ಅತಿ ಕಡಿಮೆ ಅಂತರದಲ್ಲಿ ವಿಮಾನ ಹಾರಾಟ: ಮುಂಡರಗಿ ತಾಲೂಕಿನ ಗ್ರಾಮಸ್ಥರಲ್ಲಿ ಆತಂಕ

|

Updated on: May 17, 2023 | 1:53 PM

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಯ ಪಾತ್ರದಲ್ಲಿ ವಿಮಾನವೊಂದು ಅತಿ ಕಡಿಮೆ ಅಂತರದಲ್ಲಿ ಹಾರಾಟ ನಡೆಸಿದ್ದು, ಆತಂಕ ಸೃಷ್ಟಿ ಮಾಡಿದೆ.

ಅತಿ ಕಡಿಮೆ ಅಂತರದಲ್ಲಿ ವಿಮಾನ ಹಾರಾಟ: ಮುಂಡರಗಿ ತಾಲೂಕಿನ ಗ್ರಾಮಸ್ಥರಲ್ಲಿ ಆತಂಕ
ಕಡಿಮೆ ಅಂತರದಲ್ಲಿ ಹಾರಾಡಿದ ವಿಮಾನ
Follow us on

ಗದಗ: ಜಿಲ್ಲೆ ಮುಂಡರಗಿ (Mundaragi) ತಾಲೂಕಿನ ತುಂಗಭದ್ರಾ (Tungabadra River) ನದಿಯ ಪಾತ್ರದಲ್ಲಿ ವಿಮಾನವೊಂದು (Airplane) ಅತಿ ಕಡಿಮೆ ಅಂತರದಲ್ಲಿ ಹಾರಾಟ ನಡೆಸಿದ್ದು, ಆತಂಕ ಸೃಷ್ಟಿ ಮಾಡಿದೆ. ಕಳೆದ 2-3 ದಿನಗಳಿಂದ ವಿಮಾನ ಹಾರಾಟ ನಡೆಸಿದ್ದು, ಮುಂಡರಗಿ ತಾಲೂಕಿನ ಶೀರನಹಳ್ಳಿ, ಗುಮ್ಮಗೋಳ ಹಲವು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅತಿ ಕಡಿಮೆ ಅಂತರದಿಂದ ವಿಮಾನ ಹಾರಾಟದಿಂದ ರೈತರು ಜಮೀನಿನಲ್ಲಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ. ಇನ್ನು ವಿಮಾನ ಯಾಕೆ ಕಡಿಮೆ ಅಂತರದಲ್ಲಿ ನಮ್ಮ ಗ್ರಾಮಗಳ ಮೇಲೆ ಹಾರಾಟ ಮಾಡುತ್ತಿದೆ ಎಂದು ಜನರು ಜಿಲ್ಲಾಡಳಿತಕ್ಕೆ ಪ್ರಶ್ನಿಸಿದ್ದಾರೆ.

 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:51 pm, Wed, 17 May 23