IPL 2021: ಆರ್ಸಿಬಿಗೆ ಮೊದಲ ಎದುರಾಳಿ ಮುಂಬೈ.. ಹೀಗಿದೆ ನೋಡಿ ನಮ್ಮ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ..!
IPL 2021: ಏಪ್ರಿಲ್ 9 ರಂದು ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ತಂಡ ಹಾಲಿ ಚಾಂಪಿಯನ್ಸ್ ಮುಂಬೈ ತಂಡ ಎದುರಿಸಲಿದೆ. ಲೀಗ್ ಹಂತದಲ್ಲಿ ಆರ್ಸಿಬಿ 14 ಪಂದ್ಯವನ್ನು ಆಡಲಿದ್ದು, ಬಹುತೇಕ ಪಂದ್ಯಗಳು ಸಂಜೆ ಆರಂಭವಾಗಲಿದೆ.
ಬೆಂಗಳೂರು: ಏಪ್ರಿಲ್ 9ರಿಂದ ಐಪಿಎಲ್ ಟೂರ್ನಿ 14ನೇ ಆವೃತ್ತಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಆರ್ಸಿಬಿಗೆ ಹಾಲಿ ಚಾಂಪಿಯನ್ಸ್ ಮುಂಬೈ ಬಾಯ್ಸ್ ಸವಾಲ್ ಎದುರಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಅಧಿಕೃತ ಘೋಷಣೆ ಮಾಡಿದೆ. ಏಪ್ರಿಲ್ 9ರಿಂದ ಐಪಿಎಲ್ 14ನೇ ಆವೃತ್ತಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿಗೆ-ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಉದ್ಘಾಟನಾ ಪಂದ್ಯ ಮುಂಬೈ Vs ಆರ್ಸಿಬಿ ಏಪ್ರಿಲ್ 9 ರಂದು ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ತಂಡ ಹಾಲಿ ಚಾಂಪಿಯನ್ಸ್ ಮುಂಬೈ ತಂಡ ಎದುರಿಸಲಿದೆ. ಲೀಗ್ ಹಂತದಲ್ಲಿ ಆರ್ಸಿಬಿ 14 ಪಂದ್ಯವನ್ನು ಆಡಲಿದ್ದು, ಬಹುತೇಕ ಪಂದ್ಯಗಳು ಸಂಜೆ ಆರಂಭವಾಗಲಿದೆ. ಭಾನುವಾರ ನಡೆಯುವ 3 ಪಂದ್ಯಗಳು ಮಾತ್ರ ಮಧ್ಯಾಹ್ನ ನಡೆಯಲಿವೆ.
ಆರ್ಸಿಬಿ ಆಟ ತವರಿನಲ್ಲಿ 5 ಪಂದ್ಯವನ್ನು ಎದುರಿಸಲಿರುವ ಆರ್ಸಿಬಿ ತಂಡ ಹೊರ ರಾಜ್ಯದಲ್ಲಿ 9 ಪಂದ್ಯ ಆಡಲಿದೆ.
6 ನಗರದಲ್ಲಿ ಟೂರ್ನಿ ಆಯೋಜನೆ.. ಈ ಹಿಂದಿನ ಆವೃತ್ತಿಗಿಂತಲೂ ಈ ಬಾರಿಯ ಟೂರ್ನಿ ವಿಭಿನ್ನವಾಗಿರಲಿದೆ. ಈ ಬಾರಿಯ ಟೂರ್ನಿಗೆ ಒಟ್ಟು 6 ನಗರಗಳು ಆತಿಥ್ಯ ವಹಿಸಲಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಪಂದ್ಯಗಳು ನಡೆಯಲಿವೆ.
ಪ್ಲೇ ಆಫ್, ಫೈನಲ್ ಎಲ್ಲಿ? ಈ ಬಾರಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳಿಗೆ ಗುಜರಾತ್ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯಗಳು ಈ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದೆ. ಫೈನಲ್ ಪಂದ್ಯ ಮೇ 30 ಭಾನುವಾರದಂದು ನಡೆಯಲಿದೆ.
ಆರ್ಸಿಬಿ ಸಂಪೂರ್ಣ ತಂಡ ಐಪಿಎಲ್ 2021ರ ಆರ್ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಜೋಶ್ ಫಿಲಿಪೆ, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ಆಡಂ ಝಂಪಾ, ಕೇನ್ ರಿಚರ್ಡ್ಸನ್, ಗ್ಲೆನ್ ಮ್ಯಾಕ್ಸ್ ವೆಲ್, ಕೈಲ್ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್.
ನಮ್ಮ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ..
ದಿನಾಂಕ | ಮುಖಾಮುಖಿ | ಸ್ಥಳ | ಸಮಯ |
ಏಪ್ರಿಲ್ 9 | ಆರ್‌ಸಿಬಿ vs ಮುಂಬೈ ಇಂಡಿಯನ್ಸ್ | ಚೆನ್ನೈ | ಸಂಜೆ 7.30 |
ಏಪ್ರಿಲ್ 14 | ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ | ಚೆನ್ನೈ | ಸಂಜೆ 7.30 |
ಏಪ್ರಿಲ್ 18 | ಆರ್‌ಸಿಬಿ vs ಕೊಲ್ಕತ್ತಾ ನೈಟ್ ರೈಡರ್ಸ್ | ಚೆನ್ನೈ | ಮಧ್ಯಾಹ್ನ 3.30 |
ಏಪ್ರಿಲ್ 22 | ಆರ್‌ಸಿಬಿ vs ರಾಜಸ್ಥಾನ್ ರಾಯಲ್ಸ್ | ಮುಂಬೈ | ಸಂಜೆ 7.30 |
ಏಪ್ರಿಲ್ 25 | ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ | ಮುಂಬೈ | ಮಧ್ಯಾಹ್ನ 3.30 |
ಏಪ್ರಿಲ್ 27 | ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ | ಅಹಮದಾಬಾದ್ | ಸಂಜೆ 7.30 |
ಏಪ್ರಿಲ್ 30 | ಆರ್‌ಸಿಬಿ vs ಪಂಜಾಬ್ ಕಿಂಗ್ಸ್ | ಅಹಮದಾಬಾದ್ | ಸಂಜೆ 7.30 |
ಮೇ 3 | ಆರ್‌ಸಿಬಿ vs ಕೊಲ್ಕತ್ತಾ ನೈಟ್ ರೈಡರ್ಸ್ | ಅಹಮದಾಬಾದ್ | ಸಂಜೆ 7.30 |
ಮೇ 6 | ಆರ್‌ಸಿಬಿ vs ಪಂಜಾಬ್ ಕಿಂಗ್ಸ್ | ಅಹಮದಾಬಾದ್ | ಸಂಜೆ 7.30 |
ಮೇ 9 | ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ | ಕೋಲ್ಕತಾ | ಸಂಜೆ 7.30 |
ಮೇ 14 | ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ | ಕೋಲ್ಕತಾ | ಸಂಜೆ 7.30 |
ಮೇ 16 | ಆರ್‌ಸಿಬಿ vs ರಾಜಸ್ಥಾನ್ ರಾಯಲ್ಸ್ | ಕೋಲ್ಕತಾ | ಮಧ್ಯಾಹ್ನ 3.30 |
ಮೇ 20 | ಆರ್‌ಸಿಬಿ vs ಮುಂಬೈ ಇಂಡಿಯನ್ಸ್ | ಕೋಲ್ಕತಾ | ಸಂಜೆ 7.30 |
ಮೇ 23 | ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ | ಕೋಲ್ಕತಾ | ಸಂಜೆ 7.30 |
Published On - 12:20 pm, Mon, 8 March 21