Gadag: ಸರ್ಕಾರಿ ಬಸ್ ಹತ್ತಲು ಬಿಡದ ಮಹಿಳೆಯರು, ಕಿಟಕಿಯಿಂದ ಒಳಗೆ ಹೋದ ಪುರುಷ ಪ್ರಯಾಣಿಕ
ಶಕ್ತಿ ಯೋಜನೆ ಹಿನ್ನೆಲೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರದ್ದೇ ಹವಾ ಸೃಷ್ಟಿಯಾಗಿದ್ದು, ಪುರುಷರು ಬಸ್ ಒಳಗೆ ಪ್ರವೇಶಿಸಲು ಇನ್ನಿಲ್ಲದ ಸಾಹಸ ಮಾಡಬೇಕಿದೆ. ಗದಗದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಗದಗ: ಉಚಿತ ಪ್ರಯಾಣ (Free Travel) ಜಾರಿಯಾದ ನಂತರ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರದ್ದೇ ಹವಾ ಸೃಷ್ಟಿಯಾಗಿದ್ದು, ಬಸ್ ಏರಲು ಅವರ ನಡುವೆಯೇ ನೂಕುನುಗ್ಗಲು ನಡೆಯುತ್ತಿದೆ. ಇತ್ತ ಯಾರಿಗೆ ಹೇಳೋಣ ಪುರುಷರು ಪ್ರಾಬ್ಲಮ್ ಎಂಬಂತಾಗಿದೆ. ಏಕೆಂದರೆ, ಮಹಿಳೆಯರ ನಡುವೆ ಬಸ್ ಏರಲು ಕಷ್ಟಸಾಧ್ಯವಾಗುತ್ತಿದೆ. ಆದರೆ ಇಲ್ಲಬ್ಬ ಪುರುಷ ಪ್ರಯಾಣಿಕ ವಿಧಿಯಿಲ್ಲದೆ ಕಿಟಕಿಯಿಂದ ಹತ್ತಿ ಬಸ್ ಒಳಗೆ ಪ್ರವೇಶಿಸಿದ್ದಾನೆ. ಈ ಘಟನೆ ಗದಗ (Gadag) ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ. ಈ ಹಿಂದೆ, ಮಹಿಳಾ ಪ್ರಯಾಣಿಕರೂ ಕಿಟಕಿಯಿಂದ ಹತ್ತುವ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿತ್ತು. ಅಲ್ಲದೆ, ಬಸ್ ಒಳಗೆ ಪ್ರಯಾಣಿಕರು ತುಂಬಿರುವ ಹಿನ್ನೆಲೆ ಸೀಟುಗಳ ಮೇಲೆ ಕಂಡಕ್ಟರ್ ಹತ್ತಿ ಟಿಕೆಟ್ ಪಡೆಯುತ್ತಿರುವುದು ಕೂಡ ವೈರಲ್ ಆಗಿತ್ತು.
ಇದನ್ನೂ ಓದಿ: Shakti scheme: ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಪುರುಷರಿಗೆ ಶಾಪವಾಗಿ ಪರಿಣಮಿಸಿದೆಯಾ?
ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಡಿಕೆಶಿಗೆ ಮೊದಲು ಎಂಎಲ್ಎ ಟಿಕೆಟ್ ಕೊಡಿಸಿದ್ದೇ ನಾನು; ವೀರಪ್ಪ ಮೊಯ್ಲಿ

ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು; ಮಾರ್ಚ್ 14ರಂದು ನಾಮಕರಣ

ಪ್ರಿಯಕರನ ಜೊತೆ ಸೇರಿ ನಡುರಸ್ತೆಯಲ್ಲೇ ಗಂಡನನ್ನು ಥಳಿಸಿದ ಹೆಂಡತಿ!

ರೈತರಿಗೆ, ರೈತರ ಮಕ್ಕಳಿಗೆ ಒಳ್ಳೆಯದಾಗಲಿ: ವಿಜಯಲಕ್ಷ್ಮಿ ದರ್ಶನ್ ಹಾರೈಕೆ
