Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜೇಶ್ವರ ಚುನಾವಣಾ ಲಂಚ ಪ್ರಕರಣ: ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್‌ಗೆ ಜಾಮೀನು

ಪ್ರಕರಣದ ಪ್ರಕಾರ, ಸುರೇಂದ್ರನ್ ಮತ್ತು ಇತರ ಬಿಜೆಪಿ ನಾಯಕರು ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಕೆ ಸುಂದರ ಅವರಿಗೆ ಮಂಜೇಶ್ವರಂ ಚುನಾವಣೆಯಿಂದ ಹಿಂದೆ ಸರಿಯಲು ಲಂಚದ ಪ್ರಸ್ತಾಪವನ್ನು ಮಾಡಿದರು. ನಾಮಪತ್ರ ಹಿಂಪಡೆಯಲು ಅವರಿಗೆ 2 ಲಕ್ಷ ರೂಪಾಯಿ ಹಾಗೂ ಸ್ಮಾರ್ಟ್‌ಫೋನ್ ನೀಡಲಾಗಿತ್ತು ಎನ್ನಲಾಗಿದೆ

ಮಂಜೇಶ್ವರ ಚುನಾವಣಾ ಲಂಚ ಪ್ರಕರಣ: ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್‌ಗೆ ಜಾಮೀನು
ಕೆ. ಸುರೇಂದ್ರನ್
Follow us
ರಶ್ಮಿ ಕಲ್ಲಕಟ್ಟ
|

Updated on:Oct 25, 2023 | 5:43 PM

ಕಾಸರಗೋಡು ಅಕ್ಟೋಬರ್ 25: ಮಂಜೇಶ್ವರ ಚುನಾವಣಾ ಲಂಚ ಪ್ರಕರಣದಲ್ಲಿ (Manjeswaram poll bribery) ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ (K Surendran) ಸೇರಿದಂತೆ ಎಲ್ಲಾ ಆರೋಪಿಗಳಿಗೆ ಕಾಸರಗೋಡು (Kasargod) ನ್ಯಾಯಾಲಯ ಜಾಮೀನು ನೀಡಿದೆ. ಸುರೇಂದ್ರನ್ ಸೇರಿದಂತೆ ಪ್ರಕರಣದ ಆರೋಪಿಗಳೆಲ್ಲರೂ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅಂತಿಮ ಸೂಚನೆ ನೀಡಿದ ನಂತರ ತಲುಪಿದ್ದು. ಸುರೇಂದ್ರನ್ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯವು ನವೆಂಬರ್ 15 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.

ಪ್ರಕರಣದ ಐವರು ಆರೋಪಿಗಳು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.

ಪ್ರಕರಣದ ಪ್ರಕಾರ, ಸುರೇಂದ್ರನ್ ಮತ್ತು ಇತರ ಬಿಜೆಪಿ ನಾಯಕರು ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಕೆ ಸುಂದರ ಅವರಿಗೆ ಮಂಜೇಶ್ವರಂ ಚುನಾವಣೆಯಿಂದ ಹಿಂದೆ ಸರಿಯಲು ಲಂಚದ ಪ್ರಸ್ತಾಪವನ್ನು ಮಾಡಿದರು. ನಾಮಪತ್ರ ಹಿಂಪಡೆಯಲು ಅವರಿಗೆ 2 ಲಕ್ಷ ರೂಪಾಯಿ ಹಾಗೂ ಸ್ಮಾರ್ಟ್‌ಫೋನ್ ನೀಡಲಾಗಿತ್ತು ಎನ್ನಲಾಗಿದೆ. ಸುರೇಂದ್ರನ್ ಚುನಾವಣೆಯಲ್ಲಿ ಗೆದ್ದರೆ ಅವರಿಗೆ ಕರ್ನಾಟಕದಲ್ಲಿ ವೈನ್ ಪಾರ್ಲರ್ ಮತ್ತು ನಿವಾಸವನ್ನು ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು.

ಸುರೇಂದ್ರನ್ ಅವರನ್ನು ಮೊದಲ ಆರೋಪಿ ಎಂದು ನಮೂದಿಸಿದ ಆರೋಪಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ.

2016ರ ಚುನಾವಣೆಯಲ್ಲಿ ಸುರೇಂದ್ರನ್ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ವಿರುದ್ಧ 89 ಮತಗಳಿಂದ ಸೋತಿದ್ದರು. ಆಗ ಸುಂದರ ಅವರು 467 ಮತಗಳನ್ನು ಗಳಿಸಿದ್ದರು, ಇದು ಸುರೇಂದ್ರನ್‌ಗೆ ನಿರ್ಣಾಯಕ ಎಂದು ಹೇಳಲಾಗಿದೆ. 2021 ರಲ್ಲಿ ಸುಂದರ ಅವರು ಮತ್ತೆ ನಾಮಪತ್ರ ಸಲ್ಲಿಸಿದಾಗ, ಸುರೇಂದ್ರನ್ ಅವರ ಹೆಸರು ಗೊಂದಲಕ್ಕೀಡಾಗಬಾರದು ಎಂದು ಬಿಜೆಪಿ ಲಂಚ ನೀಡಿತು ಎನ್ನಲಾಗಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಟ್ರ್ಯಾಕ್ಟರ್‌ ಹತ್ತಿಸಿ ವ್ಯಕ್ತಿಯ ಹತ್ಯೆ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ, ಪ್ರಿಯಾಂಕಾಗೆ ಸವಾಲೆಸೆದ ಬಿಜೆಪಿ

ಸುಂದರ್ ನಾಮಪತ್ರ ಹಿಂಪಡೆದರೂ ಸುರೇಂದ್ರನ್ ಗೆ ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. ಬಳಿಕ ಸುಂದರ್ ಲಂಚದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆದರೆ, ಇದು ಪಕ್ಷದ ವಿರುದ್ಧದ ಷಡ್ಯಂತ್ರ ಎಂದು ಬಿಜೆಪಿ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Wed, 25 October 23

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !