ಕೊರೊನಾ ಭೀಕರತೆಗೆ 20 ದಿನಗಳಲ್ಲಿ ಒಂದೇ ಕುಟುಂಬದ ನಾಲ್ವರು ಬಲಿ
ಮೂವರು ಮಕ್ಕಳನ್ನು ಕೊರೊನಾದಿಂದ ಕಳೆದುಕೊಂಡು ಕೊರಗಿನಲ್ಲಿದ್ದ ತಾಯಿಗೂ ಕೊರೊನಾ ಬಲಿ ಪಡೆದುಕೊಂಡಿದೆ. ಅಪ್ಪ, ದೊಡ್ಡಪ್ಪ, ಚಿಕ್ಕಪ್ಪನ ಕಳೆದುಕೊಂಡಿದ್ದವರಿಗೆ ಈಗ ಅಜ್ಜಿ ಸಾವಿನಿಂದ ತೀವ್ರ ಆಘಾತವಾಗಿದೆ. ನೋವನ್ನು ಸಹಿಸಲಾಗದ ಪರಿಸ್ಥಿತಿಯಲ್ಲಿರುವ ಕುಟುಂಬ ಕೊರೊನಾಗೆ ಶಾಪ ಹಾಕುತ್ತಿದೆ.
ಬೆಂಗಳೂರು: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಕಣ್ಣಿಗೆ ಕಾಣದ ಈ ಚಿಕ್ಕ ವೈರಸ್ ಜನರ ದೇಹ ಸೇರಿ ಅವರನ್ನು ಬಲಿ ಪಡೆಯುತ್ತಿದೆ. ಆದರೆ ಇಲ್ಲೊಂದು ಕುಟುಂಬದ ಮೇಲೆ ಕೊರೊನಾದ ಕರಿ ನೆರಳು ಬಿದ್ದಿದ್ದು ಕೇವಲ 20 ದಿನದಲ್ಲಿ ಒಂದೇ ಕುಟುಂಬದ ನಾಲ್ವರು ಕೊರೊನಾಗೆ ಬಲಿಯಾಗಿದ್ದಾರೆ. ಈ ಕುಟುಂಬದ ಸದಸ್ಯರಿಗೆ ಕೊರೊನಾ ನೋವಿನ ಮೇಲೆಯೇ ಬರೆ ಎಳೆದಿದೆ.
ಮೂವರು ಮಕ್ಕಳನ್ನು ಕೊರೊನಾದಿಂದ ಕಳೆದುಕೊಂಡು ಕೊರಗಿನಲ್ಲಿದ್ದ ತಾಯಿಗೂ ಕೊರೊನಾ ಬಲಿ ಪಡೆದುಕೊಂಡಿದೆ. ಅಪ್ಪ, ದೊಡ್ಡಪ್ಪ, ಚಿಕ್ಕಪ್ಪನ ಕಳೆದುಕೊಂಡಿದ್ದವರಿಗೆ ಈಗ ಅಜ್ಜಿ ಸಾವಿನಿಂದ ತೀವ್ರ ಆಘಾತವಾಗಿದೆ. ನೋವನ್ನು ಸಹಿಸಲಾಗದ ಪರಿಸ್ಥಿತಿಯಲ್ಲಿರುವ ಕುಟುಂಬ ಕೊರೊನಾಗೆ ಶಾಪ ಹಾಕುತ್ತಿದೆ.
ದೊಮ್ಮಸಂದ್ರದ ಕುಟುಂಬದಲ್ಲಿ ಕೊರೊನಾ ತನ್ನ ಅಟ್ಟಹಾಸ ತೋರಿಸಿದೆ. ಮೊದಲಿಗೆ ಮನೆಯ ಹಿರಿ ಮಗನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ನಂತರ ಒಬ್ಬರ ನಂತರ ಒಬ್ಬರಂತೆ ಮೂರು ಗಂಡು ಮಕ್ಕಳಿಗೂ ಪಾಸಿಟಿವ್ ಬಂದಿದೆ. ಅದೇ ರೀತಿ ಆಕ್ಸಿಜನ್ ಸಮಸ್ಯೆಯಿಂದ ಮೂವರು ಒಬ್ಬರ ನಂತರ ಒಬ್ಬರು ಕೊವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಮೂರು ಮಕ್ಕಳ ಕಳೆದುಕೊಂಡು ಕಣ್ಣೀರಿಡುತ್ತ ಊಟ ಬಿಟ್ಟಿದ್ದ ಜಯಮ್ಮರಿಗೆ ಕೆಮ್ಮು ಕಾಣಿಸಿಕೊಂಡಿತ್ತು. ಈ ವೇಳೆ ಕೊರೊನಾ ಪರೀಕ್ಷೆ ಮಾಡಿಸಿದಾಗ ಅವರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ನಂತರ ಆಕ್ಸ್ ಫರ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಉಸಿರಾಟದಲ್ಲಿ ಏರು ಪೇರಾಗಿ ಮೃತಪಟ್ಟಿದ್ದಾರೆ. ಬಳಿಕ ಆಸ್ಪತ್ರೆ ಸಿಬ್ಬಂದಿ ವಿಡಿಯೋ ಕಾಲ್ ಮೂಲಕ ಮೊಮ್ಮಕ್ಕಳಿಗೆ ವೃದ್ಧಿಯನ್ನು ತೋರಿಸಿದ್ದಾರೆ. ಈ ವೇಳೆ ಜಯಮ್ಮ ಮೃತಪಟ್ಟಿರೋದಾಗಿ ಮಾಹಿತಿ ನೀಡಿದ್ದಾರೆ. ಆದರೆ ಆಸ್ಪತ್ರೆಯ ನಿರ್ಲಷ್ಯವೋ, ಇಲ್ಲವೋ ಗೊತ್ತಿಲ್ಲ ಚೆನ್ನಾಗೆ ಇದ್ದ ನಮ್ಮ ಅಜ್ಜಿ ಇವತ್ತು ಇಲ್ಲ ಎಂದು ಮೊಮ್ಮಕ್ಕಳು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಬೆಳಗ್ಗೆ ಕೊರೊನಾಗೆ ಬಲಿಯಾದ ತಾಯಿಯ ಮುಖ ನೋಡಲು ಅಂತ್ಯಕ್ರಿಯೆ ಸ್ಥಳಕ್ಕೆ ಬಂದಿದ್ದ ಮಗ ಸ್ಥಳದಲ್ಲೇ ಕುಸಿದು ಸಾವು