Chikkaballapur; ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ, ಅದಾನಿ ಮತ್ತು ಅಂಬಾನಿ ಮಾತ್ರ ಅವರಿಗೆ ಬೇಕು: ಪ್ರದೀಪ್ ಈಶ್ವರ್
ಛತ್ತೀಸ್ ಗಢ್ ನಿಂದ ಅಕ್ಕಿ ತರಿಸಿಕೊಳ್ಳುವುದು ರಾಜ್ಯ ಸರ್ಕರಕ್ಕೆ ಸಮಸ್ಯೆಯೇನೂ ಇಲ್ಲ ಆದರೆ, ಸಾರಿಗೆ ವೆಚ್ಚ ತುಂಬಾ ಅಗೋದ್ರಿಂದ ಅ ಆಪ್ಷನ್ ಅನ್ನು ಬದಿಗಿರಿಸಲಾಗಿದೆ ಎಂದು ಈಶ್ವರ್ ಹೇಳಿದರು.
ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ವಿರುದ್ದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ರಾಜ್ಯದ ಸಂಸದರ ಮೇಲೆ ಅದರಲ್ಲೂ ವಿಶೇಷವಾಗಿ ಪ್ರತಾಪ್ ಸಿಂಹ (Pratap Simha) ಮತ್ತು ತೇಜಸ್ವೀ ಸೂರ್ಯ (Tejasvi Surya) ವಿರುದ್ಧ ಹರಿಹಾಯ್ದರು. ಮಾಜಿ ಶಾಸಕ ಸಿಟಿ ರವಿಯನ್ನೂ ಶಾಸಕ ತರಾಟೆಗೆ ತೆಗದುಕೊಂಡರು. ಛತ್ತೀಸ್ ಗಢ್ ನಿಂದ ಅಕ್ಕಿ ತರಿಸಿಕೊಳ್ಳುವುದು ರಾಜ್ಯ ಸರ್ಕರಕ್ಕೆ ಸಮಸ್ಯೆಯೇನೂ ಇಲ್ಲ ಆದರೆ, ಸಾರಿಗೆ ವೆಚ್ಚ ತುಂಬಾ ಅಗೋದ್ರಿಂದ ಅ ಆಪ್ಷನ್ ಅನ್ನು ಬದಿಗಿರಿಸಲಾಗಿದೆ ಎಂದು ಈಶ್ವರ್ ಹೇಳಿದರು. ದೇಶದ ಶೇಕಡ 65 ಜನಕ್ಕೆ ಆಹಾರ ಭದ್ರತೆ ಸಿಗುವಂತಾಗಲು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಕಾಯ್ದೆ ಜಾರಿಗೊಳಿಸಿದಾಗ ಬಿಜೆಪಿ ಸರ್ಕಾರ ಶಾಂತಾರಾಮ್ ಆಯೋಗ ರಚಿಸಿ ಅದನ್ನು ಶೇಕಡ 40ಕ್ಕೆ ಇಳಿಸಿತ್ತು. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಅನ್ನೋದು ಇದರಿಂದ ಗೊತ್ತಾಗುತ್ತದೆ, ಇವರಿಗೆ ಅಂಬಾನಿ, ಅದಾನಿಯಂಥ ಶ್ರೀಮಂತರು ಮಾತ್ರ ಬೇಕು, ಬಡವರಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ