ಗದಗದ ಐತಿಹಾಸಿಕ ಭೀಷ್ಮ ಕೆರೆಯಲ್ಲಿ ಜಲಚರಗಳ ಮಾರಣಹೋಮ: ನಗರಸಭೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

| Updated By: ಆಯೇಷಾ ಬಾನು

Updated on: Jul 15, 2022 | 8:15 PM

ಭೀಷ್ಮಕೆರೆ ನೀರಿನಲ್ಲಿ ಮೀನು, ಆಮೆ, ಹಾವು ಸೇರಿದಂತೆ ಜಲಚರಗಳು ವಾಸ ಮಾಡುತ್ತಿದ್ದವು. ಆದ್ರೆ ಈಗ ಕಳೆದ ನಾಲ್ಕೈದು ದಿನಗಳಿಂದ ಈ ಕೆರೆಯಲ್ಲಿನ ಪಕ್ಷಿಗಳು ನಾಪತ್ತೆಯಾಗಿವೆ. ಕೆರೆಯಲ್ಲಿನ ಮೀನುಗಳು ಸಾವನ್ನಪ್ಪಿವೆ, ಹಾವು, ಕೂಡಾ ವಿಲ ವಿಲ ಒದ್ದಾಡಿ ಸಾವನ್ನಪ್ಪುತ್ತಿವೆ.

ಗದಗದ ಐತಿಹಾಸಿಕ ಭೀಷ್ಮ ಕೆರೆಯಲ್ಲಿ ಜಲಚರಗಳ ಮಾರಣಹೋಮ: ನಗರಸಭೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಕೆರೆಗೆ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಭೇಟಿ
Follow us on

ಗದಗ: ಕಳೆದ ನಾಲ್ಕೈದು ದಿನಗಳಿಂದ ಐತಿಹಾಸಿಕ ಭೀಷ್ಮ ಕೆರೆಯಲ್ಲಿ(Bhishma Lake) ಜಲಚರಗಳ ಮಾರಣಹೋಮ ನಡೆಯುತ್ತಿದೆ. ಏಕಾಏಕಿ ಮೀನುಗಳು, ಹಾವು ಸೇರಿದಂತೆ ಜಲಚರಗಳು ಸಾವನ್ನಪ್ಪುತ್ತಿವೆ. ಹೀಗಾಗಿ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಇಷ್ಟೆಲ್ಲಾ ಆದ್ರೂ ನಗರಸಭೆ ಮಾತ್ರ ಗಪ್ ಚುಪ್ ಆಗಿದೆ.

ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಭೀಷ್ಮಕೆರೆ ಒಂದು ಕಾಲದಲ್ಲಿ ಇಡೀ ಅವಳಿ ನಗರದ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿತ್ತು. ಈ ಕೆರೆಯಲ್ಲಿ ಪಕ್ಷಿಗಳು ಸ್ವಚ್ಛಂದವಾಗಿ ಹಾರಾಡ್ತಿದ್ವು. ಭೀಷ್ಮಕೆರೆ ನೀರಿನಲ್ಲಿ ಮೀನು, ಆಮೆ, ಹಾವು ಸೇರಿದಂತೆ ಜಲಚರಗಳು ವಾಸ ಮಾಡುತ್ತಿದ್ದವು. ಆದ್ರೆ ಈಗ ಕಳೆದ ನಾಲ್ಕೈದು ದಿನಗಳಿಂದ ಈ ಕೆರೆಯಲ್ಲಿನ ಪಕ್ಷಿಗಳು ನಾಪತ್ತೆಯಾಗಿವೆ. ಕೆಲವು ಪಕ್ಷಿಗಳು ಮಂದವಾಗಿ ಹಾರಾಟದ ಸ್ಥಿತಿಗೆ ಬಂದಿವೆ. ಕೆರೆಯಲ್ಲಿನ ಮೀನುಗಳು ಸಾವನ್ನಪ್ಪಿವೆ, ಹಾವು, ಕೂಡಾ ವಿಲ ವಿಲ ಒದ್ದಾಡಿ ಸಾವನ್ನಪ್ಪುತ್ತಿವೆ. ಜಲಚರಗಳು ಸಾವಿಗೆ ಈಡಾಗುತ್ತಿವೆ. ಇನ್ನೂ ಈ ಕೆರೆಯ ನಗರದ ಕಲುಷಿತ ನೀರು ಬರ್ತಾಯಿದೆ. ಕೆರೆಯ ಸುತ್ತಮುತ್ತಲಿನ ಹೋಟೆಲ್, ಆಸ್ಪತ್ರೆ, ಕಾಲೇಜು ಸೇರಿದಂತೆ ಕೆಲವು ಬಡಾವಣೆಯ ಕಲುಷಿತ ನೀರು ಕೆರೆಗೆ ಬರ್ತಾಯಿವೆ. ಅಲ್ಲದೆ ಕೆರೆಗೆ ಯಾರಾದ್ರೂ ವಿಷ ಹಾಕಿದ್ದಾರಾ ಅನ್ನೋ ಅನುಮಾನ ಕೂಡ ವ್ಯಕ್ತವಾಗಿದೆ. ಹೀಗಾಗಿ ಜಲಚರಗಳು ನರಳಿ ನರಳಿ ಸಾವನ್ನಪ್ಪುತ್ತಿವೆ ಎಂದು ಸ್ಥಳೀಯ ಅನಿಲ್ ಆರೋಪಿಸಿದ್ದಾರೆ.

ನಗರಸಭೆ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ

ಇನ್ನೂ ಭೀಷ್ಮಕೆರೆ 103 ಎಕರೆ ವಿಸ್ತೀರ್ಣವನ್ನು ಹೋಂದಿದ್ದು, ಅತಿಕ್ರಮಣವಾಗಿ ಕೇವಲ‌ 35 ಎರಕೆ ಮಾತ್ರ ಉಳಿದುಕೊಂಡಿದೆ. ಭೀಷ್ಮಕೆರೆ ಸೌಂದರ್ಯ ಹೆಚ್ಚಳವಾಲಿ ಎಂದು ಬೃಹತ್ ಬಸವಣ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಸಾಕಷ್ಟು ಪ್ರವಾಸಿಗರು ಈ ಕೆರೆಯನ್ನು ವೀಕ್ಷಣೆ ಮಾಡಲು ಬರ್ತಾರೆ. ಆದ್ರೆ ಇಂತಹ ಕೆರೆಗೆ ಕಲುಷಿತ ನೀರು ಬರುತ್ತಿದ್ದು, ಜಲಚರಗಳು ನರಳಿ ನರಳಿ ಸಾವಿಗೆ ಶರಣಾಗುತ್ತಿವೆ. ಹೀಗಾಗಿ ಗದಗ ಬೆಟಗೇರಿ ಅವಳಿ ನಗರದ ಪರಿಸರ ಪ್ರೇಮಿಗಳು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಲಚರಗಳು ಸಾವನ್ನಪ್ಪುತ್ತಿದ್ರು, ಚರಂಡಿ ನೀರು ಬರುವುದನ್ನು ನಿಲ್ಲಿಸಿಲ್ಲಾ ಎಂದು ನಗರಸಭೆಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನೂ ಜಲಚರಗಳು ಸಾವನ್ನಪ್ಪುತ್ತಿವೆ ಎನ್ನುವ ವಿಷಯ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಅವರ ಗಮನಕ್ಕೆ ತಂದ ಕೂಡಲೇ ಅವ್ರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಜಲಚರಗಳು ಯಾಕೇ ಸಾವನ್ನಪ್ಪಿವೆ ಎನ್ನುವ ಕುರಿತು ತನಿಖೆ ಮಾಡಿಸುತ್ತೇನೆ ಅಂತ ಅಧ್ಯಕ್ಷೆ ಉಷಾ ದಾಸರ್ ಹೇಳಿದ್ದಾರೆ.

ಇಷ್ಟೊಂದು ಮಳೆಯಾದ್ರು ಕೂಡಾ ಭೀಷ್ಮಕೆರೆ ತುಂಬಿಲ್ಲ, ಸುತ್ತಮುತ್ತಲಿನ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ನೀರು ಬರದಂತ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಚರಂಡಿ ನೀರು ಮಾತ್ರ ಕೆರೆ ಸೇರುತ್ತಿದೆ. ಹೀಗಾಗಿಯೇ ಇಲ್ಲನ ಜಲಚರಗಳು ಸಾವಿಗೆ ಶರಣಾಗುತ್ತಿವೆ. ಇನಾದ್ರು ನಗರಸಭೆ ಅಧಿಕಾರಿಗಳ ಚರಂಡಿ ನೀರು ಕೆರೆಗೆ ಬರುವುದನ್ನು ನಿಲ್ಲಿಸಿ, ಜಲಚರಗಳು ಉಳಿಸಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ