್ಲಿದೆ. ಈ ಯೋಗಾಸನಗಳನ್ನು ಮಾಡುವುದರಿಂದ ಋತುಚಕ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. Link: ಋತುಚಕ್ರ ಸಮಸ್ಯೆಯಿಂದ ಹೊರಬರಲು ಈ 5 ಯೋಗಾಸನಗಳು ಸಹಕಾರಿ
6. ಬಿಗ್ ಬಾಸ್ನಲ್ಲಿ ನಿರ್ಮಲಾಳ ವಿಚಿತ್ರ ವರ್ತನೆಗೆ ಪತಿ ಕೊಟ್ಟ ಕಾರಣ ಏನು? ಬಿಗ್ ಬಾಸ್ ಮನೆಯಲ್ಲಿ ಇರುವ ಇತರೆ ಎಲ್ಲ ಸ್ಪರ್ಧಿಗಳಿಗಿಂತಲೂ ನಿರ್ಮಲಾ ಚೆನ್ನಪ್ಪ ಡಿಫರೆಂಟ್ ಆಗಿ ವರ್ತಿಸುತ್ತಿದ್ದಾರೆ. ಅವರು ಒಬ್ಬರೇ ಮಾತನಾಡಿಕೊಳ್ಳುವುದು ಏಕೆ ಎಂಬುದಕ್ಕೆ ಅವರ ಪತಿ ಕಾರಣ ತಿಳಿಸಿದ್ದಾರೆ. Link: Bigg Boss Kannada: ಬಿಗ್ ಬಾಸ್ನಲ್ಲಿ ನಿರ್ಮಲಾ ಚೆನ್ನಪ್ಪ ವಿಚಿತ್ರ ವರ್ತನೆಗೆ ಕಾರಣ ತಿಳಿಸಿದ ಪತಿ ಸರ್ದಾರ್ ಸತ್ಯ!
7.ಅಮ್ಮನ ಮಾತು ಕೇಳಿ ವೇದಿಕೆ ಮೇಲೆ ಅತ್ತ ‘ಕನ್ನಡತಿ’ ಹೀರೋ ಕಿರಣ್ ರಾಜ್! ಕಲರ್ಸ್ ಕನ್ನಡ ವಾಹಿನಿಯ ‘ಕನ್ನಡತಿ’ ಸೀರಿಯಲ್ ಮೂಲಕ ಭಾರೀ ಜನಪ್ರಿಯತೆ ಗಳಿಸಿರುವ ನಟ ಕಿರಣ್ ರಾಜ್ ಇತ್ತೀಚೆಗೆ ನಡೆದ ‘ಮಜಾಭಾರತ’ ಕಾರ್ಯಕ್ರಮದ ವೇದಿಕೆಗೆ ‘ಕನ್ನಡತಿ’ ತಂಡ ಬಂದಿತ್ತು. ಈ ವೇಳೆ ಕಿರಣ್ ರಾಜ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. Link: ಅಮ್ಮನ ಮಾತು ಕೇಳಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ‘ಕನ್ನಡತಿ’ ಹೀರೋ ಕಿರಣ್ ರಾಜ್!
8. IPL 2021ನಮ್ಮ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ..! ಏಪ್ರಿಲ್ 9ರಿಂದ ಐಪಿಎಲ್ ಟೂರ್ನಿ 14ನೇ ಆವೃತ್ತಿ ಆರಂಭವಾಗಲಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಅಧಿಕೃತ ಘೋಷಣೆ ಮಾಡಿದೆ. Link: IPL 2021: ಆರ್ಸಿಬಿಗೆ ಮೊದಲ ಎದುರಾಳಿ ಮುಂಬೈ.. ಹೀಗಿದೆ ನೋಡಿ ನಮ್ಮ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ..!
9. ನಾನೆಂಬ ಪರಿಮಳದ ಹಾದಿಯಲಿ ಸುಮನ್ ಕಿತ್ತೂರ್ ಒಳಗಿರುವ ಜೀವಚೈತನ್ಯಕ್ಕೆ ಲಿಂಗಬೇಧವುಂಟೆ?; ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿ ಇದೀಗ ನಿಮ್ಮೆಲ್ಲರ ಆಪ್ತ ಒಳಗೊಳ್ಳುವಿಕೆಯಿಂದಾಗಿ ರೂಪಾಂತರದ ಹಂತಕ್ಕೆ ಬಂದು ನಿಂತಿದೆ. ಈ ಸರಣಿಯಲಿಂದು ಕಿರಿಗೂರಿನ ಗಯ್ಯಾಳಿಗಳು ಖ್ಯಾತಿಯ ಸುಮನ್ ಕಿತ್ತೂರ್ ನಿಮ್ಮ ಮುಂದೆ Link: Woman Director; ನಾನೆಂಬ ಪರಿಮಳದ ಹಾದಿಯಲಿ: ಸ್ಕ್ರಿಪ್ಟ್ ರೆಡಿಯಾಗ್ತಿದೆ ‘ಕಾವೇರಿ 24/7‘
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.
Published On - 6:57 pm, Mon, 8 March 21