Former Speaker Krishna: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅನಾರೋಗ್ಯದಿಂದ ವಿಧಿವಶ

|

Updated on: May 21, 2021 | 4:46 PM

KR Pete Krishna Death: ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 2006ರಿಂದ 2008ರವರೆಗೆ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1988 ಎಸ್‌.ಆರ್‌.ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದ ಅವರು ಪಶುಸಂಗೋಪನೆ, ರೇಷ್ಮೆ ಖಾತೆಗಳನ್ನು ನಿರ್ವಹಿಸಿದ್ದರು.

Former Speaker Krishna: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅನಾರೋಗ್ಯದಿಂದ ವಿಧಿವಶ
ಕೆ.ಆರ್.ಪೇಟೆ ಕೃಷ್ಣ
Follow us on

ಮಂಡ್ಯ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸ್ಪೀಕರ್ ಕೊತ್ತಮಾರನಹಳ್ಳಿ ಕೃಷ್ಣ ತಮ್ಮ ಮೈಸೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 2006 ರಿಂದ 2008 ರವರೆಗೆ ವಿಧಾನಸಭೆ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದ ಅವರು ಎಸ್‌.ಆರ್‌.ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಕೆ.ಆರ್.ಪೇಟೆ ಕೃಷ್ಣ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 2006ರಿಂದ 2008ರವರೆಗೆ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1988 ಎಸ್‌.ಆರ್‌.ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದ ಅವರು ಪಶುಸಂಗೋಪನೆ, ರೇಷ್ಮೆ ಖಾತೆಗಳನ್ನು ನಿರ್ವಹಿಸಿದ್ದರು. ಅಲ್ಲದೇ, 1996 ರಲ್ಲಿ ಮಂಡ್ಯ ಸಂಸದರಾಗಿಯೂ ಕೃಷ್ಣ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಕೊತ್ತಮಾರನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಾಳೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಚಿಪ್ಕೊ ಚಳವಳಿಯ ರೂವಾರಿ ಸುಂದರ್​ಲಾಲ್ ಬಹುಗುಣ ಕೊವಿಡ್​ಗೆ ಬಲಿ

18-44 Vaccination in Karnataka: ಮೇ 22ರಿಂದಲೇ 18 ರಿಂದ 44 ವರ್ಷದವರಿಗೆ ಕೊವಿಡ್ ಲಸಿಕೆ; ಕೊವಿಡ್ ಸೇನಾನಿಗಳಿಗೆ ಮೊದಲ ಆದ್ಯತೆ
(Former Speaker K.R. Pet Krishna passes away due to long time ill health in Mysore)

Published On - 4:40 pm, Fri, 21 May 21