ಗದಗ ಜಿಮ್ಸ್‌ ಆಸ್ಪತ್ರೆಯಲ್ಲಿ ಐಸಿಯು ಸೇರಿ 350 ಆಕ್ಸಿಜನ್ ಬೆಡ್ ಭರ್ತಿ: ಜಿಲ್ಲಾಧಿಕಾರಿ ಸುಂದರೇಶ್​ ಬಾಬು

|

Updated on: May 07, 2021 | 10:57 AM

ಗದಗ ಜಿಲ್ಲೆಯಲ್ಲಿ ದಿನ ಸಾಗುತ್ತಿದ್ದಂತೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಕೊರೊನಾ ತೀವ್ರತೆಗೆ ಆಸ್ಪತ್ರೆಗೆ ದಾಖಲಾಗುವವರು ಕೂಡಾ ಹೆಚ್ಚುತ್ತಿದ್ದಾರೆ. ಹೀಗಿರುವಾಗ ಸದ್ಯದಲ್ಲಿ ಆಸ್ಪತ್ರೆಯ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತಾಗಿ ಜಿಲ್ಲಾಧಿಕಾರಿ ಸುಂದರೇಶ್​ ಬಾಬು ಮಾಹಿತಿ ಹಂಚಿಕೊಂಡಿದ್ದಾರೆ.

ಗದಗ ಜಿಮ್ಸ್‌ ಆಸ್ಪತ್ರೆಯಲ್ಲಿ ಐಸಿಯು ಸೇರಿ 350 ಆಕ್ಸಿಜನ್ ಬೆಡ್ ಭರ್ತಿ: ಜಿಲ್ಲಾಧಿಕಾರಿ ಸುಂದರೇಶ್​ ಬಾಬು
ಪ್ರಾತಿನಿಧಿಕ ಚಿತ್ರ
Follow us on

ಗದಗ: ಜಿಲ್ಲೆಯಲ್ಲಿ ದಿನ ಸಾಗುತ್ತಿದ್ದಂತೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಕೊರೊನಾ ತೀವ್ರತೆಗೆ ಆಸ್ಪತ್ರೆಗೆ ದಾಖಲಾಗುವವರು ಕೂಡಾ ಹೆಚ್ಚುತ್ತಿದ್ದಾರೆ. ಹೀಗಿರುವಾಗ ಸದ್ಯದಲ್ಲಿ ಆಸ್ಪತ್ರೆಯ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತಾಗಿ ಜಿಲ್ಲಾಧಿಕಾರಿ ಸುಂದರೇಶ್​ ಬಾಬು ಮಾಹಿತಿ ಹಂಚಿಕೊಂಡಿದ್ದಾರೆ. ಜಿಲ್ಲೆಯ ಜಿಮ್ಸ್​ ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಐಸಿಯು ಸೇರಿದಂತೆ ಸುಮಾರು 350 ಆಕ್ಸಿಜನ್​ ಬೆಡ್​ಗಳು ಬಹುತೇಕ ತುಂಬಿವೆ. ಇನ್ನುಳಿದಂತೆ ಸುಮಾರು 30 ಬೆಡ್​ಗಳು ಮಾತ್ರ ಖಾಲಿ ಇದೆ. ಹೀಗಾಗಿ ಹೆಚ್ಚುವರಿಯಾಗಿ 50 ಬೆಡ್​ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಸುಂದರೇಶ್​ ಬಾಬು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 800 ಬೆಡ್‌ಗಳ ಕೊವಿಡ್ ಕೇರ್ ಸೆಂಟರ್ ಆರಂಭ ಮಾಡಲಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ತಾಲೂಕು ಆಸ್ಪತ್ರೆಗಳಲ್ಲಿಯೂ ಬೆಡ್​ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಶಿರಹಟ್ಟಿ, ರೋಣ, ಮುಂಡರಗಿ, ನರಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಸೇರಿ 50 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲೂ ಕೂಡ 30 ರಿಂದ 40 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಜಿಲ್ಲೆಯ ಜಿಮ್ಸ್ ಆಸ್ಪತ್ರೆಗೆ ಕಳಿಸಿಕೊಡುವಂತೆ ಸೂಚನೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಕಳೆದ 12 ದಿನಗಳಲ್ಲಿ 198 ಸೋಂಕಿತರು ಸಾವು
ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 12 ದಿನಗಳಿಂದ ಸೋಂಕಿತರ ಸಾವು ಹೆಚ್ಚಾಗುತ್ತಿದ್ದು, ಕಳೆದ 12 ದಿನಗಳಲ್ಲಿ 198 ಸೋಂಕಿತರು ಸಾವಿಗೀಡಾಗಿದ್ದಾರೆ.

ಸಮರ್ಪಕ ಆಕ್ಸಿಜನ್ ಸೌಲಭ್ಯವಿದ್ದರೂ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಜಿಲ್ಲಾಡಳಿತಕ್ಕೆ ಎದುರಾದ ಪ್ರಶ್ನೆಯಾಗಿದೆ. ನಿನ್ನೆಯಿಂದಲೇ ಉಸ್ತುವಾರಿ ಸಚಿವ ಆನಂದ್​ ಸಿಂಗ್​ ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಸೋಂಕಿತರ ಸಾವು ಹೆಚ್ಚಳದ ಜೊತೆಗೆ ಸೋಂಕಿತರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಬಳ್ಳಾರಿ ತಾಲೂಕುವೊಂದರಲ್ಲಿಯೇ ಸುಮಾರು 5 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಸಾಝಲಾಗಿವೆ. ಜಿಲ್ಲೆಯಲ್ಲಿ ಒಟ್ಟು 11,865 ಸಕ್ರಿಯ ಪ್ರಕರಣಗಳಗಳು ದಾಖಲಾಗಿವೆ.

ಇದನ್ನೂ ಓದಿ: ಕೊರೊನಾ ಸೋಂಕಿತೆಗೆ ಸಹಜ ಹೆರಿಗೆ ಮಾಡಿಸಿದ ಹಾವೇರಿ ಆಸ್ಪತ್ರೆ ವೈದ್ಯರು; ಕೊವಿಡ್ ವಾರಿಯರ್ಸ್​ಗೆ ಸಾರ್ವಜನಿಕರಿಂದ ಮೆಚ್ಚುಗೆ