ಚುನಾವಣೆಯಲ್ಲಿ ಒಳ ಮೀಸಲಾತಿ ಕಿಚ್ಚು; ಬಿಜೆಪಿಗೆ ಮತ ಹಾಕದಂತೆ ಪ್ರಮಾಣ ಮಾಡಿಸಿದ ಸ್ವಾಮೀಜಿ

ವಿಧಾನಸಭೆ ಚುನಾವಣೆ(Karnataka Assembly Election) ದಿನಾಂಕ ನಿಗದಿಯಾಗಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈ ಮಧ್ಯೆ ಸ್ವಾಮೀಜಿಯವರು ಬಿಜೆಪಿ ಪಕ್ಷವನ್ನ ತಿರಸ್ಕಾರ ಮಾಡಿ, ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ವೋಟ್ ಹಾಕಿ ಎಂದು ಪ್ರಮಾಣ ಮಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಚುನಾವಣೆಯಲ್ಲಿ ಒಳ ಮೀಸಲಾತಿ ಕಿಚ್ಚು; ಬಿಜೆಪಿಗೆ ಮತ ಹಾಕದಂತೆ ಪ್ರಮಾಣ ಮಾಡಿಸಿದ ಸ್ವಾಮೀಜಿ
ಬಿಜೆಪಿಗೆ ಮತ ಹಾಕದಂತೆ ಸ್ವಾಮೀಜಿ ಪ್ರಮಾಣ

Updated on: Apr 13, 2023 | 10:17 AM

ಗದಗ: ವಿಧಾನಸಭೆ ಚುನಾವಣೆ(Karnataka Assembly Election) ದಿನಾಂಕ ನಿಗದಿಯಾಗಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಉಭಯ ಪಕ್ಷಗಳು ಆಡಳಿತ ಚುಕ್ಕಾಣಿ ಹಿಡಿಯಲು ಶಥಾಯ ಗತಾಯ ಪ್ರಯತ್ನ ಮಾಡುತ್ತಿದೆ. ಈ ಮಧ್ಯೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಗವಿಮಠದ ಶ್ರೀ ಕುಮಾರ ಮಹಾರಾಜ ಸ್ವಾಮೀಜಿಯವರು ಬಿಜೆಪಿಗೆ ಮತ ಹಾಕದಂತೆ ಸಾರ್ವಜನಿಕರಿಂದ ಪ್ರಮಾಣ ಮಾಡಿಸಿದ ವಿಡಿಯೋ ವೈರಲ್​ ಆಗುತ್ತಿದೆ. ಹೌದು ಬಿಜೆಪಿ ಪಕ್ಷವನ್ನು ತಿರಸ್ಕಾರ ಮಾಡಿ, ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ವೋಟ್ ಹಾಕಿ ಎಂದು ಪ್ರಮಾಣ ಮಾಡಿಕೊಂಡಿದ್ದಾರೆ.

ಹೌದು ಗವಿಮಠದ ಶ್ರೀ ಕುಮಾರ ಮಹಾರಾಜ ಸ್ವಾಮೀಜಿಯವರು ಒಳ ಮೀಸಲಾತಿ ವಿರೋಧಿಸಿ ನಾಳೆ(ಏ.14) ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿಭಟನೆಗೆ ಪ್ಲಾನ್ ಮಾಡಿದ್ದಾರೆ. ನಾಳೆ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸುತ್ತೇವೆ, ಎಲ್ಲರೂ ಬನ್ನಿ, ಇದು ನಮ್ಮ ಮಕ್ಕಳ ಭವಿಷ್ಯ, ನಮ್ಮನ್ನ ಎಸ್ಸಿ ಪಟ್ಟಿಯಿಂದ ತೆಗೆದರೆ ಮುಂದಿನ ದಿನಗಳಲ್ಲಿ ಬಾರಿ ತೊಂದರೆಯಾಗುತ್ತದೆ ಅದಕ್ಕೊಸ್ಕರ ನಾವು ಇವಾಗ ಹೋರಾಡಬೇಕಿದೆ. ನಮ್ಮನ್ನ ಹೊರಗಿಟ್ಟ ಬಿಜೆಪಿಗೆ ಮಾತ್ರ ನಮ್ಮ ಮತ ಹಾಕಬಾರದು ಎಂದು ಆದರಹಳ್ಳಿ ಗ್ರಾಮಸ್ಥರಿಂದ ಸ್ವಾಮೀಜಿಯವರು ಸೇವಾಲಾಲ, ಸಿದ್ದರಾಮೇಶ್ವರ‌ ಮೇಲೆ ಆಣೆ ಪ್ರಮಾಣ‌ ಮಾಡಿಸಿದ್ದಾರೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ