ಸರ್ಕಾರ ಅದೂ-ಇದೂ ಫ್ರೀ ಅಂತಿದೆ, ಮೊದ್ಲು ಕುಡಿಯೋಕೆ ನೀರು ಕೊಡ್ಲಿ ಸಾಕು ಎಂದ ಮಹಿಳೆಯರು ಮತ್ತು ಪೊಲೀಸ್ ಅಧಿಕಾರಿ ನಡುವೆ ವಾಗ್ವಾದ, ಎಲ್ಲಿ?
ಗದಗ: ಮಳೆಗಾಲ ಶುರುವಾಗಿದೆ. ಆದ್ರೂ ಆ ಅವಳಿ ನಗರದಲ್ಲಿ ಜನರು ಹನಿ ನೀರಿಗಾಗಿ ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ನೀರು ಕೊಡಿ ನೀರು ಕೊಡಿ ಅಂತ ಬೇಡಿಕೊಂಡ್ರು ಕ್ಯಾರೇ ಎಂದಿಲ್ಲ. ಹೀಗಾಗಿ ರೊಚ್ಚಿಗೆದ್ದ ಮಹಿಳೆಯರು ಖಾಲಿ ಕೊಡಗಳ ಸಮೇತ ಬೀದಿಗಿಳಿದಿದ್ರು. ಆದ್ರೆ, ನೀರು ಕೇಳಿದ ಮಹಿಳೆಯರಿಗೆ ಪೊಲೀಸ್ರು ಅವಾಜ್ ಹಾಕಿದ್ದು, ಅವಳಿ ನಗರದ ಜನ್ರ ಕೋಪಕ್ಕೆ ಕಾರಣವಾಗಿದೆ...
1 / 7
ಗದಗ: ಮಳೆಗಾಲ ಶುರುವಾಗಿದೆ. ಆದ್ರೂ ಆ ಅವಳಿ ನಗರದಲ್ಲಿ ಜನರು ಹನಿ ನೀರಿಗಾಗಿ ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ನೀರು ಕೊಡಿ ನೀರು ಕೊಡಿ ಅಂತ ಬೇಡಿಕೊಂಡ್ರು ಕ್ಯಾರೇ ಎಂದಿಲ್ಲ. ಹೀಗಾಗಿ ರೊಚ್ಚಿಗೆದ್ದ ಮಹಿಳೆಯರು ಖಾಲಿ ಕೊಡಗಳ ಸಮೇತ ಬೀದಿಗಿಳಿದಿದ್ರು. ಆದ್ರೆ, ನೀರು ಕೇಳಿದ ಮಹಿಳೆಯರಿಗೆ ಪೊಲೀಸ್ರು ಅವಾಜ್ ಹಾಕಿದ್ದು, ಅವಳಿ ನಗರದ ಜನ್ರ ಕೋಪಕ್ಕೆ ಕಾರಣವಾಗಿದೆ...
2 / 7
ಕುಡಿಯುವ ನೀರಿಗಾಗಿ ಖಾಲಿ ಕೊಡಗಳ ಸಮೇತ ನೀರೆಯರ ಹೋರಾಟ. ರಸ್ತೆಯಲ್ಲಿ ಖಾಲಿ ಕೊಡಗಳನ್ನು ಮತ್ತು ಕಲ್ಲುಗಳನ್ನಿಟ್ಟು ಮಹಿಳೆಯರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರ ಪ್ರತಿಭಟನೆಗೆ ಪೊಲೀಸರಿಂದ ತಡೆ. ಆ ವೇಳೆ ಪೊಲೀಸ್ರು, ಮಹಿಳೆಯರ ನಡುವೆ ವಾಗ್ವಾದ. ಸರ್ ನೀರು ಕೊಟ್ರೆ ನಾವ್ಯಾಕೇ ಬೀದಿಗೆ ಬರ್ತೀವಿ ಅಂತ ಮಹಿಳೆಯರ ಆಕ್ರೋಶ. ಎಸ್ ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ ನಗರದ ಚೆನ್ನಮ್ಮ ಸರ್ಕಲ್ ನಲ್ಲಿ.
3 / 7
ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ತಿಂಗಳುಗಳು ಕಳೆದ್ರೂ ಕುಡಿಯುವ ನೀರು ಪೂರೈಕೆ ಆಗ್ತಾಯಿಲ್ಲ. ಬಹತೇಕ ವಾರ್ಡ್ ಗಳಲ್ಲಿ ನೀರಿನ ಬವಣೆಗೆ ಜನ್ರು ಹೈರಾಣಾಗಿದ್ದಾರೆ. ಇಂದು 33ನೇ ವಾರ್ಡ್ ಜನ್ರು ದಿಢೀರ್ ಖಾಲಿ ಕೊಡಗಳ ಸಮೇತ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್ ಬಂದಿದ್ದು, ಪ್ರತಿಭಟನಾಕಾರರು ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟಿದ್ದಾರೆ. ಆದ್ರೆ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ದರ್ಪಕ್ಕೆ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ನೀರು ಕೊಟ್ರೆ ನಾವ್ಯಾಕೇ ರಸ್ತೆ ತಡೆ ಮಾಡ್ತೀವಿ. ಪೊಲೀಸ್ ಅಧಿಕಾರಿ ದರ್ಪಕ್ಕೆ ಮಹಿಳೆಯರು ಕೆಂಡಾಮಂಡಲವಾಗಿದ್ದಾರೆ.
4 / 7
ಸರ್ಕಾರ ಬಸ್ ಫ್ರೀ, ಅಕ್ಕಿ ಫ್ರೀ ಅಂತಿದೆ. ಮೊದ್ಲು ನಮಗೆ ಕುಡಿಯೋಕೆ ನೀರು ಕೊಡ್ಲಿ ಸಾಕು ಅಂತ ನಾರಿಯರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ದರ್ಪಕ್ಕೆ ಮಹಿಳೆಯರು ಗರಂ ಆಗಿದ್ದಾರೆ. ಗದಗ ನಗರಸಭೆ ಅಧಿಕಾರಿಗಳಿಗೆ ಹೇಳೋರೋ ಕೇಳೋರು ಇಲ್ಲದಂತಾಗಿದೆ. ಕುಡಿಯುವ ನೀರು ಕೊಡಿ ಅಂತ ಅಧಿಕಾರಿಗಳು, ಸದಸ್ಯರಿಗೆ ಜನ್ರು ಮನವಿ ಮಾಡಿದ್ರೂ ಕ್ಯಾರೇ ಎಂದಿಲ್ಲ.
5 / 7
ಹೀಗಾಗಿ ಕೋಪಗೊಂಡ ಮಹಿಳೆಯರು ರಸ್ತೆ ಇಳಿದು ಹೋರಾಟ ಮಾಡಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಒಂದು ತಿಂಗಳಿಂದ ಕುಡಿಯುವ ನೀರು ಪೂರೈಕೆ ಇಲ್ಲದೇ 33ನೇ ವಾರ್ಡ್ ಜನ್ರು ಕಂಗಾಲಾಗಿದ್ದಾರೆ. ನೀರು ಕೇಳಲು ಬಂದ ಮಹಿಳೆಯರಿಗೆ ಪೊಲೀಸ್ ಅಧಿಕಾರಿಗಳು ಅವಾಜ್ ಹಾಕಿದ್ದಾರೆ. ಗದಗ ಶಹರ್ ಪೊಲೀಸ್ ಠಾಣೆ ಸಿಪಿಐ ಜಯಂತ್ ಗೌಳಿ ಇನ್ಮೊಮ್ಮೆ ಬೀದಿಗೆ ಬಂದ್ರೆ ನೀರು ತರುವ ಗಾಡಿಗಳು ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ತನೆ ಅವಳಿ ನಗರದ ಜನ್ರ ಅಸಮಾಧಾನಕ್ಕೆ ಕಾರಣವಾಗಿದೆ.
6 / 7
7 / 7
ನೀರು ಇಲ್ಲಾ ಅಂತ ರಸ್ತೆ ತಡೆ ಮಾಡಿದ್ದೇವೆ. ಆದ್ರೆ, ನೀರು ಕೇಳಿದ್ರೆ ಪೊಲೀಸ್ರು ಅವಾಜ್ ಹಾಕ್ತಾರೆ. ಇನ್ನೂ ಚುನಾವಣೆಯಲ್ಲಿ ಕೈ ಮುಗಿದು ಮತ ಕೇಳಿದ್ರು. ಆದ್ರೆ ಈಗ ನಮಗೆ ನೀರು ಕೊಡ್ತಿಲ್ಲ ಅಂತ ಮಹಿಳೆಯರ ಕಿಡಿಕಾರಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನಗರಸಭೆ ಆಡಳಿತಕ್ಕೆ ಬಿಸಿ ಮುಟ್ಟಿಸಿ ಜನ್ರಿಗೆ ನೀರು ಕೊಡಿಸುವಂತೆ ಮಾಡಲಿ ಅಂತ ಮಹಿಳೆಯರು ಒತ್ತಾಯಿಸಿದ್ದಾರೆ.