Free Bus Travel: ಭಾನುವಾರ ಕೇವಲ ಅರ್ಧದಿನದಲ್ಲಿ 5.7 ಲಕ್ಷಕ್ಕೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಬಸ್​ಗಳಲ್ಲಿ ಉಚಿತವಾಗಿ ಪಯಣಿಸಿದರು!

Free Bus Travel: ಭಾನುವಾರ ಕೇವಲ ಅರ್ಧದಿನದಲ್ಲಿ 5.7 ಲಕ್ಷಕ್ಕೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಬಸ್​ಗಳಲ್ಲಿ ಉಚಿತವಾಗಿ ಪಯಣಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 12, 2023 | 6:32 PM

ಈಗ ಆ ಹಣವನ್ನು ಸರ್ಕಾರವೇ ನಿಗಮಕ್ಕೆ ಪಾವತಿಸಬೇಕು, ಸರ್ಕಾರ ನೀಡುವುದು ತಡವಾದರೆ, ನೌಕರರ ಸಂಬಳವೂ ವಿಳಂಬವಾಗುತ್ತದೆ!

ಬೆಂಗಳೂರು: ಶಕ್ತಿ ಯೋಜನೆಯ ಮೊದಲ ಅರ್ಧದಿನ ಅಂದರೆ ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಒಟ್ಟು 5,71,023 ಮಹಿಳೆಯರು ಸರ್ಕಾರ ನೀಡಿದ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನಾಲ್ಕು ಸಂಸ್ಥೆಗಳಿಂದ (corporations) ಮೊದಲ ದಿನದ ಬಿಲ್ ಅನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಒಟ್ಟು ಮೊತ್ತ ರೂ. 1,40,22,818.00ರಷ್ಟಿದೆ. ಅಂದರೆ, ಮಹಿಳೆಯರು ತಮ್ಮ ಪ್ರಯಾಣಕ್ಕೆ ಹಣ ಪಾವತಿಸಿದ್ದರೆ ನಿಗಮಕ್ಕೆ ಇಷ್ಟು ಹಣ ಜಮಾ ಆಗುತಿತ್ತು! ಈಗ ಆ ಹಣವನ್ನು ಸರ್ಕಾರವೇ ನಿಗಮಕ್ಕೆ ಪಾವತಿಸಬೇಕು, ಸರ್ಕಾರ ನೀಡುವುದು ತಡವಾದರೆ, ನೌಕರರ ಸಂಬಳವೂ (employees salary) ವಿಳಂಬವಾಗುತ್ತದೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.