AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ಸ್ಥಾನಕ್ಕಾಗಿ ಅಮಿತ್​ ಶಾಗೆ ನಿಮ್ಮನ್ನು ಅಡ ಇಡುತ್ತಿದ್ದಾರೆ ಕುಮಾರಸ್ವಾಮಿ: ದೇವೇಗೌಡರ ಉದ್ದೇಶಿಸಿ ಇಬ್ರಾಹಿಂ ಹೇಳಿಕೆ

ಮೈತ್ರಿ ವಿಚಾರವಾಗಿ ಈ ಹಿಂದೆ ಕೇಳಿದ್ದಾಗ ಅಂಥದ್ದು ಏನೂ ಇಲ್ಲ ಎಂದೇ ಗೌಡ್ರು ನನ್ ಹತ್ರ ಹೇಳ್ತ ಬಂದಿದ್ರು. ಅವರು ಮನಸ್ಸು ಬದಲಾಯಿಸಿಲ್ಲ ಅಂದರೆ ನಿಲುವಳಿ ಕೈಗೊಂಡು ಬೇರೆ ಅಧ್ಯಕ್ಷರನ್ನ ಆಯ್ಕೆ ಮಾಡ್ತೇವೆ. ಉಚ್ಚಾಟನೆ ಮಾಡೋಕೆ ನಾವು ಹೋಗಲ್ಲ. ಆದ್ರೆ ಅನಿವಾರ್ಯವಾಗಿ ಅಧ್ಯಕ್ಷರನ್ನ ಬದಲಾವಣೆ ಮಾಡ್ತೇವೆ ಅಷ್ಟೇ ಎಂದು ಇಬ್ರಾಹಿಂ ಹೇಳಿದರು.

3 ಸ್ಥಾನಕ್ಕಾಗಿ ಅಮಿತ್​ ಶಾಗೆ ನಿಮ್ಮನ್ನು ಅಡ ಇಡುತ್ತಿದ್ದಾರೆ ಕುಮಾರಸ್ವಾಮಿ: ದೇವೇಗೌಡರ ಉದ್ದೇಶಿಸಿ ಇಬ್ರಾಹಿಂ ಹೇಳಿಕೆ
ಸಿಎಂ ಇಬ್ರಾಹಿಂ
ಹರೀಶ್ ಜಿ.ಆರ್​.
| Updated By: Ganapathi Sharma|

Updated on: Oct 25, 2023 | 6:39 PM

Share

ನವದೆಹಲಿ, ಅಕ್ಟೋಬರ್ 25: ಲೋಕಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳಿಗಾಗಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರನು ನಿಮ್ಮನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಡ ಇಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರನ್ನು (HD Deve Gowda) ಉದ್ದೇಶಿಸಿ ಉಚ್ಚಾಟಿತ ನಾಯಕ ಸಿಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ. ದೆಹಲಿಯಲ್ಲಿ ಮತನಾಡಿದ ಅವರು, ಕೈ ಮುಗಿದು ಹೇಳ್ತೇನೆ ಬೇಡ, 91 ವರ್ಷ ಆಗಿದೆ ನಿಮಗೆ. ಅಟಲ್ ಬಿಹಾರಿ ವಾಜಪೇಯಿ ನಿಮಗೆ ಬೆಂಬಲ ಕೊಡ್ತೀನಿ ಅಂದಾಗ್ಲೇ ನೀವ್ ಬಿಟ್ಟು ಬಂದವರು. ಈಗ ಏನ್ ಪರಿಸ್ಥಿತಿ ಬಂದಿದೆ ನಿಮಗೆ. ಕೆಂಪೇಗೌಡ್ರ ನಾಡು ನಮ್ಮ ಕರ್ನಾಟಕ. ಕುಮಾರಸ್ವಾಮಿಗೆ ಬುದ್ಧಿ ಹೇಳಿ. ನಾವು ಇಂಡಿಪೆಂಡೆಂಟ್ ಆಗಿ ನಿಂತರೂ ಸಹ 3 ಸ್ಥಾನ ಗೆಲ್ಲುತ್ತೇವೆ. ಆದ್ರೆ ಇವ್ರ (ಬಿಜೆಪಿ) ಜೊತೆ ಹೋದ್ರೆ 1 ಸೀಟ್ ಸಹ ನಾವು ಗೆಲ್ಲೋಲ್ಲ. ಮದುವೆಗೇ ಬ್ರಾಹ್ಮಣರು ಬರ್ತಾ ಇಲ್ಲಾ, ಇನ್ನು ಒಕ್ಕಲಿಗರಿಗೆ ವೋಟ್ ಹಾಕೋಕೆ ಬರ್ತಾರಾ ಎಂದು ಪ್ರಶ್ನಿಸಿದರು.

ಜನತಾ ದಳದ ಎಲ್ಲಾ ರಾಜ್ಯದ ನಾಯಕರು ಒಟ್ಟಾಗಿ ಸೇರಿ ಮೀಟಿಂಗ್ ಮಾಡ್ತಾ ಇದ್ದೇವೆ. ಕೇರಳ, ಮಹಾರಾಷ್ಟ್ರ, ಬಿಹಾರ್ ರಾಜ್ಯದ ಜನತಾದಳದ ನಾಯಕರ ಜೊತೆ ಸಭೆ ಮಾಡ್ತಾ ಇದ್ದೇನೆ. ನಾಳೆ ಮೀಟಿಂಗ್ ಮಾಡ್ತೇವೆ, ಜನತಾದಳ ನಮ್ದೇ ಒರಿಜಿನಲ್ ಸ್ಟ್ರೆಂತ್. ಮೀಟಿಂಗ್ ಮಾಡಿ ನಾವು ದೇವೇಗೌಡ್ರಿಗೆ ಹೇಳ್ತೇವೆ. ನೀವು ಹಿರಿಯರು ಇದ್ದೀರಿ, ನಿಮ್ಮನ್ನು ನಾವು ತಂದೆ ಸ್ಥಾನದಲ್ಲಿ ಕಾಣ್ತಾ ಇದ್ದೇವೆ. ಕರ್ನಾಟಕದಿಂದ ಹೋದ ಏಕೈಕ ಪ್ರಧಾನ ಮಂತ್ರಿ. ಮಕ್ಕಳ ಮಾತು ಕೇಳಿ ಹಾಳಾಗಬೇಡಿ. ದೇಶ ಮುಖ್ಯ, ನಾವು ನಿಮ್ಮ ಮಕ್ಕಳಂತೆ ಎಂದು ಇಬ್ರಾಹಿಂ ಹೇಳಿದರು.

ನಿಲುವಳಿ ಕೈಗೊಂಡು ಬೇರೆ ಅಧ್ಯಕ್ಷರನ್ನು ಆಯ್ಕೆ ಮಾಡ್ತೇವೆ: ಇಬ್ರಾಹಿಂ ಎಚ್ಚರಿಕೆ

ಮೈತ್ರಿ ವಿಚಾರವಾಗಿ ಈ ಹಿಂದೆ ಕೇಳಿದ್ದಾಗ ಅಂಥದ್ದು ಏನೂ ಇಲ್ಲ ಎಂದೇ ಗೌಡ್ರು ನನ್ ಹತ್ರ ಹೇಳ್ತ ಬಂದಿದ್ರು. ಅವರು ಮನಸ್ಸು ಬದಲಾಯಿಸಿಲ್ಲ ಅಂದರೆ ನಿಲುವಳಿ ಕೈಗೊಂಡು ಬೇರೆ ಅಧ್ಯಕ್ಷರನ್ನ ಆಯ್ಕೆ ಮಾಡ್ತೇವೆ. ಉಚ್ಚಾಟನೆ ಮಾಡೋಕೆ ನಾವು ಹೋಗಲ್ಲ. ಆದ್ರೆ ಅನಿವಾರ್ಯವಾಗಿ ಅಧ್ಯಕ್ಷರನ್ನ ಬದಲಾವಣೆ ಮಾಡ್ತೇವೆ ಅಷ್ಟೇ ಎಂದು ಇಬ್ರಾಹಿಂ ಹೇಳಿದರು.

ಯಾರೋ ಬಸ್​ ಸ್ಟ್ಯಾಂಡ್​ನಲ್ಲಿರೋರು ಧಾರೆ ಎರೆಯೋಕೆ ಆಗುತ್ತಾ: ಇಬ್ರಾಹಿಂ ಪ್ರಶ್ನೆ

ಎನ್​ಡಿಎ ಮೈತ್ರಿಕೂಟಕ್ಕೆ ಸೇರಿದ್ದೇವೆ ಎಂದು ಘೋಷಣೆ ಮಾಡಲು ಕುಮಾರಸ್ವಾಮಿ ಯಾರು? ಅವರು ಕೇವಲ ಶಾಸಕ ಅಷ್ಟೇ. ಹೆಣ್ಣಿಗೆ ಧಾರೆ ಎರೆಯೋದು ಅವಳ ಅಪ್ಪ ಆಗಿರಬೇಕೇ ವಿನಃ ಯಾರೋ ಬಸ್ ಸ್ಟ್ಯಾಂಡ್​​​ನಲ್ಲಿ ಇರೋನು ಬಂದು ಧಾರೆ ಎರೆಯೋಕೆ ಆಗುತ್ತಾ ಎಂದು ಕುಮಾರಸ್ವಾಮಿ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ ಬಿಜೆಪಿ ಜೊತೆಗಿನ ಮೈತ್ರಿ ಮರುಪರಿಶೀಲನೆ ಮಾಡಿ: ದೇವೇಗೌಡ್ರಿಗೆ ಇಬ್ರಾಹಿಂ ಕಳಕಳಿಯ ಮನವಿ

ಗೋವಾ ಮುಖ್ಯಮಂತ್ರಿಗೆ ಬುದ್ಧಿ ಇಲ್ಲ. ರಾಜ್ಯ ಬಿಜೆಪಿ ನಾಯಕರನ್ನು ಕೂಡ ಅವರು ಕರೆದಿಲ್ಲ. ಮೈತ್ರಿ ವಿಚಾರವಾಗಿ ಏನನ್ನೂ ಸಹ ಕೇಳಿಲ್ಲ. ಈ ಕರ್ನಾಟಕದಲ್ಲಿ ಇರೋ ಬಿಜೆಯವರು ಸಹ ಆ ಕಡೆಗೂ ಇಲ್ಲಾ ಈ ಕಡೆಗೂ ಇಲ್ಲ. ಅವರು ಮರ್ಯಾದಿ ಹೋಗುತ್ತೆ ಅಂತ ಹಾಗಿದ್ದಾರೆ ಅಷ್ಟೇ. ಅವ್ರಿಗೆ ಸ್ವಲ್ಪ ಆದ್ರೂ ನೈತಿಕತೆ ಇದ್ರೆ, ನಾನೇನಾದ್ರೂ ಬಿಜೆಪಿ ಅಧ್ಯಕ್ಷ ಆಗಿದ್ರೆ ಅವತ್ತೇ ರಾಜೀನಾಮೆ ಕೊಟ್ಟು ಹೊರಗೆ ಬರ್ತಿದ್ದೆ. ಜನತಾದಳ ಎಲ್ಲ ಪಕ್ಷಗಳಿಗಿಂತ ಸಕ್ರಿಯವಾಗಿದೆ. ನಾವು ರಾಜ್ಯಾಧ್ಯಕ್ಷ ಆಗೇ ಇರ್ತೀವಿ ಅಷ್ಟೇ, ರಾಷ್ಟ್ರೀಯ ಅಧ್ಯಕ್ಷ ಆಗಲ್ಲ. ನಾಳೆ ಮಧ್ಯಾಹ್ನ 3 ಗಂಟೆಗೆ ಸಭೆ ಸೇರ್ತೇವೆ. ಎಲ್ಲಾ ರಾಜ್ಯದವ್ರು ಸಹ ಬರ್ತಾರೆ ಎಂದು ಇಬ್ರಾಹಿಂ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ