ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ನೂರಾರು ಜನ ಹತ್ತಾರು ವರ್ಷಗಳಿಂದ ಸೇವೆ ಮಾಡ್ತಾಯಿದ್ದಾರೆ. ಆದ್ರೆ ಅವರಿಗೆ ಬಡ್ತಿ ನೀಡಿ, ನೇರ ನೇಮಕಾತಿ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ನೇಮಕಾತಿ ಆಗ್ತಾಯಿವೆ. ಆದ್ರೆ, ಗದಗ ಜಿಲ್ಲೆಯಲ್ಲಿ ಮಾತ್ರ ನೇರ ನೇಮಕಾತಿ (Recruitment) ಮಾತ್ರ ವಿಳಂಬ ಆಗ್ತಾಯಿವೆ. ಹೀಗಾಗಿ ಗ್ರಾಮ ಪಂಚಾಯತ್ ನೌಕರರು ಜಿಲ್ಲಾ ಪಂಚಾಯತ್ (Gadag Zilla Panchayat) ವಿರುದ್ಧ ಸಿಡಿದೆದ್ದಿದ್ದಾರೆ. ಬಡ್ತಿಗೆ ಲಂಚದ ಬೇಡಿಕೆ ಇಟ್ಟಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಲಂಚಕ್ಕಾಗಿಯೇ ಬಡ್ತಿ ವಿಳಂಬವಾಗಿದೆ ಅಂತ ಆರೋಪಿಸಿದ್ದಾರೆ. ಆದ್ರೆ, ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿ ಯಾರೂ (officer bribery) ಅಂತ ಬಡ ನೌಕರರು ಬಾಯಿಬಿಡ್ತಾಯಿಲ್ಲ.
ಗದಗ ಜಿಲ್ಲೆಯ ಗ್ರಾಮ ಪಂಚಾಯತಿಗಳ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ವಿಳಂಬ..! 30 ಸಿಬ್ಬಂದಿಗಳ ನೇರ ನೇಮಕಾತಿಯ ವಿಳಂಬ ನೀತಿಗೆ ಸಿಬ್ಬಂದಿಗಳ ಕಿಡಿ..! ಅಧಿಕಾರಿಯಿಂದ ಹಣದ ಬೇಡಿಕೆ ಅಂತ ಆರೋಪ….! ಸಿಇಒ ಹಾಗೂ ಡಿಸಿ ಒಬ್ಬರೇ ಇರೋದಕ್ಕೆ ವಿಳಂಬ ಅಂತಲೂ ಕೆಂಡ..!
ಎಸ್… ಗದಗ ಜಿಲ್ಲಾಡಳಿತ ಭವನದ ಮುಂದೆ, ಗದಗ ಜಿಲ್ಲಾ ಗ್ರಾಮ ಪಂಚಾಯತ್ ನೌಕರರು ಹೋರಾಟ ಮಾಡಿ ಎಚ್ಚರಿಕೆ ನೀಡಿದ್ದಾರೆ. ಹೌದು ಗ್ರಾಮ ಪಂಚಾಯತಿಯಲ್ಲಿ ಸೇವೆ ಮಾಡ್ತಾಯಿರೋ ಸಿಬ್ಬಂದಿಗಳಿಗೆ ಮುಂಬಡ್ತಿ ನೀಡ್ತಾಯಿಲ್ವಂತೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆಯಂತೆ.. ಆದ್ರೆ, ಗದಗ ಜಿಲ್ಲೆಯಲ್ಲಿ ಮಾತ್ರ ಕಳೆದ 2 ವರ್ಷಗಳಿಂದ ನೇರ ನೇಮಕಾತಿ ಮಾಡಿಕೊಳ್ಳಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ ಅಂತ ನೌಕರರು ಕಿಡಿಕಾರಿದ್ದಾರೆ.
ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ, ಆದ್ರೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇನ್ನೂ ಈ ಹಿಂದೆ ನೇರ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಪಂಚಾಯತಿ ಕಚೇರಿಯ ಕೆಲವು ಅಧಿಕಾರಿಗಳು ಹಣದ ಬೇಡಿಕೆ ಇಟ್ಟಿದ್ರಂತೆ. ಆ ವಿಷಯ ಆಗೀನ ಸಿಇಒ ಬಿ.ಸುಶಿಲಾ ಅವರ ಗಮನಕ್ಕೆ ಬಂದ ನಂತ್ರ ಪಾರದರ್ಶಕವಾಗಿ ನೇಮಕಾತಿ ಆಗಿತ್ತಂತೆ. ಆದ್ರೆ, ಆದ್ರೆ, ಹಲವು ವರ್ಷಗಳಿಂದ ಗ್ರಾಮ ಪಂಚಾಯತಿ ಸೇವೆ ಮಾಡ್ತಾಯಿರೋ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಹುದ್ದೆಯಿಂದ ಗ್ರೇಡ್ 02, ಕಾರ್ಯದರ್ಶಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ಸೇವೆಯೊಳಗಿನ ನೇರ ನೇಮಕಾತಿಯಲ್ಲಿ 30 ಸಿಬ್ಬಂದಿಗಳಿಗೆ ಆದೇಶವನ್ನು ನೀಡಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಹುದ್ದೆ ಕಳೆದ ಐದಾರು ತಿಂಗಳಿಂದ ಖಾಲಿ ಇದೆ. ಇದು ಒಂದು ವಿಳಂಬಕ್ಕೆ ಕಾರಣ ಇರಬಹುದು. ಆದ್ರೆ, ಗದಗ ಜಿಲ್ಲಾಧಿಕಾರಿ ಹಾಗೂ ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಒಬ್ಬರೆ ಇದ್ದಾರೆ. ಕೆಲಸದ ಒತ್ತಡದಿಂದ ನೇಮಕಾತಿ ಆಗ್ತಾಯಿಲ್ವೂ. ಆಥವಾ ಅಲ್ಲಿನ ಕೆಲವು ಅಧಿಕಾರಿಗಳು ಹಣಕಾಸಿನ ಲೆಕ್ಕಾಚಾರ ನಡೆಸಿದ್ದಾರೇಯೇ ಎನ್ನುನ ಅನುಮಾನ ಮೂಡಿವೆ ಎಂದು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಆರೋಪ ಮಾಡಿದ್ದಾರೆ. ಸಿಇಒ ಹಾಗೂ ಜಿಲ್ಲಾಧಿಕಾರಿ ಒಂದೇ ಒಂದು ದಿನದಲ್ಲಿ ಫೈಲ್ ಮೂ ಮಾಡುತ್ತೇವೆ ಅಂತಾ ಹೇಳ್ತಾಯಿಲ್ಲಾ. ನೇರ ನೇಮಕಾತಿ ಆಗುವವರಿಗೆ ನಿರಂತರವಾಗಿ ಹೋರಾಟ ಮಾಡುತ್ತೇವೆ ಅಂತಾರೆ ಸಿಬ್ಬಂದಿಗಳು ಎಚ್ಚರಿಕೆ ನೀಡಿದ್ರು. ಆಗ ಎಚ್ಚೆತ್ತ ಜಿಲ್ಲಾ ಪಂಚಾಯತ್ ಅಧಿಕಾರಿಗಳು ತಿಂಗಳೊಳಗೆ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಮೂಗಿಗೆ ತುಪ್ಪ ಸವರಿ ಕಳಿಸಿದ್ದಾರೆ.
ಗದಗ ಜಿಲ್ಲೆಯ, ಗ್ರಾಮ ಪಂಚಾಯತಿಯಲ್ಲಿನ ವಿವಿಧ ಹುದ್ದೆಗಳ ನೇರ ನೇಮಕಾತಿ ಬಡ್ತಿ ಕಾರ್ಯ ವಿಳಂಬವಾಗಿದೆ. ಖಾಯಂ ಸಿಇಒ ಇಲ್ಲದಿರೋದು ಪ್ರಮುಖವಾದ ಕಾರಣ ಎಂದು ಹೋರಾಟಗಾರರು ಕಿಡಿ ಕಾರಿದ್ದಾರೆ. ಆದ್ರೆ, ಲಂಚ ಕೇಳಿ ಅಧಿಕಾರಿಗಳು ಯಾರೂ ಅನ್ನೋದು ನಿಗೂಢವಾಗಿದೆ. ಇನಾದ್ರು ಜಿಲ್ಲಾಧಿಕಾರಿ ಹಾಗೂ ಪ್ರಭಾರಿ ಸಿಇಒ ಆಗಿರುವ ಅವ್ರು ಕೂಡಲೇ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಬಡ್ತಿಗೆ ಲಂಚದ ಬೇಡಿಕೆ ಇಟ್ಟ ಅಧಿಕಾರಿಗಳು ಯಾರೂ ಅನ್ನೋದು ತನಿಖೆ ಮಾಡಿಸಬೇಕು ಅಂತ ಒತ್ತಾಯ ಮಾಡಿದ್ದಾರೆ. ಜೊತೆಗೆ ಬಡ ನೌಕರರಿಗೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ