Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಗೃಹಪ್ರವೇಶಕ್ಕೆ ಕೊರೊನಾ ಉಡುಗೊರೆ; ಗ್ರಾಮಸ್ಥರಲ್ಲಿ ಹೆಚ್ಚಾದ ಆತಂಕ

ಕೋಲಾರ ತಾಲೂಕು ಅಬ್ಬಣಿ ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಕೊರೊನಾ ಸೋಂಕಿನಿಂದ ಇದೇ ಗ್ರಾಮದ ಇಬ್ಬರು ಮೃತಪಟ್ಟಿದ್ದಾರೆ. ಪರಿಣಾಮ ಗ್ರಾಮವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಂಟೈನ್ಮೆಂಟ್ ಜೋನ್ ಎಂದು ನಿರ್ಧರಿಸಿ ಗ್ರಾಮವನ್ನು ಸೀಲ್ ಡೌನ್ ಮಾಡಿದ್ದಾರೆ.

ಕೋಲಾರ: ಗೃಹಪ್ರವೇಶಕ್ಕೆ ಕೊರೊನಾ ಉಡುಗೊರೆ; ಗ್ರಾಮಸ್ಥರಲ್ಲಿ ಹೆಚ್ಚಾದ ಆತಂಕ
ಸೀಲ್ ಡೌನ್ ಆಗಿರುವ ಅಬ್ಬಣಿ ಗ್ರಾಮ
Follow us
sandhya thejappa
|

Updated on: Apr 26, 2021 | 9:52 AM

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗವನ್ನು ಬಾರಿಸುತ್ತಿದೆ. ಪ್ರತಿನಿತ್ಯ ಐನೂರು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಈ ನಡುವೆ ಕಳೆದ ಹತ್ತು ದಿನಗಳ ಹಿಂದೆ ಗ್ರಾಮವೊಂದರಲ್ಲಿ ನಡೆದ ಮನೆ ಗೃಹಪ್ರವೇಶಕ್ಕೆ ಬಂದವರು ಕೊರೊನಾ ಸೋಂಕನ್ನು ಗ್ರಾಮಕ್ಕೆ ಉಡುಗೊರೆಯಾಗಿ ನೀಡಿ ಹೋಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಗ್ರಾಮಕ್ಕೆ ವಕ್ಕಿರಿಸಿತು ಮಹಾಮಾರಿ ಕೋಲಾರ ತಾಲೂಕು ಅಬ್ಬಣಿ ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಕೊರೊನಾ ಸೋಂಕಿನಿಂದ ಇದೇ ಗ್ರಾಮದ ಇಬ್ಬರು ಮೃತಪಟ್ಟಿದ್ದಾರೆ. ಪರಿಣಾಮ ಗ್ರಾಮವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಂಟೈನ್ಮೆಂಟ್ ಜೋನ್ ಎಂದು ನಿರ್ಧರಿಸಿ ಗ್ರಾಮವನ್ನು ಸೀಲ್ ಡೌನ್ ಮಾಡಿದ್ದಾರೆ. ಗ್ರಾಮದಲ್ಲಿ ಕಳೆದ ಹತ್ತು ದಿನಗಳ ಹಿಂದೆ ಗೃಹಪ್ರವೇಶ ಕಾರ್ಯಕ್ರಮವೊಂದು ನಡೆದಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳಿಂದ ಹೊಸ ಮನೆ ಕಟ್ಟಿದವರಿಗೆ ಕೊರೊನಾ ಮಹಾಮಾರಿಯ ಸೋಂಕು ಉಡುಗೊರೆಯಾಗಿ ಬಂದಿದೆ.

ಗೃಹಪ್ರವೇಶದ ನಂತರ ಅದೇ ಮನೆಯವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕಿರುವುದು ದೃಢವಾಗಿದೆ. ಜೊತೆಗೆ ಇದೇ ಗ್ರಾಮದಲ್ಲಿ ಒಂದು ಮದುವೆ ನಡೆದಿದೆ. ಈ ವೇಳೆಯೂ ಮದುವೆ ಮನೆಗೆಂದು ಬಂದವರಿಂದ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಈ ಪರಿಣಾಮ ಗ್ರಾಮ ಸೀಲ್ ಡೌನ್ ಆಗಿದೆ.

ಗ್ರಾಮಸ್ಥರಲ್ಲಿ ಮಡುಗಟ್ಟಿದ ಆತಂಕ ಗೃಹಪ್ರವೇಶ ಹಾಗೂ ಮದುವೆ ಕಾರ್ಯಕ್ರಮದಿಂದ ಸದ್ಯ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಜೊತೆಗೆ ಗ್ರಾಮದಲ್ಲಿ ಈಗಾಗಲೇ ಕೊರೊನಾದಿಂದ ಎರಡು ಸಾವು ಸಂಭವಿಸಿರುವುದು ಗ್ರಾಮದಲ್ಲಿ ಭಯ ಹೆಚ್ಚಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಮಾಡಿ ಇಡೀ ಗ್ರಾಮಕ್ಕೆ ಸೋಂಕು ನಿರೋಧಕವನ್ನು ಸಿಂಪಡಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮಕ್ಕೆ ಯಾರೂ ಬರದಂತೆ, ಯಾರೂ ಗ್ರಾಮದಿಂದ ಹೊರ ಹೋಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮದಲ್ಲಿ ಪ್ರತಿಯೊಂದು ಮನೆಯಲ್ಲಿ ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹ ಮಾಡುತ್ತಿದ್ದಾರೆ. ಈ ವರೆಗೆ ಗ್ರಾಮದಲ್ಲಿನ ಸುಮಾರು 300 ಕ್ಕೂ ಹೆಚ್ಚು ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದು, ಆ ಪೈಕಿ 30 ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿರುವುದು ಖಚಿತವಾಗಿದೆ.

ಇದನ್ನೂ ಓದಿ

ತುಮಕೂರಿನಲ್ಲಿ 6ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಕೊರೊನಾಗೆ ಬಲಿ, ಸೀರೆಯಿಂದ ನೇಣು ಬಿಗಿದುಕೊಂಡು ಶ್ರೀರಂಗಪಟ್ಟಣದಲ್ಲಿ ಸೋಂಕಿತ ಸಾವು

ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯ ವಿರುದ್ಧ ಸಾಲು ಸಾಲು ಆರೋಪ, ಎಫ್ಐಆರ್ ದಾಖಲು

(Coronavirus infection spread from home warming ceremony in kolar)