ಮಳೆಯ ಅಬ್ಬರಕ್ಕೆ ಕೆರೆ ಭರ್ತಿ: ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ಸಂಕಷ್ಟ, ರೈತರ ಕಣ್ಣೀರು ಒರೆಸಲು ಬಾರದ ಅಧಿಕಾರಿಗಳು

| Updated By: ಆಯೇಷಾ ಬಾನು

Updated on: Sep 04, 2022 | 6:34 PM

ಕೆರೆ ಕೋಡಿ ಬಿದ್ದು, ಗೋವಿನಜೋಳ, ಈರುಳ್ಳಿ, ಹತ್ತಿ ಬೆಳೆ ಜಲಾವೃತ್ತವಾಗಿದೆ. ಆದ್ರೆ ಈವರೆಗೆ ಯಾವುದೇ ಅಧಿಕಾರಿಗಳು ಕೂಡಾ ಜಮೀನಿಗೆ ಭೇಟಿ ಮಾಡಿಲ್ಲಾ. ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ್, ಗ್ರಾಮಕ್ಕೆ ಬಂದ್ರು ಜಮೀನುಗಳಿಗೆ ಭೇಟಿ ನೀಡಲ್ವಂತೆ.

ಮಳೆಯ ಅಬ್ಬರಕ್ಕೆ ಕೆರೆ ಭರ್ತಿ: ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ಸಂಕಷ್ಟ, ರೈತರ ಕಣ್ಣೀರು ಒರೆಸಲು ಬಾರದ ಅಧಿಕಾರಿಗಳು
ಮಳೆಯ ಅಬ್ಬರಕ್ಕೆ ಕೆರೆ ಭರ್ತಿ
Follow us on

ಗದಗ: ಕೆರೆ ಭರ್ತಿಯಾದ್ರೆ, ಬಹುತೇಕ ರೈತರಿಗೆ ವರದಾನವಾಗುತ್ತೆ. ಆದ್ರೆ, ಇಲ್ಲಿ ಒಂದು ಗ್ರಾಮದ ರೈತರಿಗೆ ಅನುಕೂಲವಾದ್ರೆ, ಮತ್ತೊಂದು ಗ್ರಾಮಕ್ಕೆ ಸಂಕಷ್ಟ ಎದುರಾಗಿದೆ. ಕೆರೆ ಕೋಡಿ ಬಿದ್ದು, ಅಪಾರ ಪ್ರಮಾಣದ ಬೆಳೆ ಹಾಗೂ ಜಮೀನು ಹಾಳಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಅನ್ನದಾತರ ಸಂಕಷ್ಟದಲ್ಲಿದ್ರು ಆ ಭಾಗದ ಶಾಸಕರು ಊರಿನ ಮಠಕ್ಕೆ ಬಂದ್ರೂ ರೈತರ ಜಮೀನುಗಳಿಗೆ ಭೇಟಿ ನೀಡಿಲ್ಲ ಅಂತ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಣ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಅದರಲ್ಲೂ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆಯ ಅಟ್ಟಹಾಸಕ್ಕೆ ಅನ್ನದಾತರ ಬದುಕು ಬೀದಿಗೆ ಬಂದಿದೆ. ಕೆರೆ ಹಳ್ಳ ಕೊಳ್ಳಗಳ್ಳು ತುಂಬಿ ಹರಿಯುತ್ತಿವೆ. ಇನ್ನೂ ಕೆರೆ ತುಂಬಿದ್ರೆ ಅನ್ನದಾತರ ಹರ್ಷ ಪಡೋದು ಸಾಮಾನ್ಯ. ಆದ್ರೆ, ಆ ಗ್ರಾಮದ ರೈತರು ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದಕ್ಕೆ ಆತಂಕಕ್ಕೆ ಒಳಗಾಗಿದ್ದಾರೆ. ಗದಗ ತಾಲೂಕಿನ ಚಿಕ್ಕಹಂದಿಗೋಳ ಗ್ರಾಮಸ್ಥರು ಹಾಗೂ ರೈತರಿಗೆ ಕೆರೆ ಶಾಪವಾಗಿದೆ. 818 ಹೆಕ್ಟೇರ್ ಪ್ರದೇಶದಷ್ಟು ವಿಸ್ತೀರ್ಣ ಇರೋ ಚಿಕ್ಕಹಂದಿಗೋಳ ಗ್ರಾಮದ ಕೆರೆ 50 ವರ್ಷಗಳ ಬಳಿಕ ಸಂಪೂರ್ಣವಾಗಿ ಭರ್ತಿಯಾಗಿದೆ. ಕೆರೆ ಭರ್ತಿಯಾಗಿ, ಕೋಡಿ ಬಿದ್ದಿದ್ದು, ಯರ್ರಾಬಿರ್ರಿ ಹರಿದ ಪರಿಣಾಮ ಅಪಾರ ಪ್ರಮಾಣದ ನೀರು ಜಮೀನುಗಳಲ್ಲಿ ನುಗ್ಗಿ ಬೆಳೆ ನಾಶವಾಗಿದೆ.

ಈ ಹಿಂದೆ ಈ ಚಿಕ್ಕಹಂದಿಗೋಳ ಗ್ರಾಮದ ಕೆರೆ ನೀರಿನಿಂದ ಈ ಭಾಗದ ರೈತರು ನೀರಾವರಿ ಮಾಡ್ತಾಯಿದ್ರು. ಆದ್ರೆ ಕೆರೆ ನೀರಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಇರೋದರಿಂದ ಜಮೀನು ಹಾನಿಯಾಗಿವೆ. ಯಾವುದೇ ಬೆಳೆ ಬೆಳೆಯದೆ ಬರಡು ಆಗ್ತಾಯಿತ್ತು. ಗ್ರಾಮದಲ್ಲಿ ಬೋರ್ ಹಾಕಿದ್ರು ಹನಿ ನೀರು ಬಿಳಲ್ವಂತೆ. ಆದ್ರೆ, ಪಕ್ಕದ ಶ್ಯಾಗೋಟಿ, ಸಾಸವಿಹಳ್ಳಿ ಗ್ರಾಮದ ಭಾಗದಲ್ಲಿ ಬೋರ್ ವೆಲ್ ನೀರು ಬಿಳ್ತಾವೆ. ಆದ್ರೆ ಈ ಭಾರಿ ಸತತವಾಗಿ ಸುರಿದ ಮಳೆಯಿಂದ ಕೆರೆ ಕೋಡಿ ಬಿದ್ದು, ಜಮೀನುಗಳಿಗೆ ನುಗ್ಗಿ ಬೆಳೆ ನಾಶವಾಗಿದೆ. ಫಲವತ್ತಾದ ಜಮೀನು ಸವಕಳಿ ಬಂದಿದ್ದು, ಬೆಳೆ ಕೂಡಾ ನಾಶವಾಗಿದೆ. ಇಷ್ಟೆಲ್ಲಾ ಹಾನಿಯಾದ್ರೂ ಕ್ಷೇತ್ರದ ಶಾಸಕರು ಆದ ಸಚಿವ ಸಿ.ಸಿ ಪಾಟೀಲ್ ಹಾಗೂ ಅಧಿಕಾರಿಗಳು ಸಂಕಷ್ಟ ಕೇಳ್ತಾಯಿಲ್ಲ ಅಂತ ರೈತ ಬಸವರಾಜ್ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆರೆ ಕೋಡಿ ಬಿದ್ದು, ಗೋವಿನಜೋಳ, ಈರುಳ್ಳಿ, ಹತ್ತಿ ಬೆಳೆ ಜಲಾವೃತ್ತವಾಗಿದೆ. ಆದ್ರೆ ಈವರೆಗೆ ಯಾವುದೇ ಅಧಿಕಾರಿಗಳು ಕೂಡಾ ಜಮೀನಿಗೆ ಭೇಟಿ ಮಾಡಿಲ್ಲಾ. ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ್, ಗ್ರಾಮಕ್ಕೆ ಬಂದ್ರು ಜಮೀನುಗಳಿಗೆ ಭೇಟಿ ನೀಡಲ್ವಂತೆ. ರೈತರ ಸಂಕಷ್ಟ ಆಲಿಸಿಲ್ಲ ಅಂತ ರೈತರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಂದ್ರೆ ಮತ ಕೇಳೋಕೆ ಬರ್ತಾರೆ. ನಾವು ಸಂಕಷ್ಟದಲ್ಲಿದ್ದಾರೆ ಬರಲ್ಲ. ಮುಂದಿನ ದಿನಗಳಲ್ಲಿ ನಾವೂ ಪಾಠ ಕಲಿಸ್ತೀವಿ ಅಂತ ಅನ್ನದಾತರು ಕಿಡಿಕಾರಿದ್ದಾರೆ. ರೈತರು ಸಾಲ ಸೂಲ ಮಾಡಿ ಬೆಳೆದ ಬೆಳೆ ನಾಶವಾಗಿದೆ. ಆದ್ರೆ, ನರಗುಂದ ವಿಧಾನಸಭಾ ಕ್ಷೇತ್ರದ ಕೊನೆ ಗ್ರಾಮವಾದ ಚಿಕ್ಕಹಂದಿಗೋಳ ಗ್ರಾಮಕ್ಕೆ ಬಂದ್ರು, ಬೆಳೆ ನಾಶವಾದ ಪ್ರದೇಶಕ್ಕೆ ಬಂದಿಲ್ಲಾ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ವೋಟ್ ಕೇಳಿಲ್ಲು ಮಾತ್ರ, ಬರ್ತಾರೆ, ಆದ್ರೆ ರೈತರ ಸಮಸ್ಯೆಗಳನ್ನು ಆಲಿಸಿಲ್ಲಾ. ಈ ಭಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಅಂತ ಚಿಕ್ಕ ಹಂದಿಗೋಳ ಗ್ರಾಮದ ರೈತ ಶರೀಫ್ ಸಾಬ್ ಆಕ್ರೋಶ ಹೊರಹಾಕಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

Published On - 6:34 pm, Sun, 4 September 22