KSRTC ಬಸ್​ನಲ್ಲಿ 30 ಕೆಜಿಯವರೆಗೆ ಲಗೇಜ್​ ಸಾಗಣೆ ಉಚಿತ! ನಿಮ್ಮ ಸಾಕುನಾಯಿಗೂ ಟಿಕೆಟ್ ಇದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 31, 2022 | 11:12 AM

ನೀವು ವೈಯಕ್ತಿಕವಾಗಿ ತೆಗೆದುಕೊಂಡು ಹೋಗುವ ಲಗೇಜ್ ಅದು 30 ಕೆಜಿ ತೂಕ ಇದ್ದರೆ ಉಚಿತವಾಗಿ ಸಾಗಿಸಬಹುದು ಎಂದು ಬಸ್​ಗಳಲ್ಲಿ ಲಗೇಜ್ ಸಾಗಾಟ ಕುರಿತ ಪರಿಷ್ಕೃತ ಸುತ್ತೋಲೆಯಲ್ಲಿ KSRTC ಸಿಬ್ಬಂದಿ ಮತ್ತು ಜಾಗೃತ ದಳದ ನಿರ್ದೇಶಕರು ತಿಳಿಸಿದ್ದಾರೆ.

KSRTC ಬಸ್​ನಲ್ಲಿ 30 ಕೆಜಿಯವರೆಗೆ ಲಗೇಜ್​ ಸಾಗಣೆ ಉಚಿತ! ನಿಮ್ಮ ಸಾಕುನಾಯಿಗೂ ಟಿಕೆಟ್ ಇದೆ
ಸಾಂದರ್ಭಿಕ ಚಿತ್ರ
Follow us on

ಕರ್ನಾಟಕ ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣಿಸಬೇಕಾದರೆ ನಾವು ಹೆಚ್ಚು ಅಲವಂಬಿಸಿರುವುದು KSRTC ಬಸ್ಸುಗಳನ್ನು, ಈ ಕಾರಣಕ್ಕೆ ಹಳ್ಳಿ ಹಳ್ಳಿಗಳಿಗೆ KSRTC ಬಸ್ಸುಗಳು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ KSRTC ಬಸ್ಸುಗಳು ಪ್ರಯಾಣಿಕರನ್ನು ಮಾತ್ರವಲ್ಲ, ಜೊತೆಗೆ ಲಗೇಜ್ ಕೂಡ ಹೊತ್ತೊಯ್ಯಲು ಕೂಡ ಈ ಬಸ್ಸುಗಳು ತುಂಬಾ ಪ್ರಯೋಜನವಾಗಿದೆ. ಆದರೆ ಇದರಲ್ಲಿ ಇಷ್ಟೇ ತೂಕದ ಲಗೇಜ್​ಗಳನ್ನು ತೆಗೆದುಕೊಳ್ಳಬೇಕು ಎಂಬ ನಿಯಮಗಳು ಇರಲ್ಲಿಲ್ಲ, ಜತೆಗೆ ಈ ಬಗ್ಗೆ ಗೊಂದಲುಗಳು ಇತ್ತು. ಆದರೆ ಇದೀಗ ರಾಜ್ಯ ರಸ್ತೆ ಸಾರಿಗೆ ಇಲಾಖೆ ಮಹತ್ವ ಆದೇಶವೊಂದನ್ನು ನೀಡಿದೆ. ವೈಯಕ್ತಿಕ ಲಗೇಜ್​ ತೂಕವನ್ನು ನಿರ್ಧಾರಿಸಲು KSRTC ಮುಂದಾಗಿದೆ.

ಎಷ್ಟು ಕೆ.ಜಿಯ ಲಗೇಜ್​ಗಳು ಉಚಿತ

ನೀವು ವೈಯಕ್ತಿಕವಾಗಿ ತೆಗೆದುಕೊಂಡು ಹೋಗುವ ಲಗೇಜ್ ಅದು 30 ಕೆಜಿ ತೂಕ ಇದ್ದರೆ ಉಚಿತವಾಗಿ ಸಾಗಿಸಬಹುದು ಎಂದು ಬಸ್​ಗಳಲ್ಲಿ ಲಗೇಜ್ ಸಾಗಾಟ ಕುರಿತ ಪರಿಷ್ಕೃತ ಸುತ್ತೋಲೆಯಲ್ಲಿ KSRTC ಸಿಬ್ಬಂದಿ ಮತ್ತು ಜಾಗೃತ ದಳದ ನಿರ್ದೇಶಕರು ತಿಳಿಸಿದ್ದಾರೆ. ಒಂದು ವೇಳೆ 30ಕೆಜಿ ಮೀರಿದರೆ ನಿಗದಿತ ದರ ವಿಧಿಸಲಾಗುತ್ತದೆ.

ಈ ಎಲ್ಲ ವಸ್ತುಗಳನ್ನು ಸಾಗಿಸಬಹುದು

ಬ್ಯಾಗ್, ಸೂಟ್ ಕೇಸ್, ಅಕ್ಕಿ, ತೆಂಗಿನಕಾಯಿ, ರಾಗಿ, ಅಕ್ಕಿ ಹಿಟ್ಟು, ತರಕಾರಿ, ಹೂ ಹಣ್ಣು, ಸಣ್ಣದಾದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಸಾಗಾಟ ಮಾಡಬಹುದಾಗಿದೆ.

ನಿಮ್ಮ ನೆಚ್ಚಿನ ನಾಯಿಗೆ ಫುಲ್ ಟಿಕೆಟ್

KSRTC ಬಸ್ಸುಗಳಲ್ಲಿ ನಿಮ್ಮ ಜೊತೆಗೆ ನಿಮ್ಮ ನೆಚ್ಚಿನ ಶ್ವಾನವು ಪ್ರಯಾಣ ಮಾಡುತ್ತದೆ ಎಂದರೆ ಅದಕ್ಕೂ ಅವಕಾಶ ಇದೆ, ಆದರೆ ಅದಕ್ಕೆ ಪುಲ್ಲ ಟಿಕೆಟ್ ಪಡೆಯುವಂತೆ ಕೆಎಸ್​ಆರ್​ಟಿಸಿ ಅಧಿಕೃತ ಮಾಹಿತಿ ನೀಡಿದೆ. ನಾಯಿಮರಿಗಳಿಗೆ ಅರ್ಧ ಟಿಕೆಟ್ ಪಡೆದರೆ ಸಾಕು ಎಂದು ಹೇಳಿದೆ.