ಚಿಪ್ಕೊ ಚಳವಳಿಯ ರೂವಾರಿ ಸುಂದರ್​ಲಾಲ್ ಬಹುಗುಣ ಕೊವಿಡ್​ಗೆ ಬಲಿ

Sundarlal Bahuguna Death: ಚಿಪ್ಕೊ ಚಳುವಳಿಯ ರೂವಾರಿ, ಖ್ಯಾತ ಪರಿಸರ ಹೋರಾಟಗಾರ ಸುಂದರ್​ಲಾಲ್ ಬಹುಗುಣ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷವಾಗಿತ್ತು.

ಚಿಪ್ಕೊ ಚಳವಳಿಯ ರೂವಾರಿ ಸುಂದರ್​ಲಾಲ್ ಬಹುಗುಣ ಕೊವಿಡ್​ಗೆ ಬಲಿ
ಸುಂದರ್​ಲಾಲ್ ಬಹುಗುಣ
Follow us
ರಶ್ಮಿ ಕಲ್ಲಕಟ್ಟ
|

Updated on:May 21, 2021 | 1:54 PM

ದೆಹಲಿ: ಚಿಪ್ಕೊ ಚಳುವಳಿಯ ರೂವಾರಿ, ಖ್ಯಾತ ಪರಿಸರ ಹೋರಾಟಗಾರ ಸುಂದರ್​ಲಾಲ್ ಬಹುಗುಣ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷವಾಗಿತ್ತು. ಕೊವಿಡ್ ಬಾಧಿಸಿದ್ದ ಅವರು ಮೇ8ರಿಂದ ರಿಷಿಕೇಶದ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ಥಳೀಯ ಪತ್ರಿಕೆಗಳ ವರದಿ ಪ್ರಕಾರ ಬಹುಗುಣ ಅವರು ನ್ಯುಮೊನಿಯಾ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು.

ದೈನಿಕ್ ಜಾಗರಣ್ ವರದಿಯ ಪ್ರಕಾರ, ಬಹುಗುಣ ಅವರು ಮಧ್ಯಾಹ್ನ ಸುಮಾರಿಗೆ ಕೊನೆಯುಸಿರೆಳೆದರು. ಇವರ ಅಂತ್ಯಕ್ರಿಯೆ ಗಂಗೆಯಲ್ಲಿ ನಡೆಯಲಿದೆ.

ಸುಂದರ್‌ಲಾಲ್ ಬಹುಗುಣ ಚಿಪ್ಕೊ ಚಳವಳಿ ಮೂಲಕ ಅರಣ್ಯ ನಾಶದ ವಿರುದ್ಧ ದನಿಯೆತ್ತಿದ್ದರು.2009 ರಲ್ಲಿ ಪದ್ಮವಿಭೂಷಣದಿಂದ ಗೌರವಿಸಲ್ಪಟ್ಟ ಭಾರತದ ಮೊದಲ ಪರಿಸರ ಕಾರ್ಯಕರ್ತರಾಗಿದ್ದಾರೆ ಇವರು. ಅರಣ್ಯನಾಶ, ದೊಡ್ಡ ಅಣೆಕಟ್ಟುಗಳು ಮತ್ತು ಗಣಿಗಾರಿಕೆಯಂತಹ ಹಲವಾರು ಪರಿಸರ ಸಮಸ್ಯೆಗಳ ವಿರುದ್ಧ ಇವರು ದೇಶಾದ್ಯಂತ ಆಂದೋಲನಗಳನ್ನು ನಡೆಸಿದ್ದಾರೆ.

ಪರಿಸರವನ್ನು ಅತಿದೊಡ್ಡ ಆರ್ಥಿಕತೆಯೆಂದು ಪರಿಗಣಿಸಿ, ಸುಂದರ್‌ಲಾಲ್ ಬಹುಗುಣ ಜಾಗತಿಕ ಮಟ್ಟದಲ್ಲಿ ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯ ಅತ್ಯುತ್ತಮ ಮಾದರಿಗಳನ್ನು ಪರಿಚಯಿಸಿದೆರು. ಅವರು ಭಾರತದ ಕಾಡುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ 1973 ರ ಅಹಿಂಸಾತ್ಮಕ ಚಳುವಳಿಯಾದ ಚಿಪ್ಕೊ ಚಳವಳಿ (ಚಿಪ್ಕೊ ಚಳವಳಿ)ಗೆ ನೇತೃತ್ವ ನೀಡಿದ್ದರು. ಕಾಡುಗಳನ್ನು ರಕ್ಷಿಸಲು ಮಹಿಳೆಯರನ್ನು ಸಜ್ಜುಗೊಳಿಸುವುದರಿಂದ  ಈ ಚಳವಳಿ ಜಗತ್ತಿನ ಗಮನಸೆಳೆಯಿತು.  ಉತ್ತರಾಖಂಡದಲ್ಲಿ ಪ್ರಾರಂಭವಾದ ಈ ಆಂದೋಲನವು ವಿಶ್ವದಾದ್ಯಂತ ಅನೇಕ ಪರಿಸರ ಚಳುವಳಿಗಳಿಗೆ ಪ್ರೇರಣೆ ನೀಡಿದೆ. ಪರಿಸರವಾದಿ ಬಹುಗುಣ ಅವರಿಗೆ  ಭಾರತ ಸರ್ಕಾರ  1981 ರಲ್ಲಿ ಪದ್ಮಶ್ರೀ ಮತ್ತು 2009 ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಿದೆ.

ಅರಣ್ಯ ನಾಶದ ವಿರುದ್ಧದ ದನಿ ಅಪ್ಪಿಕೊ ಚಳವಳಿ ಚಿಪ್ಕೊ ಚಳವಳಿ ಅಥವಾ ಅಪ್ಪಿಕೊ ಚಳವಳಿ ಎಂದಾಕ್ಷಣ ಮರವನ್ನು ಅಪ್ಪಿಕೊಂಡು ನಿಂತಿರುವ ವ್ಯಕ್ತಿಯೊಬ್ಬರ ಚಿತ್ರ ಕಣ್ಮುಂದೆ ಬರುತ್ತದೆ. ಆ ವ್ಯಕ್ತಿಯೇ ಸುಂದರಲಾಲ್ ಬಹುಗುಣ. ಜನವರಿ 9, 1927 ರಂದು ಉತ್ತರಾಖಂಡದ ತೆಹ್ರಿ ಬಳಿಯ ಮರೋಡಾ ಗ್ರಾಮದಲ್ಲಿ ಇವರ ಜನನ. ಅವರು ಆರಂಭದಲ್ಲಿ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ್ದ ಬಹುಗುಣ ನಂತರ ಮಹಿಳೆಯರನ್ನು ಸಂಘಟಿಸಿದರು. ಮದ್ಯ ವಿರೋಧಿ ಹೋರಾಟಗಳಿಗೂ ಇವರು ನೇತೃತ್ವ ನೀಡಿದ್ದರು. ತಮ್ಮ ಜೀವನದಲ್ಲಿ ಗಾಂಧಿವಾದಿ ವಿಚಾರಗಳನ್ನು ಅಳವಡಿಸಿಕೊಂಡಿದ್ ಬಹುಗುಣ ಅವರು ವಿಮಲಾ ಅವರನ್ನು ವಿವಾಹವಾಗಿದ್ದರು. ಮದುವೆ ಆದ ಮೇಲೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸಬೇಕು, ಅಲ್ಲಿ ಆಶ್ರಮವನ್ನು ಸ್ಥಾಪಿಸಬೇಕು ಎಂಬ ಷರತ್ತಿನ್ನು ವಿಮಲಾ ಮುಂದಿರಿಸಿದ್ದರು ಬಹುಗುಣ. ಚಳವಳಿ ಆರಂಭಿಸುವ ಮುನ್ನ ಬಹುಗುಣ ಅವರು ಹಿಮಾಲಯದ ಕಾಡುಗಳ ಮೂಲಕ ಸುಮಾರು 4,700 ಕಿ.ಮೀ. ಚಾರಣ ಮಾಡಿ ಪ್ರಮುಖ ಯೋಜನೆಗಳಿಂದ ಉಂಟಾಗುವ ಅರಣ್ಯನಾಶ ಮತ್ತು ಮಾನವ ಜೀವನದ ಬಗ್ಗೆ ತಿಳಿದುಕೊಂಡರು.

ಹಿಂದಿಯಲ್ಲಿ ‘ಅಂಟಿಕೊಳ್ಳಿ’ ಎಂಬ ಅರ್ಥವಿರುವ ಚಿಪ್ಕೊ ಆಂದೋಲನವನ್ನು ಮಾರ್ಚ್ 26, 1977 ರಂದು ಉತ್ತರ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು. ಮರಗಳನ್ನು ಕಡಿಯಲು ಬಂದಾಗ ಜನರು ಆ ಮರವನ್ನು ತಬ್ಬಿಕೊಂಡು ಪ್ರತಿಭಟಿಸಿದರು. ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯನ್ನು ಭೇಟಿಯಾಗಿ ಅವರಿಗೆ ಸಂಗತಿ ಮನವರಿಕೆ ಮಾಡಿಕೊಟ್ಟ ನಂತರ ಇಂದಿರಾ ಗಾಂಧಿ ಮರಗಳನ್ನು ಕಡಿಯುವುದನ್ನು ನಿಷೇಧಿಸಿದರು.

ತೆಹ್ರಿ ಅಣೆಕಟ್ಟಿನ ವಿರುದ್ಧ ದಶಕಗಳ ಕಾಲ ಪ್ರತಿಭಟನೆ ನಡೆಸಿದ್ದರು ಇವರು. ಬಹುಗುಣ ಮುನ್ನಡೆಸಿದ ಉಪವಾಸ ಗಮನಾರ್ಹವಾಗಿತ್ತು. ಅಣೆಕಟ್ಟಿನ ಪರಿಣಾಮಗಳನ್ನು ಅಧ್ಯಯನ ಮಾಡಲು ಆಯೋಗವನ್ನು ನೇಮಿಸಬಹುದು ಎಂದು ಅಂದಿನ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ ಭರವಸೆಯ ಮೇರೆಗೆ 45 ದಿನಗಳ ಉಪವಾಸವನ್ನು ಕೈಬಿಟ್ಟಿದ್ದರು. ಅಣೆಕಟ್ಟು ನಿರ್ಮಾಣ ಪುನರಾರಂಭಕ್ಕೆ ಸಂಬಂಧಿಸಿದಂತೆ 2001 ರಲ್ಲಿ ಬಹುಗುಣ ಅವರನ್ನು ಬಂಧಿಸಲಾಯಿತು.

ರೈನಿ: ಚಿಪ್ಕೊ ಚಳುವಳಿಗೆ ಬಿತ್ತಿದ ಮಣ್ಣು ಉತ್ತರಾಖಂಡ ರಾಜ್ಯ ರಚನೆಯಾಗುವ ಮೊದಲು ರೈನಿ ಗ್ರಾಮ ಉತ್ತರಪ್ರದೇಶದಲ್ಲಿತ್ತು. ಕಾಡಿನಲ್ಲಿ ಮರಗಳನ್ನು ಕಡಿಯಲು ಅವಕಾಶ ನೀಡುವ ಸರ್ಕಾರದ ನೀತಿಯನ್ನು ವಿರೋಧಿಸಿ ಗ್ರಾಮೀಣ ಮಹಿಳೆಯರು ಪ್ರತಿಭಟನೆ ನಡೆಸಿದರು. ಅರಣ್ಯವನ್ನು ತಮ್ಮ ಮನೆಯೆಂದು ಘೋಷಿಸಿದ ಅವರು, ಮಾರ್ಚ್ 26, 1974 ರಂದು ಮರಗಳನ್ನು ಅಪ್ಪಿಕೊಂಡು ರಾತ್ರಿ ಕಳೆದರು.

ಹತ್ತಿರದ ಹಳ್ಳಿಗಳಿಂದ ಹೆಚ್ಚಿನ ಜನರು ಬಂದು ಮರಗಳನ್ನು ಮುಚ್ಚುತ್ತಿದ್ದಂತೆ, ಅದನ್ನು ಕತ್ತರಿಸಲು ಬಂದವರು ಪ್ರಯತ್ನವನ್ನು ಬಿಟ್ಟು ಹಿಂದಿರುಗಿದರು. ನಂತರ, ಗಾಂಧಿವಾದಿ ಸುಂದರ್‌ಲಾಲ್ ಬಹುಗುಣ ನೇತೃತ್ವದ ಚಿಪ್ಕೊ ಚಳುವಳಿ ಅರಣ್ಯನಾಶದ ವಿರುದ್ಧ ವಿಶ್ವದ ಗಮನ ಸೆಳೆಯಿತು.

ಇದನ್ನೂ ಓದಿ:  ಬಾಗಲಕೋಟೆ: ಸುಡು ಬಿಸಿಲಿನಲ್ಲೂ ಹತ್ತು ಸಾವಿರ ಗಿಡಗಳಿಗೆ ನೀರುಣಿಸುತ್ತಿರುವ ಪರಿಸರ ಪ್ರೇಮಿ ಎಲ್ಲರಿಗೂ ಮಾದರಿ

Published On - 1:17 pm, Fri, 21 May 21

ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು