Shakti scheme: ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಪುರುಷರಿಗೆ ಶಾಪವಾಗಿ ಪರಿಣಮಿಸಿದೆಯಾ?

Shakti scheme: ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಪುರುಷರಿಗೆ ಶಾಪವಾಗಿ ಪರಿಣಮಿಸಿದೆಯಾ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 15, 2023 | 3:24 PM

ಎಲ್ಲ ಬಸ್ ಗಳಲ್ಲಿ ಮಹಿಳೆಯರೇ ತುಂಬಿರುವುದರಿಂದ ಪ್ರಯಾಣ ಮಾಡುವುದು ಕಷ್ಟವಾಗುತ್ತಿದೆ ಎಂದು ಪುರುಷರು ಹೇಳುತ್ತಿದ್ದಾರೆ

ಮಂಡ್ಯ: ಸರ್ಕಾರ ಘೋಷಿಸಿರುವ ಶಕ್ತಿ ಯೋಜನೆ (Shakti Scheme) ರಾಜ್ಯದಾಂದ್ಯತ ಮಹಿಳೆಯರನ್ನು ಸಂತೋಷಡಿಸಿದ್ದರೆ, ಪುರುಷರು (men) ಹಿಡಿಶಾಪ ಹಾಕುವಂತೆ ಮಾಡಿದೆ. ಮಂಡ್ಯದ ಕೇಂದ್ರ ಬಸ್ ನಿಲ್ದಾಣದಲ್ಲಿ (Mandya Central Bus Stop) ಕಾಣುತ್ತಿರುವ ದೃಶ್ಯ ಎಲ್ಲ ನಿಲ್ದಾಣಗಳಲ್ಲೂ ಸಾಮಾನ್ಯ ಅನಿಸಿಬಿಟ್ಟಿದೆ. ಪುರುಷ ಪ್ರಯಾಣಿಕರ ಅಸಮಾಧಾನವೆಂದರೆ, ಎಲ್ಲ ಬಸ್ ಗಳಲ್ಲಿ ಮಹಿಳೆಯರು ತುಂಬಿರುವುದರಿಂದ ಪ್ರಯಾಣ ಮಾಡುವುದು ಕಷ್ಟವಾಗುತ್ತಿದೆ. ಸರ್ಕಾರ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಬಗ್ಗೆ ದೂರು ಇಲ್ಲ, ಆದರೆ ಬಸ್ ಗಳ ಸಂಖ್ಯೆಯನ್ನು ಸರ್ಕಾರ ಹೆಚ್ಚಿಸಲಿ ಎಂದು ಅವರು ಹೇಳುತ್ತಿದ್ದಾರೆ. ಇಲ್ಲೊಬ್ಬ ಉದ್ಯೋಗಿ ಬೆಂಗಳೂರಿಗೆ ಹೋಗಬೇಕಿದೆ, ಆದರೆ ಬಸ್ ಗಳಲ್ಲಿ ಹೆಚ್ಚಿನ ಮಹಿಳೆಯರು ಹಾಗೂ ವಾಹನಗಳ ಅಭಾವದಿಂದ ಸಕಾಲಕ್ಕೆ ಅಫೀಸ್ ತಲುಪಲಾಗದು ಅಂತ ಗೋಳಿಡುತ್ತಿದ್ದಾರೆ. ವಿಡಿಯೋದಲ್ಲಿ ಕಾಣುತ್ತಿರುವ ಬಸ್ಸಲ್ಲಿ ಪುರುಷರು ಡೋರ್ ಬಳಿ ನೇತಾಡುತ್ತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ