ಗದಗ: ಚುನಾವಣೆ ದ್ವೇಷ, ತಾಯಿಗೆ ನಿಂದನೆ; ವ್ಯಕ್ತಿಯೋರ್ವನಿಗೆ ಮನಸ್ಸೋ ಇಚ್ಛೆ ಥಳಿಸಿದ ಭಗತ್ ಸಿಂಗ್ ಅಭಿಮಾನಿ ಬಳಗದ ಮುಖಂಡ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 16, 2023 | 9:45 PM

ಚುನಾವಣೆ ಮುಗಿದ್ರು, ಚುನಾವಣೆಯ ದ್ವೇಷ ಮಾತ್ರ ಇನ್ನೂ ನಿಂತಿಲ್ಲ. ನೀನು ಕಾಂಗ್ರೆಸ್​ಗೆ ಸಪೋರ್ಟ್ ಮಾಡಿದ್ದೀಯಾ ಎಂದು ಓರ್ವ ವ್ಯಕ್ತಿ ನಿರಂತರ ಹಿಯಾಳಿಸಿ, ಬೆದರಿಕೆ, ಧಮ್ಕಿ ಹಾಕುತ್ತಿದ್ದನಂತೆ. ಅಷ್ಟೇ ಅಲ್ಲ, ತಾಯಿಗೆ ನಿಂದನೆ ಮಾಡಿದ್ದು, ಹೀಗಾಗಿ ರೊಚ್ಚಿಗೆದ್ದ ಭಗತ್ ಸಿಂಗ್ ಅಭಿಮಾನಿ ಬಳಗದ ಮುಖಂಡ ಹಾಗೂ ರೌಡಿಶೀಟರ್​, ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾನೆ. ಆದ್ರೆ, ಘಟನೆ ಆಗಿ ನಾಲ್ಕು ದಿನಗಳು ಕಳೆದರೂ ಪೊಲೀಸರು ಮಾತ್ರ ಗಪ್ ಚುಪ್ ಆಗಿದ್ದು, ಅವಳಿ ನಗರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ: ಚುನಾವಣೆ ದ್ವೇಷ, ತಾಯಿಗೆ ನಿಂದನೆ; ವ್ಯಕ್ತಿಯೋರ್ವನಿಗೆ ಮನಸ್ಸೋ ಇಚ್ಛೆ ಥಳಿಸಿದ ಭಗತ್ ಸಿಂಗ್ ಅಭಿಮಾನಿ ಬಳಗದ ಮುಖಂಡ
ಗದಗ
Follow us on

ಗದಗ, ನ.16:  ಕಾಂಗ್ರೆಸ್​ಗೆ ಸಪೋರ್ಟ್ ಮಾಡಿದ್ದೀಯಾ ಎಂದು ಓರ್ವ ವ್ಯಕ್ತಿ ನಿರಂತರ ಹಿಯಾಳಿಸಿ, ಬೆದರಿಕೆ, ಧಮ್ಕಿ ಹಾಕುತ್ತಿದ್ದನಂತೆ. ಅಷ್ಟೇ ಅಲ್ಲ, ತಾಯಿಗೆ ನಿಂದನೆ ಮಾಡಿದ್ದು, ಹೀಗಾಗಿ ರೊಚ್ಚಿಗೆದ್ದ ಭಗತ್ ಸಿಂಗ್ ಅಭಿಮಾನಿ ಬಳಗದ ಮುಖಂಡ ಸೋಮು ಮುಳಗುಂದ ಎಂಬಾತ, ಶಿವು ಜಾಲಗಾರ ಎಂಬ ಯುವಕನಿಗೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ ಘಟನೆ ಗದಗ(Gadag) ನಗರದ ಒಕ್ಕಲಿಗರ ಓಣಿಯಲ್ಲಿ ನಡೆದಿದೆ. ಗದಗ-ಬೆಟಗೇರಿ ಅವಳಿ ನಗರ ಸಂಗೀತದ ನಾಡು, ಶಾಂತಿಯ ಬೀಡು ಎಂದು ಕರೆಯುತ್ತಾರೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಪುಡಿ ರೌಡಿಗಳ ಅಟ್ಟಹಾಸ, ಚಾಕು, ಚೂರಿ ಇರಿತದ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಈಗ ಆರು ತಿಂಗಳಿಂದ ಸ್ವಲ್ಪ ಕ್ರೈಂಗಳು ಕಡಿಮೆಯಾಗಿದ್ದವು. ಆದ್ರೆ, ಇದೀಗ ಸಾರ್ವಜನಿಕ ಪ್ರದೇಶದಲ್ಲೇ ಕ್ರಿಕೆಟ್ ಬ್ಯಾಟ್​ನಿಂದ ಹಿಗ್ಗಾಮುಗ್ಗಾ ಥಳಿಸುವ ಭಯಾನಕ ದೃಶ್ಯಗಳು ಮತ್ತೆ ಅವಳಿ ನಗರದ ಜನರನ್ನು ಬೆಚ್ಚಿಬಿಳಿಸಿದೆ.

ಗದಗ ನಗರದ ಒಕ್ಕಲಿಗರ ಓಣಿಯ ಭಗತ್ ಸಿಂಗ್ ಅಭಿಮಾನಿ ಭಳಗದ ಜಿಲ್ಲಾ ಪ್ರಮುಖ ಸೋಮು ಮುಳಗುಂದ ಎಂಬಾತ, ಶಿವು ಜಾಲಗಾರ ಎಂಬ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬೈಕ್​ನಿಂದ ಇಳಿದು ಬಂದವನೇ ಹಿಂದೆ ಮುಂದೆ ನೋಡದೇ ಬ್ಯಾಟ್​ನಿಂದ ಶಿವುಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇತನ ಹೊಡೆತಕ್ಕೆ ಶಿವು ಕಂಗಾಲಾಗಿ ಹೋಗಿದ್ದಾನೆ. ಸಾಕಷ್ಟು ಜನರ ಎದುರಲ್ಲೇ ಮನಸ್ಸೋ ಇಚ್ಛೆ ಥಳಿಸಿದ್ದಾನೆ. ಈತನ ರೋಷಾವೇಷ ನೋಡಿ ಎಲ್ಲಿ ಏನಾಗುತ್ತೋ, ಅಂದುಕೊಂಡು ಅಲ್ಲಿದ್ದ ಯುವಕರು ಜಗಳ ಬಿಡಿಸಿದ್ದಾರೆ. ಹೀಗಾಗಿ ಶಿವು ಬಚಾವ್ ಆಗಿದ್ದಾನೆ. ಈ ಬಗ್ಗೆ ಹಲ್ಲೆಗೊಳಗಾದ ಶಿವು ಜಾಲಗಾರ ಹಾಗೂ ಕುಟುಂಬಸ್ಥರು ಮಾತನಾಡಲು ನಿರಾಕರಿಸಿದ್ದಾರೆ. ಭಯವೋ ಏನೋ ಗೋತ್ತಿಲ್ಲ. ನಾವು ಯಾವುದೇ ಪ್ರತಿಕ್ರಿಯೇ ನೀಡಲ್ಲ ಅಂತಿದ್ದಾರೆ.

ಇದನ್ನೂ ಓದಿ:ಚರಂಡಿ ವಿಚಾರಕ್ಕೆ ಜಗಳ: ಹಾಡಹಗಲೇ ಒಳ್ಳಾರಿ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ

ಈ ಘಟನೆ ಬಗ್ಗೆ ಹಲ್ಲೆ ಮಾಡಿದ ಸೋಮು ಮುಳಗುಂದನನ್ನು ಕೇಳಿದ್ರೆ, ಚುನಾವಣೆಯ್ಲಲಿ ಕಾಂಗ್ರೆಸ್ಗೆ ಸಪೋರ್ಟ್ ಮಾಡಿದ್ದೀಯಾ ಎಂದು ನನಗೆ ಶಿವು ಸೇರಿ ಏಳೆಂಟು ಜನರು ಜೀವಬೆದರಿಕೆ, ಧಮ್ಕಿ ಹಾಕಿದ್ದರು. ಅಷ್ಟೇ ಅಲ್ಲ, ನನ್ನ ತಾಯಿಗೆ ನಿಂದನೆ ಮಾಡಿದ್ದರು, ಸಾಕಷ್ಟು ಬಾರಿ ಅವರ ಮನೆಯವ್ರಿಗೆ ತಿಳಿಸಿದ್ದೇ. ಆದ್ರೂ ಪದೇ ಪದೇ ಬೆದರಿಕೆ, ನನ್ನ ತಾಯಿಗೆ ನಿಂದನೆ ಮಾಡಿದ್ದ. ಹೀಗಾಗಿ ತಾಯಿಗೆ ನಿಂದನೆ ಮಾಡಿದ್ದರಿಂದ ಹಲ್ಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ಮಳೆ ನಿಂತರೂ, ಮಳೆ ಹನಿ ನಿಲ್ಲಲ್ಲಎನ್ನುತ್ತಾರೆ, ಗದಗಿನಲ್ಲಿ ಚುನಾವಣೆ ಮುಗಿದು ಆರು ತಿಂಗಳಾದ್ರೂ ಚುನಾವಣೆ ದ್ವೇಷ ಮಾತ್ರ ಇನ್ನೂ ಮುಗಿದಿಲ್ಲ. ಇದೇ ವಿಚಾರಕ್ಕೆ ಗಲಾಟೆಯಾಗಿದ್ದು, ಶಿವು ಎಂಬಾತನಿಗೆ ಸೋಮು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹೊಡೆತ ತಿಂದ ಶಿವು ಒದ್ದಾಡುತ್ತಿದ್ದಾನೆ. ನಾನು ರೌಡಿ ಶೀಟರ್. ಈ ಹಿಂದೆ ಮಹದಾಯಿ ಹೋರಾಟ ಮಾಡಿದಾಗ ಪೊಲೀಸ್ರು ನನ್ನ ಮೇಲೆ ಉದ್ದೇಶಪೂರ್ವಕವಾಗಿ ರೌಡಿ ಶೀಟರ್ ಓಪನ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಇದನ್ನೂ ಓದಿ:ಜೂಜು ಅಡ್ಡ ಮೇಲೆ ದಾಳಿ ವೇಳೆ ಪೊಲೀಸರ ಮೇಲೆಯೇ ಹಲ್ಲೆ, ಬಿಜೆಪಿ ಮುಖಂಡ ಸೇರಿ 8 ಜನರ ಬಂಧನ

ನವೆಂಬರ್ 14 ರಂದು ನಡೆದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದ್ರೆ, ಘಟನೆ ನಡೆದು ನಾಲ್ಕು ದಿನಳಾದ್ರೂ ಹಲ್ಲೆಗೊಳಗಾದ ಶಿವು ಜಾಲಗಾರ ಠಾಣೆಗೆ ದೂರು ನೀಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಗೂಂಡಾವರ್ತನೆ ಘಟನೆ ಅವಳಿ ನಗರದ ಜನರ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಎಸ್ಪಿ ಬಿ ಎಸ್ ನೇಮಗೌಡ ಅವರನ್ನು ಕೇಳಿದ್ರೆ, ‘ಹಲ್ಲೆಗೊಳಗಾದವ್ರು ಇನ್ನೂ ದೂರು ನೀಡಿಲ್ಲ. ಆದರೂ ಸಾರ್ವಜನಿಕ ಪ್ರದೇಶದಲ್ಲಿ ಹಲ್ಲೆ ಮಾಡಿದ್ದು, ಇಲಾಖೆ ಸಹಿಸಲ್ಲ. ಹಲ್ಲೆಗೊಳಗಾದವರು ದೂರು ನೀಡದಿದ್ರೆ, ಸ್ವಯಂ ದೂರು ದಾಖಲು ಮಾಡಿಕೊಳ್ಳುವಂತೆ ಗದಗ ಶಹರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Thu, 16 November 23