ಪಠ್ಯಪುಸ್ತಕದಲ್ಲಿ ವೀರಶೈವ ಪದಕ್ಕೆ ಕೋಕ್; ಸರ್ಕಾರದ ನಡೆಗೆ ಜೋಶಿ, ಬೊಮ್ಮಾಯಿ ಖಂಡನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 30, 2024 | 5:50 PM

ಈ ವರ್ಷ ಪರಿಷ್ಕರಣೆಗೊಂಡಿರುವ 9ನೇ ತರಗತಿ ಸಮಾಜವಿಜ್ಞಾನ ಪಠ್ಯದಲ್ಲಿ ವೀರಶೈವ ಪದವನ್ನು ಕೈಬಿಡಲಾಗಿದ್ದು, ಈ ಬಗ್ಗೆ ಸರ್ಕಾರದ ವಿರುಧ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಹಿನ್ನಲೆ ಈಗ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಪ್ರಹ್ಲಾದ್​ ಜೋಶಿ ಪ್ರತಿಕ್ರಿಯಿಸಿ ಸರ್ಕಾರದ ನಡೆ ಖಂಡಿಸಿದ್ದಾರೆ.

ಪಠ್ಯಪುಸ್ತಕದಲ್ಲಿ ವೀರಶೈವ ಪದಕ್ಕೆ ಕೋಕ್; ಸರ್ಕಾರದ ನಡೆಗೆ ಜೋಶಿ, ಬೊಮ್ಮಾಯಿ ಖಂಡನೆ
ವೀರಶೈವ ಪದಕ್ಕೆ ಕೋಕ್; ಸರ್ಕಾರದ ನಡೆಗೆ ಜೋಶಿ, ಬೊಮ್ಮಾಯಿ ಖಂಡನೆ
Follow us on

ಗದಗ, ಜೂ.30: ಈ ವರ್ಷ ಪರಿಷ್ಕೃತಗೊಂಡಿರುವ 9 ನೇ ತರಗತಿ ಶಾಲಾ ಮಕ್ಕಳ ಪಠ್ಯಪುಸ್ತಕದಲ್ಲಿ ‘ವೀರಶೈವ’(Veerashaiva) ಪದ ತೆಗೆದಿರುವ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಹಿನ್ನಲೆ ಪಠ್ಯದ ದೋಷ ಸರಿಪಡಿಸದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ  ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.

ಪ್ರಹ್ಲಾದ್ ಜೋಶಿ ವಾಗ್ದಾಳಿ

ಇನ್ನು ಶಾಲಾ ಮಕ್ಕಳ ಪಠ್ಯಪುಸ್ತಕದಲ್ಲಿ ವೀರಶೈವ ಪದ ತೆಗೆದಿರುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದು, ‘ಸಿದ್ದರಾಮಯ್ಯ ಸರ್ಕಾರ ಮತ್ತೆ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಈ ಮೊದಲು ಪಠ್ಯದಲ್ಲಿ ವೀರಶೈವ ಲಿಂಗಾಯತ ಅಂತಾ ಇತ್ತು. ಈಗ ಪಠ್ಯದಿಂದ ವೀರಶೈವ ಪದ ತೆಗೆದಿದ್ದಾರೆ. ಅನಗತ್ಯವಾಗಿ ಕಿಚ್ಚು ಹಚ್ಚುವ ಕೆಲಸ ಕಾಂಗ್ರೆಸ್​​ ಸರ್ಕಾರ ಮಾಡಿದೆ ಎಂದರು.

ಇದನ್ನೂ ಓದಿ:ಜಾತಿಗಣತಿ ವರದಿಯನ್ನು ಸರ್ಕಾರ ಅಂಗೀಕರಿಸಬಾರದು: ವೀರಶೈವ ಮಹಾಸಭಾ ಒತ್ತಾಯ

ಸಮಸ್ಯೆ ಸರಿಪಡಿಸಿ ಬೊಮ್ಮಾಯಿ ಆಗ್ರಹ

ಈ ಕುರಿತು ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ‘9 ನೇ ತರಗತಿ ಪಠ್ಯದಲ್ಲಿ ವೀರಶೈವ ಪದ ತೆಗೆಯಲಾಗಿದೆ  ಅಂತಿದ್ದಾರೆ. ನಾನು ಗಮನಿಸಿಲ್ಲ, ಹಾಗೇನಾದ್ರೂ ಆಗಿದ್ರೆ ಸರಿಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದರು. ಇನ್ನು
ಹಾವೇರಿ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಮುರುಗೇಶ್ ನೀರಾಣಿ ಎಂಟ್ರಿ ವಿಚಾರ, ‘ನಾನು ಅವರ ಬಳಿ ಚರ್ಚೆ ಮಾಡಿಲ್ಲ. ಅವ್ರು ನನ್ನ ಬಳಿ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ಸಿಎಂ, ಡಿಸಿಎಂ ವಿಷಯವಾಗಿ ಸ್ವಾಮೀಜಿಗಳಿಂದ ಹೇಳಿಕೆ ಕುರಿತು ಗದಗನಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಮಾತನಾಡಿ, ‘
ಸ್ವಾಮೀಜಿಯವರು ಅವರ ಅಭಿಪ್ರಾಯ ಹೇಳ್ತಾರೆ. ಆದ್ರೆ, ರಾಜಕಾರಣಕ್ಕೆ ವಿಧಿವಿಧಾನಗಳಿವೆ. ಸ್ವಾಮೀಜಿಗಳ ಹೇಳಿಕೆ ಬಗ್ಗೆ ವ್ಯಾಖ್ಯಾನ ಮಾಡಲ್ಲ. ಆದ್ರೆ, ಯಾರನ್ನ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು. ಮೂರು ನಾಲ್ಕು ಡಿಸಿಎಂಗಳನ್ನ ಮಾಡ್ಬೇಕಾ ಎನ್ನುವುದು ಕಾಂಗ್ರೆಸ್​ಗೆ ಬಿಟ್ಟಿದ್ದು. ಅವರ ಆಂತರಿಕ ವಿಚಾರವಾಗಿ ನಾನು ಕಮೆಂಟ್ ಮಾಡಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ