ಜಾತಿ ನಾಶಕ್ಕಾಗಿ ಹೋರಾಡಿದ ಬಸವಣ್ಣನ ಅನುಯಾಯಿಗಳು ನಾವು, ಲಿಂಗಾಯತರಿಗೆ ಮೀಸಲಾತಿ ಸಾಧ್ಯವಿಲ್ಲ: ಎಸ್​ಎಂ ಜಾಮದಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 25, 2023 | 7:20 PM

ಬಸವಣ್ಣ ಹೋರಾಡಿದ್ದು ಜಾತಿ ನಾಶಕ್ಕಾಗಿ. ಆದರೆ, ನಾವು ಜಾತಿಗಾಗಿ ಮತ್ತು ಮೀಸಲಾತಿಗಾಗಿ ಹೋರಾಡುತ್ತಿದ್ದೇವೆ. ಇನ್ನು 100 ವರ್ಷ ಹೋದರೂ ಲಿಂಗಾಯತರಿಗೆ ಮೀಸಲಾತಿ ಸಿಗುವುದಕ್ಕೆ ಸಾಧ್ಯವಿಲ್ಲ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್​​.ಎಂ. ಜಾಮದಾರ ಹೇಳಿದ್ದಾರೆ. 6 ವರ್ಷಗಳ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡಿದವರೇ, ಈಗ ಮೀಸಲಾತಿ ಬಗ್ಗೆ ಈ ರೀತಿಯಾಗಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಜಾತಿ ನಾಶಕ್ಕಾಗಿ ಹೋರಾಡಿದ ಬಸವಣ್ಣನ ಅನುಯಾಯಿಗಳು ನಾವು, ಲಿಂಗಾಯತರಿಗೆ ಮೀಸಲಾತಿ ಸಾಧ್ಯವಿಲ್ಲ: ಎಸ್​ಎಂ ಜಾಮದಾರ
ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ
Follow us on

ಗದಗ, ಅಕ್ಟೋಬರ್​​​​​​ 25: ಬಸವಣ್ಣ ಹೋರಾಡಿದ್ದು ಜಾತಿ ನಾಶಕ್ಕಾಗಿ. ಆದರೆ, ನಾವು ಜಾತಿಗಾಗಿ ಮತ್ತು ಮೀಸಲಾತಿಗಾಗಿ ಹೋರಾಡುತ್ತಿದ್ದೇವೆ. ಇನ್ನು 100 ವರ್ಷ ಹೋದರೂ ಲಿಂಗಾಯತರಿಗೆ ಮೀಸಲಾತಿ ಸಿಗುವುದಕ್ಕೆ ಸಾಧ್ಯವಿಲ್ಲ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್​​.ಎಮ್. ಜಾಮದಾರ (SM Jamadar) ಹೇಳಿದ್ದಾರೆ. ಆರು ವರ್ಷಗಳ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಎಸ್​​.ಎಂ. ಜಾಮದಾರ ಮತ್ತು ಎಂಬಿ ಪಾಟೀಲ್​​ ಮುಂಚೂಣಿಯಲ್ಲಿ ಹೋರಾಟ ಮಾಡಿದ್ದರು. ಆದರೆ ಈಗ ಅವರೇ ಮೀಸಲಾತಿ ಬಗ್ಗೆ ಈ ರೀತಿಯಾಗಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಗದಗ ನಗರದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಿಜವಾಗಿಯೂ ಬಸವತತ್ವ ಅನುಸರಿಸುವ ಲಿಂಗಾಯತರನ್ನ ಹುಡುಕಬೇಕಿದೆ. ಜಾತಿ ಹೆಸರಿನಲ್ಲಿ ಬೀದಿ ಬೀದಿಗಳಲ್ಲಿ ಹಾರಾಟ, ಹೋರಾಟ ನಡೆಸುತ್ತಿದ್ದಾರೆ. ಲಿಂಗಾಯತರು ಅತ್ಯಂತ ಕೆಟ್ಟ ಜಾತಿಗಳಾಗಿ ಪರಿವರ್ತನೆಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೀಸಲಾತಿ ಹೆಚ್ಚಳ; ಅಧಿಕೃತ ಪ್ರತಿ ಪರಿಶೀಲಿಸಿ ನಿರ್ಧಾರ ಎಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಕೆಲವು ಸಂಘಟನೆಗಳು ಬಸವ ತತ್ವಕ್ಕೆ ವಿರುದ್ಧವಾದುದು. ಲಿಂಗಾಯತ 100 ಒಳಪಂಗಡ ಜಾತಿಗಳಿಗೆ ಮೀಸಲಾತಿ ಕೊಡಿಸುವುದಕ್ಕೆ ಹೋರಾಡುತ್ತಿದ್ದಾರೆ. ಯಾಕೆ ಸಾಧ್ಯವಿಲ್ಲ ಅಂದರೆ 104 ವರ್ಷಗಳ ಇತಿಹಾಸವಿದೆ. 1919ರಲ್ಲಿ ಮಿಲ್ಲರ್​ ಕಮಿಷನ್​, ಹಾವನೂರು ಆಯೋಗ, 1958 ನಾಗನಗೌಡ ಕಮಿಷನ್​  ವೆಂಕಟಸ್ವಾಮಿ ಆಯೋಗ ಸೇರಿದಂತೆ ಇಲ್ಲಿವರೆಗಿನ 6 ಆಯೋಗಗಳ ವರದಿ ಸಲ್ಲಿಸಲಾಗಿದೆ. ಆದರೆ ಮೀಸಲಾತಿ ಕೊಡುವ ಬಗ್ಗೆ ವರದಿ ಇಲ್ಲ ಎಂದು ಹೇಳಿದ್ದಾರೆ.

ರಾಜಕೀಯ ಶಕ್ತಿಗಳು ಸಮಾಜವನ್ನು ಹಾಳು ಮಾಡುತ್ತಿದೆ

ರಾಜಕೀಯ ಶಕ್ತಿಗಳು ಸಮಾಜವನ್ನು ಹಾಳು ಮಾಡುತ್ತಿವೆ. ಪ್ರತ್ಯೇಕ ಜಾತಿಗಳಿಗಾಗಿ ಮತ್ತು ರಾಜಕಾರಣಕ್ಕಾಗಿ ಮೀಸಲಾತಿ ಹೋರಾಟ ನಡೆದಿದೆ. ರಾಜಕೀಯ ಶಕ್ತಿಗಳು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ವರ್ಗವೇ ಬೇರೆ, ಜಾತಿಯೇ ಬೇರೆ, ಧರ್ಮವೇ ಬೇರೆ. ಇದೇ ಸತ್ಯ. ಲಿಂಗಾಯತರು ರಾಜಕೀಯವಾಗಿ ಒಗ್ಗೂಡುವ ಅಗತ್ಯತೆಗಿಂತ ಬದುಕಿನ ಆದರ್ಶಕ್ಕಾಗಿ ಒಂದಾಗಬೇಕು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.