ಗದಗ: ಸರ್ಕಾರದ ಇಲಾಖೆಗಳಿಗೆ ಬಿಜೆಪಿ ಶಾಸಕ ರಾಮಣ್ಣ ಲಮಾಣಿ(MLA Ramanna Lamani) ಅವರ ನಕಲಿ ಸಹಿ ಮಾಡಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಹೇಳಿ ಬಂದಿತ್ತು. ಶಾಸಕ ರಾಮಣ್ಣ ಲಮಾಣಿ ಲೆಟರ್ ಹೆಡ್ ಗಳು ಕ್ಷೇತ್ರದಲ್ಲಿ ಬಿಕರಿಯಾಗಿವೆ ಎನ್ನಲಾಗಿತ್ತು. ಸದ್ಯ ಇದಕ್ಕೆ ಪುಷ್ಟಿ ಕೊಡುವಂತೆ ಮತ್ತೊಂದು ಘಟನೆ ನಡೆದಿದೆ. ಜೀಪ್ ಹಿಡಿಯದಂತೆ ಕಾರ್ಯಕರ್ತನಿಗೆ ಬಿಜೆಪಿ ಶಿರಹಟ್ಟಿ ಶಾಸಕ ಪತ್ರ ಬರೆದಿದ್ದಾರೆ. ಈ ಹಿನ್ನೆಲೆ ಶಾಸಕ ರಾಮಣ್ಣ ಲಮಾಣಿ ಲೆಟರ್ ಮತ್ತೆ ದುರ್ಬಳಕೆ ಆಯ್ತಾ ಎಂಬ ಅನುಮಾನ ಶುರುವಾಗಿದೆ.
ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದ ಕಾರ್ಯಕರ್ತ ಜಿ. ಬಸವರಾಜ್ ಎಂಬಾತನ ಮಹೇಂದ್ರ ಬೊಲೇರೋ ಜೀಪ್ AP 39 V 3517 ವಾಹನ ಯಾರೂ ಹಿಡಿಯಬಾರದು ಅಂತ ಜೀಪ್ ನಂಬರ್ ಹಾಕಿ ಶಾಸಕರು ಲೆಟರ್ ಬರೆದುಕೊಟ್ಟಿದ್ದಾರೆ. ಶಿರಹಟ್ಟಿ ಕ್ಷೇತ್ರದಲ್ಲಿ ಶಾಸಕ ರಾಮಣ್ಣ ಲಮಾಣಿ ಲೆಟರ್ ಹೆಡ್ ಗಳು ಬಿಕರಿಯಾಗಿವೆ. ಶಾಸಕ ಸ್ಥಾನದ ಗೌರವ ಮರೆತು ಬೇಕಾಬಿಟ್ಟಿ ಲೆಟರ್ ಹೆಡ್ ನೀಡಿದ್ದಾರೆ ಎನ್ನಲಾಗಿದೆ.
ಶಾಸಕರ ಈ ರೀತಿ ಲೆಟರ್ ನೀಡಿದ್ದಕ್ಕೆ ಶಿರಹಟ್ಟಿ ಕ್ಷೇತ್ರ ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಯಕರ್ತ ಜಿ ಬಸವರಾಜು ಮನೆಯಲ್ಲಿ ಮದುವೆ ಸಮಾರಂಭ ಹಿನ್ನೆಲೆಯಲ್ಲಿ ಮಹೇಂದ್ರ ಬೊಲೇರೋ ಜೀಪ್ AP 39 V 3517 ವಾಹನ ಯಾರೂ ಹಿಡಿಯಬಾರದು ಅಂತ ಲೆಟರ್ ಬರೆದುಕೊಟ್ಟಿದ್ದಾರೆ. ಇದು ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಶಾಸಕರು ಲೆಟರ್ ಹೆಡ್ ಬೇಕಾಬಿಟ್ಟಿ ನೀಡಿದ್ದಾರೆ ಅನ್ನೋ ಆರೋಪ ಕೂಡ ಇದೆ. ಯಾರೂ ಕೇಳಿದ್ರೂ ಖಾಲಿ ಪತ್ರದಲ್ಲಿ ಸಹಿ ಮಾಡಿ ಪತ್ರ ನೀಡಿದ್ದಾರೆ ಅನ್ನೋ ಆರೋಪ ಬಿಜೆಪಿ ವಲಯದಲ್ಲೇ ಕೇಳಿಬರ್ತಾಯಿದೆ. ಶಾಸಕರ ನಿರ್ಲಕ್ಷವೇ ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಶಾಸಕ, ಮೋಸ ಮಾಡಿ ಪತ್ರ ತೆಗೆದುಕೊಂಡು ಹೋಗಿದ್ದಾನೆ. ಆತನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಾಸ್ಟೆಲ್ ಗೆ ವಿದ್ಯಾರ್ಥಿ ಸೇರಿಸಲು ಅಂತ ಹೇಳಿ ಪತ್ರ ತೆಗೆದುಕೊಂಡು ಹೋಗಿದ್ದಾನೆ. ಈ ರೀತಿ ದುರ್ಬಳಕೆ ಮಾಡಿಕೊಂಡಿದ್ದಾನೆ. ನಾಳೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುತ್ತೇನೆ ಎಂದರು.
ಶಾಸಕರ ನಕಲಿ ಸಹಿ ಟಿವಿ9ನಲ್ಲಿ ವರದಿ
ಶಾಸಕ ರಾಮಣ್ಣ ಲಮಾಣಿ ಪತ್ರಗಳು ದುರುಪಯೋಗ ಆಗ್ತಾಯಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿತ್ತು. ಶಾಸಕರ ತಾಳ ಮೇಳವಿಲ್ಲದ ವಿವಿಧ ನಮೂನೆಯ ಸಹಿಯುಳ್ಳ ಪತ್ರಗಳು ಟಿವಿ9ಗೆ ಲಭ್ಯವಾಗಿದ್ದವು. ಕಳೆದ ತಿಂಗಳ ಶಾಸಕ ರಾಮಣ್ಣ ಲೆಟರ್ ರಾದ್ಧಾಂತ ಬಗ್ಗೆ ಟಿರ್ವಿನಲ್ಲಿ ವಿಸ್ತ್ರತ ವರದಿ ಪ್ರಸಾರ ಮಾಡಿತ್ತು. ಆಗ ಶಾಸಕ ರಾಮಣ್ಣ ಲಮಾಣಿ ಸಹಿ ಮಾಡಿದ್ದು ನಾನೇ ಎಂದಿದ್ದರು. ಈಗ ಮತ್ತೊಂದು ಶಾಸಕ ಪತ್ರದ ರದ್ಧಾಂತ ನಡೆದಿದೆ.
ಮೋಸ ಮಾಡಿದ್ದಾನೆ ಶಾಸಕ ಕಿಡಿ
ನಾನೂ ಜೀಪ್ ಹಿಡಿಯಬಾರದು ಅಂತ ಪತ್ರ ನೀಡಿಲ್ಲ. ಆತ ಮೋಸ ಮಾಡಿ ಪತ್ರ ತೆಗೆದುಕೊಂಡು ಹೋಗಿದ್ದಾನೆ. ನಾಳೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಅವ್ನ ಒಳಗೆ ಹಾಕ್ತಿಸ್ತೀನಿ ಅಂತ ಟಿವಿ9ಗೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ಥಿಗೆ ಹಾಸ್ಟೇಲ್ ಸೇರಿಸುವುದಾಗಿ ಹೇಳಿ ಪತ್ರ ಪಡೆದಿದ್ದಾನೆ. ಆದ್ರೆ, ಈ ರೀತಿ ದುರ್ಬಳಕೆ ಮಾಡಿಕೊಂಡಿದ್ದಾನೆ ಅಂತ ಕಿಡಿಕಾರಿದ್ದಾರೆ..
Published On - 7:15 pm, Tue, 12 July 22