ಕ್ಷಣಾರ್ಧದಲ್ಲಿ ಉಲ್ಟಾ ತೆಂಗಿನ ಮರವೇರಿ ಹುಬ್ಬೇರಿಸುವ ಯುವಕ: ಹಳ್ಳಿ ಪ್ರತಿಭೆಯ ಸಾಹಸಕ್ಕೆ ಜನರು ಬೆರಗು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 29, 2024 | 9:35 PM

ಚಿತ್ರದುರ್ಗದಲ್ಲಿ ಕೋತಿ ರಾಮ ಕೋಟೆ ಹತ್ತಿ ಫೇಮಸ್ ಆಗಿದ್ದರೆ, ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಯುವಕನೊಬ್ಬ ಉಲ್ಟಾ ತೆಂಗಿನ ಮರವೇರುವ ಮೂಲಕ ವಿಭಿನ್ನವಾಗಿ ಸಾಹಸ ಮಾಡಿದ್ದಾನೆ. ತಲೆ ಕೆಳಗೆ ಮಾಡಿ ಸರನೇ ಮರ ಏರ್ತಾನೆ. ಉಲ್ಟಾ ಮರ ಹತ್ತೋದ್ರಲ್ಲಿ ಈತ ಫುಲ್ ಫೇಮಸ್ ಆಗಿದ್ದಾನೆ.

ಕ್ಷಣಾರ್ಧದಲ್ಲಿ ಉಲ್ಟಾ ತೆಂಗಿನ ಮರವೇರಿ ಹುಬ್ಬೇರಿಸುವ ಯುವಕ: ಹಳ್ಳಿ ಪ್ರತಿಭೆಯ ಸಾಹಸಕ್ಕೆ ಜನರು ಬೆರಗು
ಕ್ಷಣಾರ್ಧದಲ್ಲಿ ಉಲ್ಟಾ ತೆಂಗಿನ ಮರವೇರಿ ಹುಬ್ಬೇರಿಸುವ ಯುವಕ: ಹಳ್ಳಿ ಪ್ರತಿಭೆಯ ಸಹಾಸಕ್ಕೆ ಜನರು ಬೆರಗು
Follow us on

ಗದಗ, ಜುಲೈ 29: ಪಟ್ಟಣದಲ್ಲೊಬ್ಬ ಡಿಫರಂಟ್ ಯುವಕ (boy) ಇದ್ದಾನೆ. ಆತನ ಸಾಹಸ ನೋಡಿದರೆ ನೀವು ಬೆಚ್ಚಿಬಿಳ್ತೀರಾ. ಸೀದಾ ಮರ ಏರುವುದಕ್ಕೆ ಭಯಪಡುವವರಿದ್ದಾರೆ. ಅಂತವರ ಮಧ್ಯೆ ಈ ಯುವಕ ಯಾವುದೇ ಭಯವಿಲ್ಲದೇ ತೆಂಗಿನ ಮರ (coconut tree) ಏರುತ್ತಾನೆ. ಹಾಗಾದ್ರೆ ಅದರಲ್ಲೇನು ವಿಶೇಷವೆಂಬ ನಿಮ್ಮ ಪ್ರಶ್ನೆಗೆ ಉತ್ತರ, ಈತ ತೆಂಗಿನ ಮರವೇರುವುದು ಸೀದಾ ಅಲ್ಲ, ಬದಲಿಗೆ ಉಲ್ಟಾ. ಹೌದು ವಿಚಿತ್ರ ಮರ ಏರುವ ಶೈಲಿಗೆ ಇಡೀ ಪಟ್ಟಣದ ಜನರು ಫಿದಾ ಆಗಿದ್ದು, ಜೊತೆಗೆ ಎಲ್ಲಿರಗೂ ಅಚ್ಛರಿ ಮೂಡಿಸಿದ್ದಾನೆ.

ಉಲ್ಟಾ ಮರ ಹತ್ತೋದ್ರಲ್ಲಿ ಈತ ಫುಲ್ ಫೇಮಸ್

ಜಿಲ್ಲೆಯ ಶಿರಹಟ್ಟಿ ಪಟ್ಟಣದ 22 ವರ್ಷದ ಯುವಕ ಈಶ್ವರ ಎಂಬಾತನೇ ವಿಶೇಷ ಸಾಹಸ ಮಾಡಿದ ಯುವಕ. ಈತ ತೆಂಗಿನ ಮರ ಏರ್ತಾನೆ ಅಂದ್ರೆ ಸಾಕು ನೂರಾರು ಜನ್ರು ನಿಂತು ನೋಡ್ತಾರೆ. ಮರ ಏರೋದ್ರಲ್ಲೇನು ವಿಶೇಷ ಅಂತಾರೆ. ಸೀದಾ ಮರ ಏರುವುದು ಸಾಮಾನ್ಯ. ಈ ಈಶ್ವರ ಉಲ್ಟಾ ಮರ ಹತ್ತುತ್ತಾನೆ. ಉಲ್ಟಾ ಮರ ಹತ್ತೋದ್ರಲ್ಲಿ ಈತ ಫುಲ್ ಫೇಮಸ್ ಆಗಿದ್ದಾನೆ. ತಮ್ಮ ತೋಟದಲ್ಲಿ ತೆಂಗಿನ ಮರದಲ್ಲಿ ಸುಮಾರು ಎರಡು ವರ್ಷಗಳ ಪರಿಶ್ರಮದಿಂದ ಉಲ್ಟಾ ತೆಂಗಿನ ಮರ ಏರಲು ಕಲೆತ್ತಿದ್ದಾನೆ. ಸಿದಾ ತೆಂಗಿನ ಮರ ಏರಲು ಜನ್ರು ಹಿಂದೇಟು ಹಾಕ್ತಾರೆ. ಆದ್ರೆ ಈಶ್ವರ ಮಾತ್ರ ಕ್ಷಣಾರ್ಧದಲ್ಲಿ ತಲೆ ಕೆಳಗೆ ಮಾಡಿ ತೆಂಗಿನ ಮರ ಹತ್ತಿ ಬಿಡುತ್ತಾನೆ.

ಇದನ್ನೂ ಓದಿ: ಗುಡ್ಡೆಕಲ್ ಬಾಲಸುಬ್ರಮಣ್ಯ ಹರೋಹರ ಜಾತ್ರೆ: ದೇಹಕ್ಕೆ ಶಸ್ತ್ರ ಚುಚ್ಚಿಕೊಂಡು ಹರಕೆ ತೀರಿಸಿದ ಭಕ್ತರು

ಈಶ್ವರನ ಸಾಹಸಮಯ ಕೆಲಸ ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಈತ ತಲೆ ಕೆಳಗೆ ಮಾಡಿ ಮರ ಏರ್ತಾಯಿದ್ರೆ ಜನ್ರ ಎದೆಯಲ್ಲಿ ಢವಢವ ಶರುವಾಗುತ್ತೆ. ಅಷ್ಟೊಂದು ಜೀವ ರೀಸ್ಕ್ ದಿಂದ ಮರ ಹತ್ತುವ ಸಾಹಸ ಮಾಡಿದ್ದಾನೆ. ಒಂದು ದಿನ ಆತನ ತೋಟದಲ್ಲಿ ಮಂಗವೊಂದು ಉಲ್ಟಾ ಮರ ಇಳಿಯೋದನ್ನು ನೋಡಿದ್ದಾನೆ. ಅಷ್ಟೇ ನಾನೂ ಯಾಕೆ ತಲೆ ಕೆಳಗೆ ಮಾಡಿ ಮರ ಹತ್ತಬಾರದು ಅಂತ ವಿಚಾರ ಬಂದಿದೆ ಅಷ್ಟೇ.

ಹೆಚ್ಚುಕಮ್ಮಿಯಾದ್ರೆ ಜೀವಕ್ಕೆ ಅಪಾಯ

ತಮ್ಮದೇ ತೋಟದಲ್ಲಿ ತಲೆ ಕೆಳಗೆ ಮಾಡಿ ಮರ ಏರಲು ಶುರು ಮಾಡಿ ಸಾಕಷ್ಟು ಶ್ರಮಪಟ್ಟು ಈ ಸಾಧನೆ ಮಾಡಿದ್ದಾನೆ. ಏರುವಾಗಿ ಸ್ವಲ್ಪ ಹೆಚ್ಚುಕಮ್ಮಿಯಾದ್ರೂ ಜೀವಕ್ಕೆ ಅಪಾಯ ಗ್ಯಾರಂಟಿ. ಮನೆಯಲ್ಲಿ ತಂದೆ, ತಾಯಿಗೆ ಗೋತ್ತಿಲ್ಲದೇ ಈ ಸಹಾಸ ಮಾಡಿದ್ದಾನೆ. ಮನೆಯಲ್ಲಿ ತಂದೆ, ತಾಯಿಗೆ ಗೋತ್ತಾದ್ರೆ ಬೈತಾರೇ ಅಂತ ಮನೆಯಲ್ಲೂ ಯಾರಿಗೂ ಹೇಳಿಲ್ಲ. ಜನ್ರಿಂದ್ಲೇ ಮಗನ ಸಾಧನೆ ಬಗ್ಗೆ ತಂದೆ ತಿಳಿದುಕೊಂಡಿದ್ದಾರೆ.

ನೂರಡಿ ಮರವೇರಬೇಕೆಂಬ ಆಸೆ

ಈಗಾಗಲೇ 40 ಅಡಿ ಎತ್ತರದ ತೆಂಗಿನ ಮರವನ್ನ ಉಲ್ಟಾ ಏರುತ್ತಿರುವ ಈಶ್ವರ. ನೂರು ಅಡಿಯವರಿಗೆ ಉಲ್ಟಾ ಏರಬೇಕೆಂಬ ಆಸೆಯಿದೆ. ಈ ಮೂಲಕ ಸಾಧನೆ ಮಾಡುವ ಛಲ ಹೊಂದಿದ್ದಾನೆ. ತೆಂಗಿನ ಮರ ಹತ್ತುವುದು ತುಂಬಾನೆ ಕಷ್ಟದ ಕೆಲಸ ಯಾಕೆಂದರೆ ತೆಂಗಿನ ಏರಲು ಹೋದ್ರೆ ಕಾಲು ಕೈಗಳು ಜಾರುತ್ತವೆ. ಆದ್ರೆ ಇಂತಹ ಕಷ್ಟದ ಕೆಲಸವನ್ನ ಸರಳವಾಗಿ ತೆಂಗಿನ ಮರ ಏರುವು ಮೂಲಕ ಈಶ್ವರ ಈ ಭಾಗದಲ್ಲಿ ಭಾರಿ ಫೇಮಸ್ ಆಗಿದ್ದಾನೆ. ನಮ್ಮೂರು ಯುವಕನ ಸಾಧನೆ ನೋಡಿ ನಮಗೆ ತುಂಬ ಖುಷಿಯಾಗಿದೆ. ಈತ ದೊಡ್ಡ ಸಾಧನೆ ಮಾಡಿ ನಮ್ಮೂರು, ರಾಜ್ಯದ ಹೆಸರು ತರುವಂತಾಗಲಿ ಎಂದು ಗ್ರಾಮದ ಹಿರಿಯರು ಹಾರೈಸಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನಿಬ್ಬರು ಮಕ್ಕಳು ಸೇರಿದಂತೆ ಐವರನ್ನ ರಕ್ಷಿಸಿದ ಹುವಾ ಗೌಡ

ಡೆಂಜರ್ ಜೋನ್​ನಲ್ಲಿ ತೆಂಗಿನ ಮರ ಏರಿ ಸಾಹಸ ಕೆಲಸ ಮಾಡಿರುವ ಈಶ್ವರ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.‌ ಚಿತ್ರದುರ್ಗದ ಕೋಟೆ ಹತ್ತವು ಕೋತಿ ರಾಮನಂತೆ ನಮ್ಮ ಈಶ್ವರನು ಫೇಮಸ್ ಆಗಬೇಕು ಸಾಧನೆ ಮಾಡಬೇಕು ಅನ್ನೋದು ಎಲ್ಲರ ಆಶಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.