Madhu Bangarappa; ಕೇಂದ್ರ ಸರ್ಕಾರಕ್ಕೆ ತೆಗೆದುಕೊಳ್ಳೋದು ಮಾತ್ರ ಗೊತ್ತಿದೆ, ಕೊಡೋದು ಗೊತ್ತಿಲ್ಲ: ಮಧು ಬಂಗಾರಪ್ಪ, ಸಚಿವ

Madhu Bangarappa; ಕೇಂದ್ರ ಸರ್ಕಾರಕ್ಕೆ ತೆಗೆದುಕೊಳ್ಳೋದು ಮಾತ್ರ ಗೊತ್ತಿದೆ, ಕೊಡೋದು ಗೊತ್ತಿಲ್ಲ: ಮಧು ಬಂಗಾರಪ್ಪ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 20, 2023 | 4:37 PM

ರಾಜ್ಯ ಸರ್ಕಾರವೊಂದು ಜನಕಲ್ಯಾಣ ಯೋಜನೆ ಜಾರಿಮಾಡುವಾಗ ಫೆಡರಲ್ ಸಿಸ್ಟಮ್ ನಲ್ಲಿ ಕೇಂದ್ರ ಸರ್ಕಾರ ಕೈ ಜೋಡಿಸಬೇಕಾಗುತ್ತದೆ ಎಂದು ಸಚಿವ ಹೇಳಿದರು.

ಬೆಂಗಳೂರು: ಲೋಕ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ರಾಜ್ಯದ ಸಂಸದರನ್ನು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತರಾಟೆಗೆ ತೆಗೆದುಕೊಂಡರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವರು, ಅನ್ನಭಾಗ್ಯ ಯೋಜನೆಯನ್ನು (Anna Bhagya Scheme) ಜಾರಿಗೊಳಿಸಲು ಅಗುತ್ತ್ತಿರುವ ತೊಡಕುಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಾ ಕೂರುವ ಬದಲು ಬಿಜೆಪಿ ಸಂಸದರು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ಮಾತಾಡಿ ಅಕ್ಕಿ ಪೂರೈಸುವಂತೆ ಯಾಕೆ ಒತ್ತಾಯಿಸಬಾರದು ಎಂದು ಕೇಳಿದರು. ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಜಾರಿಯಲ್ಲಿದೆ, ಹಾಗಾಗಿ ಕೊಡು ತೆಗೆದುಕೊಳ್ಳುವ ಪದ್ಧತಿಯ ಪಾಲನೆಯಾಗಬೇಕು, ಕೇಂದ್ರ ಸರ್ಕಾರಕ್ಕೆ ತೆಗೆದುಕೊಳ್ಳುವುದು ಮಾತ್ರ ಗೊತ್ತು, ರಾಜ್ಯದಿಂದ ಕೇಂದ್ರಕ್ಕೆ ಜಿಎಸ್ ಟಿ ಮೂಲಕ 4 ಲಕ್ಷ ಕೋಟಿ ರೂ. ಹೋಗುತ್ತದೆ ಆದರೆ ವಾಪಸ್ಸು ಸಿಗೋದು ಕೇವಲ 50,000-60,000 ಸಾವಿರ ಕೋಟಿ ರೂ. ಮಾತ್ರ ಎಂದು ಮಧು ಬಂಗಾರಪ್ಪ ಹೇಳಿದರು. ರಾಜ್ಯ ಸರ್ಕಾರವೊಂದು ಜನಕಲ್ಯಾಣ ಯೋಜನೆ ಜಾರಿಮಾಡುವಾಗ ಫೆಡರಲ್ ಸಿಸ್ಟಮ್ ನಲ್ಲಿ ಕೇಂದ್ರ ಸರ್ಕಾರ ಕೈ ಜೋಡಿಸಬೇಕಾಗುತ್ತದೆ ಎಂದು ಸಚಿವ ಹೇಳಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ