Siddaramaiah: ಅನ್ನಭಾಗ್ಯ ಯೋಜನೆ ಜಾರಿ ಸಿಎಮ್ ಸಿದ್ದರಾಮಯ್ಯರ ನಿದ್ರೆ ಭಾಗ್ಯ ಕಸಿದುಕೊಂಡಿದೆ!

Siddaramaiah: ಅನ್ನಭಾಗ್ಯ ಯೋಜನೆ ಜಾರಿ ಸಿಎಮ್ ಸಿದ್ದರಾಮಯ್ಯರ ನಿದ್ರೆ ಭಾಗ್ಯ ಕಸಿದುಕೊಂಡಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 15, 2023 | 1:14 PM

ಸಭೆಗೆ ಅವರು ತಮ್ಮ ಎಂದಿನ ಗತ್ತಿನಲ್ಲಿ ವಿಧಾನ ಸೌಧಕ್ಕೆ ಆಗಮಿಸುತ್ತಿರುವದನ್ನು ವಿಡಿಯೋದಲ್ಲಿ ನೋಡಬಹುದು.

ಬೆಂಗಳೂರು: ಅನ್ನಭಾಗ್ಯ ಯೋಜನೆ (Anna Bhagya scheme) ಮುಖ್ಯಮಂತ್ರಿ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ನಿದ್ರೆ ಭಾಗ್ಯವನ್ನು ಕಸಿದುಕೊಂಡಂತಿದೆ. ಅನ್ನಬಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ (BPL families) ಅಕ್ಕಿ ವಿತರಿಸುವುದು ಸರ್ಕಾರದ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಅಕ್ಕಿ ನೀಡಿ ಎಂದು ಕೇಂದ್ರ ಸರ್ಕಾರದ ಮೊರೆಹೊಕ್ಕಿರುವ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಸಮಯಾವಾಕಾಶ ಸಹ ಕೋರಿದ್ದಾರೆ. ಏತನ್ಮಧ್ಯೆ, ಅನ್ನಭಾಗ್ಯ ಯೋಜನೆ ಜಾರಿಗೆ ತೊಡಕಾಗಿರುವ ಸಮಸ್ಯೆಗಳನ್ನು ಚರ್ಚಿಸಲು ಮುಖ್ಯಮಂತ್ರಿ ಸಂಪುಟ ಸಭೆಯೊಂದನ್ನು ಕರೆದಿದ್ದಾರೆ. ಸಭೆಗೆ ಅವರು ತಮ್ಮ ಎಂದಿನ ಗತ್ತಿನಲ್ಲಿ ವಿಧಾನ ಸೌಧಕ್ಕೆ ಆಗಮಿಸುತ್ತಿರುವದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ