‘ಮಹಿಳೆಯರನ್ನ ರಕ್ಷಿಸ್ತೀವಿ ಅಂತಾ ಪ್ರಮಾಣ ಮಾಡಿದವ್ರು.. ಆಕೆಗೆ ಮುಟ್ಟಬಾರ್ದ ಜಾಗದಲ್ಲಿ ಕಿರುಕುಳ ನೀಡಿದ್ರು’

‘ಮಹಿಳೆಯರನ್ನ ರಕ್ಷಿಸ್ತೀವಿ ಅಂತಾ ಪ್ರಮಾಣ ಮಾಡಿದವ್ರು.. ಆಕೆಗೆ ಮುಟ್ಟಬಾರ್ದ ಜಾಗದಲ್ಲಿ ಕಿರುಕುಳ ನೀಡಿದ್ರು’
ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣ (ಎಡ); ಉಮಾಶ್ರೀ (ಬಲ)

ಸಿದ್ದು ಸವದಿ ಚಾಂದಿನಿಯನ್ನು ರಕ್ಷಣೆ ಮಾಡಲು ಹೋಗಿದ್ದೆ ಅಂತಾರೆ. ಆದರೆ, ಆಕೆಗೆ ಮುಟ್ಟಬಾರದ ಜಾಗದಲ್ಲೂ ಕಿರುಕುಳ ನೀಡಿದ್ದಾರೆ. ಇವತ್ತು, ಆ ಮಾನಸಿಕ ಹಾಗೂ ದೈಹಿಕ ಹಿಂಸೆಯ ಪರಿಣಾಮವಾಗಿ ಚಾಂದಿನಿಗೆ ಗರ್ಭಪಾತವಾಗಿದೆ ಎಂದು ಉಮಾಶ್ರೀ ಕಿಡಿಕಾರಿದರು.

KUSHAL V

|

Nov 30, 2020 | 7:05 PM

ಬೆಂಗಳೂರು: ಮಹಿಳೆಯರನ್ನ ರಕ್ಷಿಸ್ತೀವಿ ಅಂತಾ ಪ್ರಮಾಣ ಮಾಡಿದವರು ಇಂದು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಬಿಜೆಪಿ ಶಾಸಕ ಸಿದ್ದು ಸವದಿ ಇತರ ಪುರುಷರ ಜೊತೆ ಸೇರಿ ಮಾಡಿದ ಕೃತ್ಯ ಅಕ್ಷರಶಃ ದೌರ್ಜನ್ಯ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಉಮಾಶ್ರೀ ನಾವು ಯಾವ ರಾಜ್ಯದಲ್ಲಿ ಇದ್ದೀವಿ? ಮಹಿಳೆಯನ್ನ ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿರುವ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದು ಅಪರಾಧ. ಸಿದ್ದು ಸವದಿ ಚಾಂದಿನಿಯನ್ನು ರಕ್ಷಣೆ ಮಾಡಲು ಹೋಗಿದ್ದೆ ಅಂತಾರೆ. ಆದರೆ, ಆಕೆಗೆ ಮುಟ್ಟಬಾರದ ಜಾಗದಲ್ಲೂ ಕಿರುಕುಳ ನೀಡಿದ್ದಾರೆ. ಇವತ್ತು, ಆ ಮಾನಸಿಕ ಹಾಗೂ ದೈಹಿಕ ಹಿಂಸೆಯ ಪರಿಣಾಮವಾಗಿ ಚಾಂದಿನಿಗೆ ಗರ್ಭಪಾತವಾಗಿದೆ ಎಂದು ಉಮಾಶ್ರೀ ಕಿಡಿಕಾರಿದರು.

ಗರ್ಭಪಾತ ಆಗಿರೋದು ಕೊಲೆಗೆ ಸಮಾನ. ಆದರೆ, ಸರ್ಕಾರ ಮಾತ್ರ ಏನೂ ಮಾಡ್ತಿಲ್ಲ. ಸಿಎಂಗೆ ಕಿವಿ ಇಲ್ಲ, ಕಣ್ಣೂ ಇಲ್ಲ, ಬಾಯಿಯೂ ಇಲ್ಲ ಎಂಬುವಂತೆ ಇದ್ದಾರೆ. ಸರ್ಕಾರ ಅಪರಾಧಿಗಳನ್ನ ರಕ್ಷಣೆ ಮಾಡ್ತಾ ಇದೆ. ಸಿದ್ದು ಸವದಿಯನ್ನು ಬಿಜೆಪಿ ಪಕ್ಷದಿಂದ ಹೊರಗಿಡಬೇಕು. ಇಂತಹ ನೀಚ ಶಾಸಕರನ್ನ ಸರ್ಕಾರದಿಂದ ಹೊರಗಿಡಬೇಕು ಎಂದು ಉಮಾಶ್ರೀ ಹೇಳಿದರು.

ಜೊತೆಗೆ, ಮಹಿಳಾ ಅಭಿವೃದ್ದಿ ಮಂತ್ರಿಗಳು ಏನು ಮಾಡ್ತಾ ಇದ್ದಾರೆ? ಅವರು ಪ್ರಕರಣ ಕೈಗೆತ್ತಿಕೊಳ್ಳಬೇಕಿತ್ತು. ಆದರೆ ಅವರೇನು ಮಾಡ್ತಾ ಇದ್ದಾರೆ ಎಂದು ಉಮಾಶ್ರೀ ಪ್ರಶ್ನಿಸಿದರು.

ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣ: BJP ಸದಸ್ಯೆ ಚಾಂದಿನಿ ನಾಯಕ್​ಗೆ ಗರ್ಭಪಾತ

ಗರ್ಭಪಾತವೇ ಸುಳ್ಳು! ಆಕೆಗೆ 6 ವರ್ಷಗಳ ಹಿಂದೆಯೇ ‘ಆಪರೇಷನ್’ ಆಗಿದೆ -ಶಾಸಕ ಸಿದ್ದು ಸವದಿ

Follow us on

Related Stories

Most Read Stories

Click on your DTH Provider to Add TV9 Kannada