ಗದಗ: ಹಲವು ವರ್ಷಗಳ ಬೇಡಿಕೆಯಾಗಿರುವ ಬೆಂಗಳೂರಿನಿಂದ ಗದಗ ನಗರಕ್ಕೆ ವೋಲ್ವೋ ಬಸ್ (Bengaluru To Gadag Volvo Bus) ಸಂಚಾರ ಇದೀಗ ಸಾಕಾರಗೊಳ್ಳುತ್ತಿದೆ. ಬೆಂಗಳೂರಿನಿಂದ ಗದಗ ನಗರಕ್ಕೆ ವೋಲ್ವೋ ಬಸ್ ಬಿಡುವಂತೆ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ (Sunil Joshi) ಅವರು ಮಾಡಿದ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು (B.Sriramulu), ಸೋಮವಾರದಿಂದ ಬಸ್ ಬಿಡುವುದಾಗಿ ಭರವಸೆ ನೀಡಿದ್ದಾರೆ. ಪೂಜ್ಯನೀಯ ಪುಟ್ಟಯ್ಯಜ್ಯರ ಪವಿತ್ರ ನೆಲ ಹಾಗೂ ನನ್ನ ಹೃದಯಕ್ಕೆ ಹತ್ತಿರವಾರ ಸ್ಥಳ ಮತ್ತು ಅಲ್ಲಿನ ಜನಗಳು ನನಗೆ ವಿಶೇಷ ಅಂತಾ ಶ್ರೀರಾಮುಲು ಹೇಳಿದ್ದಾರೆ.
“ಗದಗ ಜಿಲ್ಲೆಯ ಜನರ ಪರವಾಗಿ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಳಕಳಿಯ ವಿನಂತಿ ಏನು ಅಂದರೆ ಬೆಂಗಳೂರು ಮತ್ತು ಗದಗ ನಡುವೆ ವೋಲ್ವೋ ಇಲ್ಲ ಸರ್, 25 ವರ್ಷ ಆಯಿತು, ದಯವಿಟ್ಟು ಈ ಸೌಲಭ್ಯವನ್ನು ನಮಗೆಲ್ಲ ಒದಗಿಸಿ ಕೊಡಿ” ಎಂದು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡ ಸುನಿಲ್ ಜೋಶಿ, ಗದಗ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಹಾಗೂ ಗದಗ ಜಿಲ್ಲೆಯ ನರಗುಂದ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ಸಚಿವ ಸಿ.ಸಿ.ಪಾಟೀಲ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಗದಗ ಜಿಲ್ಲೆಯ ಜನರ ಪರವಾಗಿ ನಮ್ಮ @CMofKarnataka @BSBommai ಅವರಿಗೆ ಕಳಕಳಿಯ ವಿನಂತಿ ಏನು ಅಂದ್ರೆ ಬೆಂಗಳೂರು /ಗದಗ ವೋಲ್ವೋ ಇಲ್ಲ ಸರ್ ೨೫ ವರುಷ ಆಯಿತು ದಯವಿಟ್ಟು ಈ ಸೌಲಭ್ಯ ವನ್ನು ನಮಗೆಲ್ಲ ಒದಗಿಸಿ ಕೊಡಿ @HKPatilINC @CCPatilBJP
— Sunil Joshi | ?? ಸುನಿಲ್ ಜೋಶಿ (@SunilJoshi_Spin) January 4, 2023
ಇದನ್ನೂ ಓದಿ: ಚಿಕ್ಕಬಳ್ಳಾಪುರಕ್ಕೂ ಸಂಚಾರ ವಿಸ್ತರಣೆ ಮಾಡಿರುವ BMTC; ಆಕ್ಷೇಪ ವ್ಯಕ್ತಪಡಿಸುತ್ತಿರುವ KSRTC
ಸುನಿಲ್ ಜೋಶಿ ಅವರ ಟ್ವೀಟ್ ಗಮನಿಸಿದ ಸಾರಿಗೆ ಸಚಿವ ಶ್ರೀರಾಮುಲು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜೋಶಿ ಅವರ ಟ್ವೀಟ್ಗೆ ರೀಟ್ವೀಟ್ ಮಾಡಿದ ಸಚಿವರು, ಯಾವಾಗಲೂ ಜನರ ಸೇವೆಯಲ್ಲಿ.. ಈ ಸೋಮವಾರದಿಂದ ಗದಗಕ್ಕೆ ವೋಲ್ವೊ ಸೇವೆಗಳನ್ನು ಪ್ರಾರಂಭಿಸಲಾಗುವುದು. ಪೂಜನೀಯರ ಪವಿತ್ರ ಭೂಮಿ ಪುಟ್ಟಜ್ಜೂರು ಮತ್ತು ನನ್ನ ಹೃದಯಕ್ಕೆ ಹತ್ತಿರವಾದ ಸ್ಥಳ ಮತ್ತು ಯಾವಾಗಲೂ ನನಗೆ ವಿಶೇಷವಾದ ಜನರು ಎಂದು ಬರೆದುಕೊಂಡಿದ್ದಾರೆ.
Always in the service of people.. Starting this Monday, KSRTC to
start Volvo services to Gadag, sacred land of Pujaniya “Puttajjoru”, and a place close to my heart, and people who are always special to me.. @CMofKarnataka @BSBommai @SunilJoshi_Spin https://t.co/y1Si0MGs1V— B Sriramulu (@sriramulubjp) January 5, 2023
ಇನ್ನು ಸುನುಲ್ ಜೋಶಿ ಟ್ವೀಟ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದೆ. ತಮ್ಮ ಮನವಿಯನ್ನು ಪರಿಶೀಲಿಸಲು ಸಂಬಂಧಿಸಿದ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಟ್ವೀಟ್ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Sat, 7 January 23