CET Results announced: ಇಂಜಿನಿಯರಿಂಗ್ ವಿಭಾಗದ ಮೊದಲ 5 ರ‍್ಯಾಂಕ್ ಪಡೆದವರಲ್ಲಿ 3 ವಿದ್ಯಾರ್ಥಿಗಳು ಬೆಂಗಳೂರಿನವರು
ಸಚಿವರು ಹೇಳುವ ಪ್ರಕಾರ ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ
ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ ಎಮ್ ಸಿ ಸುಧಾಕರ್ (Dr MC Sudhakar) ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಮೇ 21 ಮತ್ತು 22 ರಂದು ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ (Common Entrance Test) ಫಲಿತಾಂಶಗಳನ್ನು ಪ್ರಕಟಿಸಿದರು. ಸಚಿವರು ಹೇಳುವ ಪ್ರಕಾರ ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ನಟರಾಜ್ ಕುಮಾರ್, ಕುಮಾರನ್ ಚಿಲ್ಡ್ರನ್ಸ್ ಹೋಮ್, ಬೆಂಗಳೂರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಆರ್ ವಿ ಪಿಯು ಕಾಲೇಜ್ ಜಯನಗರ, ಬೆಂಗಳೂರು ಕಾಲೇಜಿನ ಅರ್ಜುನನ್ ಕೃಷ್ಣಸ್ವಾಮಿ ಎರಡನೇ ರ‍್ಯಾಂಕ್ ಗಿಟ್ಟಿಸಿದ್ದಾರೆ. ಈ ವಿಭಾಗದಲ್ಲಿ ಮೂರನೇ ರ‍್ಯಾಂಕ್ ಸುಮೇಧ್ ಶೆಟ್ಟಿ, ವಿದ್ಯಾನಿಕೇತನ್ ಪಿಯು ಕಾಲೇಜ್, ಹುಬ್ಬಳ್ಳಿ ಪಾಲಾಗಿದೆ. ಸುಮೇಧ್ ಎಸ್ ಎಸ್-ಜಿಂದಾಲ್ ವಿದ್ಯಾಮಂದಿರ ಟೌನ್ ಶಿಪ್, ತೋರಣ್ ಗಲ್ 4 ನೇ ರ‍್ಯಾಂಕ್ ಪಡೆದಿದ್ದರೆ, ಬೆಂಗಳೂರು ಮಾರತ್ ಹಳ್ಳಿಯಲ್ಲಿರುವ ನಾರಾಯಣ-ಈ ಕಾಲೇಜಿನ ಮಾಧವ ಸೂರ್ಯ ತಾಡೇಪಲ್ಲಿ 5 ನೇ ರ‍್ಯಾಂಕ್ ಗಿಟ್ಟಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ