ವಾನರ ಸೇನೆಗೆ ಕೊರೊನಾ ಕಂಟಕ; ನಗರ ಪ್ರದೇಶಕ್ಕೆ ಲಗ್ಗೆ ಇಡುವ ಮಂಗಗಳ ಬಗ್ಗೆ ಗಮನಹರಿಸಲು ಚಿತ್ರದುರ್ಗ ಜನರ ಆಗ್ರಹ

ಚಿತ್ರದುರ್ಗ ನಗರ ಬಳಿಯ ಚಂದ್ರವಳ್ಳಿ ಅರಣ್ಯ ಪ್ರದೇಶದಲ್ಲಿ ವಾನರ ಗುಂಪು ತಿನ್ನಲು ಆಹಾರ ಇಲ್ಲದೆ ಹಸಿವಿನಿಂದ ಗೋಳಾಡುತ್ತಿದೆ. ಬೇಸಿಗೆಯ ಸಂದರ್ಭದಲ್ಲಿ ಕಾಡಿನಲ್ಲಿ ನೀರು, ಆಹಾರ ಸಿಗದ ಕಾರಣ ವಾನರ ಸೇನೆ ಈ ಪ್ರವಾಸಿ ತಾಣದಲ್ಲೇ‌ ಬೀಡು ಬಿಡುತ್ತವೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರು, ಪ್ರಾಣಿ ಪ್ರಿಯರು ನೀರು, ಆಹಾರ ನೀಡಿ ಪ್ರಾಣಿ ಪಕ್ಷಿಗಳಿಗೆ ಹೊಟ್ಟೆ ತುಂಬಿಸುತ್ತಿದ್ದರು.

ವಾನರ ಸೇನೆಗೆ ಕೊರೊನಾ ಕಂಟಕ; ನಗರ ಪ್ರದೇಶಕ್ಕೆ ಲಗ್ಗೆ ಇಡುವ ಮಂಗಗಳ ಬಗ್ಗೆ ಗಮನಹರಿಸಲು ಚಿತ್ರದುರ್ಗ ಜನರ ಆಗ್ರಹ
ಮಲಗಿರುವ ಮಂಗ
Follow us
sandhya thejappa
|

Updated on: Apr 26, 2021 | 10:25 AM

ಚಿತ್ರದುರ್ಗ: ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಇನ್ನೇನು ಎಲ್ಲಾ ಕೆಲಸಗಳನ್ನು ಮೊದಲಿನಂತೆ ಶುರು ಮಾಡಬಹುದೆಂದು ಯೋಚಿಸುವಾಗಲೇ ಇದರ ಎರಡನೇ ಅಲೆ ಅಪ್ಪಳಿಸಿದೆ. ಬಾಳಿ ಬದುಕಬೇಕಾದ ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಕೊರೊನಾ ಹಲವರ ಬದುಕನ್ನು ಕಿತ್ತುಕೊಂಡಿದೆ. ಈ ಮಹಾಮಾರಿ ಕೇವಲ ಮನುಷ್ಯನ ಪಾಲಿಗೆ ಕಂಟಕವಾಗಿಲ್ಲ. ಮೂಕ ಪ್ರಾಣಿಗಳ ಪಾಲಿಗೂ ಕಂಟಕಪ್ರಾಯವಾಗಿದೆ.

ಚಿತ್ರದುರ್ಗ ನಗರ ಬಳಿಯ ಚಂದ್ರವಳ್ಳಿ ಅರಣ್ಯ ಪ್ರದೇಶದಲ್ಲಿ ವಾನರ ಗುಂಪು ತಿನ್ನಲು ಆಹಾರ ಇಲ್ಲದೆ ಹಸಿವಿನಿಂದ ಗೋಳಾಡುತ್ತಿದೆ. ಬೇಸಿಗೆಯ ಸಂದರ್ಭದಲ್ಲಿ ಕಾಡಿನಲ್ಲಿ ನೀರು, ಆಹಾರ ಸಿಗದ ಕಾರಣ ವಾನರ ಸೇನೆ ಈ ಪ್ರವಾಸಿ ತಾಣದಲ್ಲೇ‌ ಬೀಡು ಬಿಡುತ್ತವೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರು, ಪ್ರಾಣಿ ಪ್ರಿಯರು ನೀರು, ಆಹಾರ ನೀಡಿ ಪ್ರಾಣಿ ಪಕ್ಷಿಗಳಿಗೆ ಹೊಟ್ಟೆ ತುಂಬಿಸುತ್ತಿದ್ದರು. ಆದರೆ ಇದೀಗ ಕೊರೊನಾ ನಿಯಂತ್ರಣಕ್ಕಾಗಿ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಪರಿಣಾಮ ಕೋಟೆನಾಡಿನ ಚಂದ್ರವಳ್ಳಿ ಹಾಗೂ ಏಳು ಸುತ್ತಿನ ಕೋಟೆ ಖಾಲಿ ಖಾಲಿಯಾಗಿದ್ದು, ವಾನರಸೇನೆ ಆಹಾರವಿಲ್ಲದೆ ಕಂಗಾಲಾಗಿದೆ.

ಚಂದ್ರವಳ್ಳಿ ಪ್ರದೇಶದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂಗಗಳ ಹಿಂಡು ಬೀಡು ಬಿಟ್ಟಿತ್ತು. ಒಂದು ಕಡೆ ಪ್ರವಾಸಿಗರು ಮಂಗಗಳ‌ ಚೆಲ್ಲಾಟ ಕಂಡು ಮನರಂಜನೆ ಪಡೆಯುತ್ತಿದ್ದರು. ಮತ್ತೊಂದು ಕಡೆ ಪ್ರವಾಸಿಗರು ನೀಡಿದ ಆಹಾರದಿಂದ ಮಂಗಗಳ‌ ಹೊಟ್ಟೆ ತುಂಬುತ್ತಿತ್ತು. ಆದರೆ ಈಗ ಪ್ರವಾಸಿ ತಾಣ ಬಂದ್ ಆದ ಬಳಿಕ ಮಂಗಗಳು ಆಹಾರ ಇಲ್ಲದೆ ನಿತ್ರಾಣಗೊಳ್ಳುತ್ತಿವೆ. ಪ್ರವಾಸಿಗರೂ ಇಲ್ಲ, ಪ್ರಾಣಿ ಪ್ರಿಯರಿಗೆ ಆಹಾರ ನೀಡಲೂ ಅವಕಾಶ ನೀಡುತ್ತಿಲ್ಲ. ಹೀಗಾಗಿ ಕೆಲ ಮಂಗಗಳು ನಗರ ಪ್ರದೇಶಕ್ಕೆ ಲಗ್ಗೆ ಇಡುವ ಸಾಧ್ಯತೆ ಇದೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಪ್ರಾಣಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Monkeys

ಆಹಾರವಿಲ್ಲದೆ ಆತಂಕಗೊಂಡಿರುವ ಮಂಗ

ಇದನ್ನೂ ಓದಿ

ಕೋಲಾರ: ಗೃಹಪ್ರವೇಶಕ್ಕೆ ಕೊರೊನಾ ಉಡುಗೊರೆ; ಗ್ರಾಮಸ್ಥರಲ್ಲಿ ಹೆಚ್ಚಾದ ಆತಂಕ

Oxygen Shortage| ಆಕ್ಸಿಜನ್ ಕೊರತೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಬಲಿ

(Monkeys are struggling without food from corona pandemic in Chitradurga)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್