ಪ್ರತ್ಯೇಕ ಘಟನೆ: ರೈಲ್ವೇ ಹಳಿಯಲ್ಲಿ ಲೇಡಿ ಕಂಡಕ್ಟರ್ ಶವ ಪತ್ತೆ, ಕಲಬುರಗಿಯಲ್ಲಿ ಹಿರಿಯ ಪತ್ರಕರ್ತ ಆತ್ಮಹತ್ಯೆ

| Updated By: ರಮೇಶ್ ಬಿ. ಜವಳಗೇರಾ

Updated on: Sep 06, 2023 | 10:37 AM

Gadag News: ತಮ್ಮ ಜಮೀನಿನ ಬಳಿ ಇರುವ ರೈಲ್ವೇ ಹಳಿಯಲ್ಲಿ ಲೇಡಿ ಕಂಡಕ್ಟರ್ ಶವವಾಗಿ ಪತ್ತೆಯಾಗಿದ್ದಾರೆ. ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ಅಕ್ಕಮ್ಮ (35) ಮೃತ ದೇಹ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಮತ್ತೊಂದೆಡೆ ಹಿರಿಯ ಪತ್ರಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಈ ಎರೆಡು ಘಟನೆಗಳ ವಿವರ ಇಲ್ಲಿದೆ.

ಪ್ರತ್ಯೇಕ ಘಟನೆ: ರೈಲ್ವೇ ಹಳಿಯಲ್ಲಿ ಲೇಡಿ ಕಂಡಕ್ಟರ್ ಶವ ಪತ್ತೆ, ಕಲಬುರಗಿಯಲ್ಲಿ ಹಿರಿಯ ಪತ್ರಕರ್ತ ಆತ್ಮಹತ್ಯೆ
ಅಕ್ಕಮ್ಮ
Follow us on

ಗದಗ, (ಸೆಪ್ಟೆಂಬರ್ 06): ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ರೈಲ್ವೇ ಹಳಿಯ ಮೇಲೆ ಸಾರಿಗೆ ಬಸ್​ ಮಹಿಳಾ ಕಂಡಕ್ಟರ್(Bus conductor) ಶವ ಪತ್ತೆಯಾಗಿದೆ. ಗದಗ(Gadag) ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ಅಕ್ಕಮ್ಮ (35) ಮೃತ ದೇಹ ಪತ್ತೆಯಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ರೈಲೆಗೆ ತಲೆ ಕೊಟ್ಟಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದ್ರೆ, ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಗದಗ ರೈಲ್ವೆ ಪೊಲೀಸ್​ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಿಮ್ಮಾಪುರ ಗ್ರಾಮದ ಬಳಿಯ ತಮ್ಮ ಜಮೀನಿನ ಬಳಿ ಇರುವ ರೈಲ್ವೇ ಹಳಿಯಲ್ಲೇ ಅಕ್ಕಮ ಅವರ ಮೃತದೇಹ ಪತ್ತೆಯಾಗಿದ್ದು, ಈ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಅನುಮಾನಗಳು ಹುಟ್ಟಿಕೊಂಡಿದ್ದು, ಪೊಲೀಸ್​ ತನಿಖೆ ಬಳಿಕ ಸತ್ಯಾಸತ್ಯ ತಿಳಿಯಲಿದೆ.

ಇದನ್ನೂ ಓದಿ: ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಸಂತ್ರಸ್ತ ಬಾಲಕಿ ಗರ್ಭಿಣಿ, 3 ಮಕ್ಕಳ ತಂದೆಯಿಂದ ನೀಚ ಕೃತ್ಯ -ಅರೆಸ್ಟ್​ 

ಹಿರಿಯ ಪತ್ರಕರ್ತ ಆತ್ಮಹತ್ಯೆ

ಕಲಬುರಗಿ: ಹಿರಿಯ ಪತ್ರಕರ್ತರೊಬ್ಬರು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಲ್ಲೂರು ಗ್ರಾಮದವರಾಗಿದ್ದ ಹಿರಿಯ ಪತ್ರಕರ್ತ ಕೆ ಎನ್ ರೆಡ್ಡಿ (58) ಕಲಬುರಗಿ ನಗರದ ಜಿಡಿಎ ಕಾಲೋನಿ ವಾಸವಾಗಿದ್ದರು. ಅನೇಕ ಪತ್ರಿಕೆ ಹಾಗೂ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದ ಕೆ.ಎನ್ ರೆಡ್ಡಿ ಅವರು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ, ಆತ್ಮಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:31 am, Wed, 6 September 23