ಹಾಸನ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಬಗ್ಗೆ ದೇವೇಗೌಡ ಕಳವಳ; ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ

| Updated By: ganapathi bhat

Updated on: Aug 23, 2021 | 12:45 PM

ಉಪ ಮುಖ್ಯಮಂತ್ರಿ ಹಾಗು ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿಗಳ ಜೊತೆಗೆ ನಿರಂತರ ಫೋನ್ ಸಂಪರ್ಕದಲ್ಲಿ ಇದ್ದೇನೆ. ಕೂಡಲೆ ಜಿಲ್ಲೆಗೆ ಕೊರೊನ ಔಷಧಿ ಹಾಗೂ ಇತರ ಮೂಲಭೂತ ಸೌಲಭ್ಯ ನೀಡಿ ಎಂದು ಒತ್ತಾಯಿಸಿರುವ ಬಗ್ಗೆ ತಿಳಿಸಿದರು.

ಹಾಸನ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಬಗ್ಗೆ ದೇವೇಗೌಡ ಕಳವಳ; ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ
ಹೆಚ್.ಡಿ. ದೇವೇಗೌಡ (ಸಂಗ್ರಹ ಚಿತ್ರ)
Follow us on

ಹಾಸನ: ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಸೋಂಕಿತರು ಹಾಗು ಸಾವಿನ ಸಂಖ್ಯೆಯ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ ಹೊಸದಾಗಿ 2,540 ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ, ಇಂದು ಜಿಲ್ಲೆಯಲ್ಲಿ 20 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಈ ಪರಿಸ್ಥಿತಿ ಬಗ್ಗೆ ಸ್ವತಃ ಮುಖ್ಯಮಂತ್ರಿಗಳ ಜೊತೆಗೆ ಫೋನ್‌ನಲ್ಲಿ‌ ಮಾತನಾಡಿ‌ ಹಲವು ಕ್ರಮಗಳಿಗೆ ಮನವಿ ಮಾಡಲಾಗಿತ್ತು. ಜಿಲ್ಲೆಯ ಶಾಸಕರು, ಮಾಜಿ ಸಚಿವ ರೇವಣ್ಣ ನೇತೃತ್ವದಲ್ಲಿ ಖುದ್ದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದರು. ಇಷ್ಟೆಲ್ಲಾ ಮಾಡಿದ ಬಳಿಕ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಈವರೆಗೆ ಯಾವುದೇ ಕ್ರಮ ಕಾರ್ಯಗತವಾಗಿಲ್ಲ ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ಅಸಮಧಾನ ಹೊರ ಹಾಕಿದ ಮಾಜಿ ಪ್ರಧಾನಿ, ಇಂದು ಕೂಡ ಉಪ ಮುಖ್ಯಮಂತ್ರಿ ಹಾಗು ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿಗಳ ಜೊತೆಗೆ ನಿರಂತರ ಫೋನ್ ಸಂಪರ್ಕದಲ್ಲಿ ಇದ್ದೇನೆ. ಕೂಡಲೆ ಜಿಲ್ಲೆಗೆ ಕೊರೊನ ಔಷಧಿ ಹಾಗೂ ಇತರ ಮೂಲಭೂತ ಸೌಲಭ್ಯ ನೀಡಿ ಎಂದು ಒತ್ತಾಯಿಸಿರುವ ಬಗ್ಗೆ ತಿಳಿಸಿದರು.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್​ಗೆ ದೇವೇಗೌಡರು ಕರೆ ಮಾಡಿ ಮಾತನಾಡಿದರು. ಕೊರೊನಾ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದು, ಕೆಲವು ಸಲಹೆಗಳನ್ನೂ ನೀಡಿದರು. ತಕ್ಷಣ ಎಲ್ಲಾ ಜಿಲ್ಲೆಗಳಿಗೂ ಪರಿಹಾರ ಒದಗಿಸುವಂತೆ ಮನವಿ ಮಾಡಿದರು. ಉಪಮುಖ್ಯಮಂತ್ರಿ ಹಾಗೂ ಪ್ರಸ್ತುತ ಕೊವಿಡ್ ಟಾಸ್ಕ್​ಫೋರ್ಸ್ ಅಧ್ಯಕ್ಷರೂ ಆಗಿರುವ ಡಾ.ಅಶ್ವತ್ಥ್ ನಾರಾಯಣಗೆ ದೇವೇಗೌಡ ಕರೆಮಾಡಿ, ಹಾಸನ ಜಿಲ್ಲೆಗೆ ಬೇಕಾದ ಆಕ್ಸಿಜನ್​ ಒದಗಿಸುವಂತೆ ಮನವಿ ಮಾಡಿದರು.

ಕೊರೊನಾ; ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದಲ್ಲಿಂದು ಹೊಸದಾಗಿ 48,781 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ 21,376, ತುಮಕೂರು 3040, ಹಾಸನ 2422, ಮೈಸೂರು 2246, ಕಲಬುರಗಿ 1722, ದಕ್ಷಿಣ ಕನ್ನಡ 1633, ಬಳ್ಳಾರಿ 1284, ಮಂಡ್ಯ 1110, ಉಡುಪಿ 976, ಬೆಳಗಾವಿ 965, ಬೆಂಗಳೂರು ಗ್ರಾಮಾಂತರ 959, ಧಾರವಾಡ 942, ಉತ್ತರ ಕನ್ನಡ 833, ಕೋಲಾರ 828, ರಾಯಚೂರು 762, ಚಿಕ್ಕಬಳ್ಳಾಪುರ 734, ಚಾಮರಾಜನಗರ 725, ಯಾದಗಿರಿ 714, ಬಾಗಲಕೋಟೆ 661, ಚಿಕ್ಕಮಗಳೂರು 632, ಕೊಡಗು 622, ಶಿವಮೊಗ್ಗ 563, ದಾವಣಗೆರೆ 538, ಕೊಪ್ಪಳ 523, ರಾಮನಗರ 501, ವಿಜಯಪುರ 445, ಬೀದರ್ 437, ಗದಗ 248, ಹಾವೇರಿ 214, ಚಿತ್ರದುರ್ಗ 126.

ಇದನ್ನೂ ಓದಿ: Karnataka Lockdown: ಕರ್ನಾಟಕ ಲಾಕ್​ಡೌನ್​ ಅವಧಿಯಲ್ಲಿ ಯಾವೆಲ್ಲಾ ಸೇವೆ ಲಭ್ಯವಿರಲಿದೆ, ಯಾವುದು ಇಲ್ಲ? ಇಲ್ಲಿದೆ ಮಾಹಿತಿ

Covid-19 Karnataka Update: ಕರ್ನಾಟಕದಲ್ಲಿ ಒಂದೇ ದಿನ 48,781 ಮಂದಿಗೆ ಸೋಂಕು ದೃಢ, 346 ಸಾವು

Published On - 10:06 pm, Fri, 7 May 21