Oxygen Shortage| ಆಕ್ಸಿಜನ್ ಕೊರತೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಬಲಿ

|

Updated on: Apr 26, 2021 | 9:49 AM

ಕಳೆದ‌ ರಾತ್ರಿ ಆಕ್ಸಿಜನ್ ಸಮಸ್ಯೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ನಾಲ್ವರು ಮೃತಪಟ್ಟಿದ್ದಾರೆ.

Oxygen Shortage| ಆಕ್ಸಿಜನ್ ಕೊರತೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಬಲಿ
ಕೋಲಾರ ಜಿಲ್ಲಾಸ್ಪತ್ರೆ
Follow us on

ಕೋಲಾರ: ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಅನೇಕ ಸಾವು- ನೋವುಗಳು ಆಕ್ಸಿಜನ್ ಕೊರತೆಯಿಂದಲೇ ಸಂಭವಿಸುತ್ತಿವೆ. ಅಲ್ಲದೆ ಆಕ್ಸಿಜನ್ ಸರಿಯಾಗಿ, ಬೇಕಾದಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ ಎಂದು ಆಸ್ಪತ್ರೆಗಳು ಆರೋಪಿಸುತ್ತಿವೆ. ಈಗ ಇದೇ ಆಕ್ಸಿಜನ್ ಕೊರತೆಗೆ ನಾಲ್ವರು ಸೋಂಕಿತರು ಬಲಿಯಾಗಿದ್ದಾರೆ.

ಕಳೆದ‌ ರಾತ್ರಿ ಆಕ್ಸಿಜನ್ ಸಮಸ್ಯೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ನಾಲ್ವರು ಮೃತಪಟ್ಟಿದ್ದಾರೆ. ಕೊರೊನಾ ದೃಢವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತರು ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ನಿನ್ನೆ ರಾತ್ರಿ ಆಕ್ಸಿಜನ್ ಕೊರತೆಯಿಂದಾಗಿ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ರಾತ್ರಿ ಫೋನ್ ಮಾಡಿದರು ಯಾವೊಬ್ಬ ಅಧಿಕಾರಿಯು ಸ್ಪಂದಿಸಿಲ್ಲ. ಆಸ್ಪತ್ರೆ ಸಿಬ್ಬಂದಿ ಆಕ್ಸಿಜನ್ ಕಡಿತಗೊಳಿಸಿದ್ದರಿಂದಲೇ ನಮ್ಮವರ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ಎದುರು ಮೃತರ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಆಕ್ಸಿಜನ್ ಸರಿಯಾದ ಸಮಯಕ್ಕೆ ಪೂರೈಸಲು ಶ್ರಮಿಸುತ್ತಿದ್ದೇವೆ
ಇನ್ನು ಕೋಲಾರದಲ್ಲಿ ಆಕ್ಸಿಜನ್ ಸಮಸ್ಯೆಯಿಂದ ನಾಲ್ವರು ನಿಧನ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ಡಾ.ಕೆ ಸುಧಾಕರ್ ಈ ಪ್ರಕರಣ ಬಗ್ಗೆ ಡಿಹೆಚ್ಒ ರಿಂದ ತಿಳಿದುಕೊಳ್ಳುತ್ತೇನೆ. ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂದು ತಿಳಿದು ಹೇಳುತ್ತೇನೆ. ಆಕ್ಸಿಜನ್ ಸರಿಯಾದ ಸಮಯಕ್ಕೆ ಪೂರೈಸಲು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯ ವಿರುದ್ಧ ಸಾಲು ಸಾಲು ಆರೋಪ, ಎಫ್ಐಆರ್ ದಾಖಲು