Sign In

By signing in or creating an account, you agree with Associated Broadcasting Company's Terms & Conditions and Privacy Policy.

DCM’s popularity: ಮೈಸೂರಲ್ಲಿ ಡಿಕೆ ಶಿವಕುಮಾರ್​ರನ್ನು ನೋಡಲು ನೂಕುನುಗ್ಗಲು!

DCM’s popularity: ಮೈಸೂರಲ್ಲಿ ಡಿಕೆ ಶಿವಕುಮಾರ್​ರನ್ನು ನೋಡಲು ನೂಕುನುಗ್ಗಲು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 15, 2023 | 4:53 PM

ಮೈಸೂರು ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶಿವಕುಮಾರ್​ರನ್ನು ಸ್ವಾಗತಿಸಲು ಸಾವಿರಾರು ಜನ ನೆರೆದಿದ್ದರು.

ಮೈಸೂರು: ಮೈಸೂರು ಭಾಗದಲ್ಲಿ (Mysuru region) ಅಥವಾ ರಾಜ್ಯದ ಸಾಂಸ್ಕೃತಿಕ ನಗರಿಯಲ್ಲಿ ಕಾಂಗ್ರೆಸ್ ನಾಯಕರ ಪೈಕಿ ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾತ್ರ ಜನಪ್ರಿಯರು ಅಥವಾ ಹೆಚ್ಚು ಜನಪ್ರಿಯರು ಆಂತ ಅಂದುಕೊಂಡರೆ ಅದು ತಪ್ಪಾಗಬಹುದು ಮಾರಾಯ್ರೇ. ಯಾಕೆ ಅಂತ ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಮೈಸೂರಿಗೆ ಆಗಮಿಸಿದರು. ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಸಾವಿರಾರು ಜನ ನೆರೆದಿದ್ದರು. ಶಿವಕುಮಾರ್ ಅವರನ್ನು ಜನ ಯಾವ ಪರಿ ಸುತ್ತುವರಿದಿದ್ದರೆಂದರೆ, ಮಾಧ್ಯಮ ಪ್ರತಿನಿಧಿಗಳು ಕಾಯುತ್ತಿದ್ದ ಸ್ಥಳಕ್ಕೆ ಬರಲು ಉಪ ಮುಖ್ಯಮಂತ್ರಿ ನೂಕಾಡಿಕೊಂಡು, ತಳ್ಳಾಡಿಕೊಂಡು ಬರಬೇಕಾಯಿತು. ಶಿವಕುಮಾರ್ ಪಕ್ಕದಲ್ಲಿ ಒಬ್ಬ ಕುಳ್ಳನೆಯ ವ್ಯಕ್ತಿ ಮುಗಳ್ನಗುತ್ತಾ ನಿಂತಿದ್ದಾರೆ. ಪ್ರಮುಖ ನಾಯಕರು ನಗರಕ್ಕೆ ಬಂದಾಗ ಇಲ್ಲವೇ ಮೈಸೂರಿನವರಾಗಿರುವ ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ ಸುದ್ದಿಗೋಷ್ಟಿ ನಡೆಸುವಾಗ ಈ ವ್ಯಕ್ತಿ ಪಕ್ಕದಲ್ಲೇ ಕೂತು ಮುಗುಳ್ನಗುತ್ತಿರುತ್ತಾರೆ! ಅವರ ಮುಖದಿಂದ ಮುಗುಳ್ನಗು ಮಾಯವಾಗದು!!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ