ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ವ್ಹೀಲ್ ಚೇರ್ ಇಲ್ಲದೇ ರೋಗಿಗಳ ನರಳಾಟ, ಅವ್ಯವಸ್ಥೆ ವಿರುದ್ಧ ಗರ್ಭಿಣಿಯರ ಆಕ್ರೋಶ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 04, 2023 | 5:16 PM

ಗದಗ ಜಿಮ್ಸ್ ಆಡಳಿತಕ್ಕೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಸರ್ಕಾರ ಎಲ್ಲ ಸೌಲಭ್ಯ ನೀಡಿದರೂ ಇಲ್ಲಿನ ಆಡಳಿತ ಮಾತ್ರ ಜನರಿಗೆ ಸರಿಯಾಗಿ ಯಾವುದನ್ನೂ ಒದಗಿಸುತ್ತಿಲ್ಲ. ರೋಗಿಗಳಿಗೆ ವ್ಹೀಲ್ ಚೇರ್ ಇಲ್ಲ, ಸ್ಕ್ಯಾನಿಂಗ್​ಗಾಗಿ ತುಂಬು ಗರ್ಭಿಣಿಯರು ಗಂಟೆಗಟ್ಟಲೇ ಕಾಯುವಂತಹ ಪರಿಸ್ಥಿತಿ ಇದೆ. ಆ ಮೂಲಕ ಜಿಮ್ಸ್ ಆಸ್ಪತ್ರೆ ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ.

ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ವ್ಹೀಲ್ ಚೇರ್ ಇಲ್ಲದೇ ರೋಗಿಗಳ ನರಳಾಟ, ಅವ್ಯವಸ್ಥೆ ವಿರುದ್ಧ ಗರ್ಭಿಣಿಯರ ಆಕ್ರೋಶ
ಜಿಮ್ಸ್​ ಆಸ್ಪತ್ರೆಗೆ ಭೇಟಿ ನೀಡಿದ ಜನರು
Follow us on

ಗದಗ, ಅಕ್ಟೋಬರ್​ 04: ಗದಗ ಜಿಮ್ಸ್ (GIMS hospital) ಆಡಳಿತಕ್ಕೆ ಹೇಳೋರು ಕೇಳೋರು ಇಲ್ಲದಂತಾಗಿದೆ. ಸರ್ಕಾರ ಎಲ್ಲ ಸೌಲಭ್ಯ ನೀಡಿದ್ರೂ ಇಲ್ಲಿನ ಆಡಳಿತ ಮಾತ್ರ ಜನರಿಗೆ ಸರಿಯಾಗಿ ಒದಗಿಸುತ್ತಿಲ್ಲ. ಜಿಮ್ಸ್ ಆಸ್ಪತ್ರೆ ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ರೋಗಿಗಳಿಗೆ ವ್ಹೀಲ್ ಚೇರ್ ಇಲ್ಲದೇ ಖುರ್ಚಿಯಲ್ಲಿ ಕರ್ಕೋಂಡು ಹೋಗುವ ದೃಶ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಗರ್ಭಿಣಿಯರ ಗೋಳು ಮಾತ್ರ ಇದಕ್ಕೂ ಭಿನ್ನವಾಗಿದೆ. ಸ್ಕ್ಯಾನಿಂಗ್​ಗಾಗಿ ತುಂಬು ಗರ್ಭಿಣಿಯರು ಗಂಟೆಗಟ್ಟಲೇ ಕಾಯುವಂತಹ ಪರಿಸ್ಥಿತಿ ಎದುರಾಗಿದೆ.

ಗದಗ ಜಿಲ್ಲೆಯ ನರಗುಂದ, ಮುಂಡರಗಿ, ರೋಣ, ಶಿರಹಟ್ಟಿ ಸೇರಿ ವಿವಿಧ ತಾಲೂಕಗಳ ನೂರಾರು ಗರ್ಭಿಣಿ ಮಹಿಳೆಯರು ಆಗಮಿಸ್ತಾರೆ. ಎರಡು ಸ್ಕ್ಯಾನಿಂಗ್ ವಿಭಾಗಗಳು ಇವೆ. ಆದರೆ ಗದಗ ಜಿಮ್ಸ್ ಆಡಳಿತ ಒಂದು ಬಂದ ಮಾಡಿದೆ. ಕಾರಣ ವೈದ್ಯರು ಸರಿಯಾಗಿ ಆಸ್ಪತ್ರೆ ಬರಲ್ಲ. ಗರ್ಭಿಣಿ ಸ್ತ್ರೀಯರ ವ್ಯವಸ್ಥೆ ನೋಡಿದ್ರೆ, ಅಯ್ಯೋ ದೇವರೇ ಏನಪ್ಪ ವ್ಯವಸ್ಥೆ ಅನ್ನೋಹಾಗಿದೆ. ಇನ್ನೂ ಹಿರಿಯ ವೈದ್ಯರು ಆಸ್ಪತ್ರೆಗೆ ಬರೋದೇ ಅಪರೂಪವಂತೆ. ಹೀಗಾಗಿ ಪಿಜಿ ಕಲಿಯುವ ವೈದ್ಯ ವಿದ್ಯಾರ್ಥಿಗಳೇ ಗರ್ಭಿಣಿ ಸ್ತ್ರೀಯರ ಪಾಲಿನ ನಿಜವಾದ ವೈದ್ಯರು. ಕಲಿಯುವ ವೈದ್ಯವಿದ್ಯಾರ್ಥಿಗಳೇ ಒಪಿಡಿಗಳಲ್ಲಿ ರೋಗಿಗಳ ತಪಾಸಣೆ ಮಾಡ್ತಾರಂತೆ. ಹೀಗಾಗಿ ರೋಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಅಂತ ಮಹಿಳೆಯರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ದಿಢೀರ್ ಹರಿದ ಹೈವೋಲ್ಟೇಜ್ ವಿದ್ಯುತ್​ಗೆ 20 ಕ್ಕೂ ಹೆಚ್ಚು ಟಿವಿ, ಇನ್ನಿತರ ವಸ್ತುಗಳು ಬ್ಲಾಸ್ಟ್

ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಬೇಕು ಅಂತ ಗರ್ಭಿಣಿಯರ ಕಣ್ಣೀರು ಕಪಾಳಿಗೆ ಬರ್ತಾವೆ. ನಿತ್ಯ ನೂರಾರು ಗರ್ಭಿಣಿ ಮಹಿಳೆಯರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಲು ಆಗಮಿಸ್ತಾರೆ. ಆದರೆ ಇಲ್ಲಿ ಬರೋ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆ ಆಡಳಿತ ಅಮಾನವೀಯವಾಗಿ ನಡೆಸಿಕೊಳ್ತೀದೆ. ತುಂಬು ಗರ್ಭಿಣಿಯರು ಗಂಟೆಗಟ್ಟಲೇ ಸಾಲಿನಲ್ಲಿ ನಿಂತುಕೊಂಡೇ ನರಳಾಡವಂತ ಸ್ಥಿತಿ ಇದೆ. ಕನಿಷ್ಠ ತುಂಬು ಗರ್ಭಿಣಿಯರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಆಸ್ಪತ್ರೆ ನೆಲದ ಮೇಲಿಯೇ ತುಂಬು ಗರ್ಭಣಿಯರು ಒದ್ದಾಡಬೇಕು.

ಜಿಮ್ಸ್ ಆಸ್ಪತ್ರೆಯಲ್ಲಿ ಗರ್ಭಿಣಿಯರ ಗೋಳಾಟ, ನರಳಾಟದ ಅಮಾನೀವಯ ಘಟನೆಗಳು ಪದೇ ಪದೇ ನಡೆಯುತ್ತಿದ್ರೂ ವೈದ್ಯಕೀಯ ಇಲಾಖೆ ಅಧಿಕಾರಿಗಳು ಜಿಮ್ಸ್ ಆಡಳಿತ ಬಿಸಿ ತಟ್ಟಿಸುವ ಕೆಲಸ ಮಾಡ್ತಾಯಿಲ್ಲ. ಗರ್ಭಿಣಿಯರ ನರಳಾಟ ಒಂದುಕಡೆಯಾದ್ರೆ, ಇತ್ತ, ಬೇರೆ ರೋಗಿಗಳ ಗೋಳು ಕೇಳೋರೇ ಇಲ್ಲದಂತಾಗಿದೆ. ವ್ಹೀಲ್ ಚೇರ್ ಇಲ್ಲದೇ ರೋಗಿಯನ್ನು ಖುರ್ಚಿ ಮೇಲೆ ಸಂಬಂಧಿಕರು ಎತ್ತಾಕಿಕೊಂಡು ಹೋಗುವ ಪರಿಸ್ಥಿತಿ ಇದೆ.

ಇದನ್ನೂ ಓದಿ: ಜನತಾ ದರ್ಶನ: ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ ಸಚಿವ ಎಚ್​ಕೆ ಪಾಟೀಲ

ದೊಡ್ಡ ಆಸ್ಪತ್ರೆ ಪ್ರತಿವರ್ಷ ಕೋಟಿ ಕೋಟಿ ಅನುದಾನ ಸರ್ಕಾರ ನೀಡುತ್ತೆ. ಆದರೆ ಈ ಆಸ್ಪತ್ರೆಯಲ್ಲಿ ಕನಿಷ್ಠ ರೋಗಿಗಳಿಗೆ ವ್ಹೀಲ್ ಚೇರ್, ಟ್ರೆಚ್ಚರ್ ಕೂಡ ಇಲ್ಲ. ರೋಗಿಗಳ ಜೊತೆ ಜಿಮ್ಸ್ ಆಡಳಿತ ಚೆಲ್ಲಾಟವಾಡುತ್ತಿದೆ. ರೋಗಿಗಳನ್ನು ಕರೆದುಕೊಂಡು ಹೋಗಬೇಕಾದ್ರೆ ಮನೆಯಿಂದಲೇ ಖುರ್ಚಿ ತರಬೇಕು. ಎಮರ್ಜನ್ಸಿ ಬಂದ್ರೂ ಸಂಬಂಧಿಕರೇ ಎತ್ತಿಕೊಂಡು ಹೋಗುವಂತ ಸ್ಥಿತಿ ಈ ಆಸ್ಪತ್ರೆಯಲ್ಲಿ ಇದೆ.

ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯುವ ನೀರು ಕೂಡ ಇಲ್ಲ ಅಂತ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.  ಈ ಬಗ್ಗೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಳ್ಳಿ ಅವ್ರನ್ನು ಕೇಳಿದ್ರೆ, ಎರಡ್ಮೂರು ದಿನ ರಜೆ ಇತ್ತು. ಹೀಗಾಗಿ ಇವತ್ತು ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಅಂತಾರೆ.

ಬೆಳಗ್ಗೆ 9 ಗಂಟೆಗೆ ಆಗಮಿಸಿದ ಗರ್ಭಿಣಿ ಮಹಿಳೆಯರು ಮಧ್ಯಾಹ್ನ 2 ಗಂಟೆಯಾದ್ರೂ ಸ್ಕ್ಯಾನಿಂಗ್ ಆಗದೇ ಗೋಳಾಡಿದ್ದಾರೆ. ಹೆಚ್ಚುಕಮ್ಮಿ ಪ್ರಶ್ನೆ ಮಾಡಿದ್ರೆ ನಾಳೆ ಬನ್ನಿ ಅಂತ ಅವಾಜ್ ಹಾಕ್ತಾರಂತೆ. ಕಳೆದ ತಿಂಗಳ ಜಿಮ್ಸ್ ವೈದ್ಯರೊಬ್ಬರು ರೋಗಿಗಳ ವಿರುದ್ಧ ಗೂಂಡಾವರ್ತನೆ ತೋರಿದ್ದ. ಇಷ್ಟೆಲ್ಲಾ ಆದ್ರೂ ವೈದ್ಯಕೀಯ ಇಲಾಖೆ ಗದಗ ಜಿಮ್ಸ್ ಆಡಳಿತಕ್ಕೆ ಬಿಸಿಮುಟ್ಟಿಸುವ ಕೆಲಸ ಮಾಡಿಲ್ಲ. ಇನ್ನಾದ್ರೂ ಸರ್ಕಾರ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಕಡೆ ಗಮನ ಹರಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.