Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್ ರಿಸ್ಕ್ ಅಲೋವೆನ್ಸ್​​ ಬಿಡುಗಡೆಗಾಗಿ ವೈದ್ಯಕೀಯ ಶಿಕ್ಷಣ ಸಚಿವರ ಕಾಲಿಗೆ ಬಿದ್ದ ಜಿಮ್ಸ್ ಸಿಬ್ಬಂದಿ

ಮಹಾಮಾರಿ ಸೋಂಕು ಕೋವಿಡ್ ರಿಸ್ಕ್ ಅಲೋವೆನ್ಸ್ ಇದುವರೆಗೆ ಬಿಡುಗಡೆಯಾಗಿಲ್ಲ. ಹೀಗಾಗಿ ಇಂದು ಗದಗದಲ್ಲಿ ವೈದ್ಯಕೀಯ ಸಮ್ಮೇಳನಕ್ಕೆ ಆಗಮಿಸಿದ ಸಚಿವ ಶರಣಪ್ರಕಾಶ್ ಪಾಟೀಲರ ಕಾಲಿಗೆ ಬಿದ್ದು ಅಲೋವೆನ್ಸ್ ರಿಲೀಸ್ ಮಾಡಿಸುವಂತೆ ಜಿಮ್ಸ್ ಸಿಬ್ಬಂದಿ ಮನವಿ ಮಾಡಿದರು.

ಕೋವಿಡ್ ರಿಸ್ಕ್ ಅಲೋವೆನ್ಸ್​​ ಬಿಡುಗಡೆಗಾಗಿ ವೈದ್ಯಕೀಯ ಶಿಕ್ಷಣ ಸಚಿವರ ಕಾಲಿಗೆ ಬಿದ್ದ ಜಿಮ್ಸ್ ಸಿಬ್ಬಂದಿ
ಕೋವಿಡ್ ರಿಸ್ಕ್ ಅಲೋವೆನ್ಸ್​​ ಬಿಡುಗಡೆಗಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಕಾಲಿಗೆ ಬಿದ್ದ ಗದಗದ ಜಿಮ್ಸ್ ಸಿಬ್ಬಂದಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Rakesh Nayak Manchi

Updated on: Aug 27, 2023 | 5:30 PM

ಗದಗ, ಆಗಸ್ಟ್ 27: ಜೀವದ ಹಂಗು ತೊರೆದು ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ಸಿಬ್ಬಂದಿಗೆ ಮಾತ್ರ ಇದುವರೆಗೆ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ. ಹೀಗಾಗಿ ಇಂದು ನಗರದಲ್ಲಿ ನಡೆದ ವೈದ್ಯಕೀಯ ಸಮ್ಮೇಳನಕ್ಕೆ ಆಗಮಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರ ಕಾಲಿಗೆ ಬಿದ್ದ ಜಿಮ್ಸ್ ಸಿಬ್ಬಂದಿ ಕೋವಿಡ್ ರಿಸ್ಕ್ ಅಲೋವೆನ್ಸ್ (Covid Risk Allowance) ಬಿಡುಗಡೆ ಮಾಡಿಸುವಂತೆ ಮನವಿ ಮಾಡಿದರು.

ಕೋವಿಡ್ ಮಹಾಮಾರಿ ಸೋಂಕು ಹರಡಿದ್ದ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಇದಕ್ಕಾಗಿ ಪ್ರೋತ್ಸಾಹಧನ ರೂಪದಲ್ಲಿ ಸರ್ಕಾರ ರಿಸ್ಕ್ ಅಲೋವೆನ್ಸ್ ನೀಡಿತ್ತು. ಆದರೆ ಸರಕಾರದಿಂದ ಹಣ ಮಂಜೂರಾಗಿದ್ದರೂ ಜಿಮ್ಸ್ ಆಡಳಿತ ವೈದ್ಯಾಧಿಕಾರಿಗಳು ನಮಗೆ ಪಾವತಿ ಮಾಡಿಲ್ಲ ಎಂದು ಜಿಮ್ಸ್ ಡಿ ಗ್ರೂಪ್ ಸಿಬ್ಬಂದಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರಲ್ಲಿ ಆರೋಪಿಸಿದರು. ಜೊತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಅಂತ ಒತ್ತಾಯಿಸಿದರು.

ಇದನ್ನೂ ಓದಿ: ಗದಗ: ಸರ್ಕಾರಿ ಶಾಲೆಯ ಮೈದಾನದಲ್ಲಿ ತೆಲೆ ಎತ್ತಿದ ಅಕ್ರಮ ಮನೆಗಳು; ನಮ್ಮ ಶಾಲೆ ಉಳಿಸಿ ಎಂದು ವಿದ್ಯಾರ್ಥಿಗಳ ಆಕ್ರೋಶ!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರಿಗೆ ಮಾಸಿಕ ಐದು ಸಾವಿರ ಕೋವಿಡ್ ರಿಸ್ಕ್ ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ಅದೇಶ ಹೊರಡಿಸಿತ್ತು.

ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸುತ್ತಿರುವ ಕಾಯಂ, ಗುತ್ತಿಗೆ ಹಾಗೂ ಹೊರ ಗುತ್ತಿಗೆ ಶುಶ್ರೂಷಕರಿಗೆ ಇದು ಆನ್ವಯವಾಗುತ್ತದೆ. ಮುಂದಿನ ಆರು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಪ್ರೋತ್ಸಾಹ ಧನ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ