AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದಲ್ಲಿ ಟ್ರ್ಯಾಕ್ಟರ್‌ ಹತ್ತಿಸಿ ವ್ಯಕ್ತಿಯ ಹತ್ಯೆ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ, ಪ್ರಿಯಾಂಕಾಗೆ ಸವಾಲೆಸೆದ ಬಿಜೆಪಿ

ರಾಜಸ್ಥಾನದ ವಿರೋಧ ಪಕ್ಷದ ನಾಯಕ ರಾಜೇಂದ್ರ ಸಿಂಗ್ ರಾಥೋಡ್, "ಅಪರಾಧಿಗಳು ಎಷ್ಟು ನಿರ್ಭೀತರಾಗಿದ್ದಾರೆ ಎಂದರೆ ಅವರು ಅಪರಾಧದ ವಿಡಿಯೊವನ್ನು ಬಿಡುಗಡೆ ಮಾಡುತ್ತಾರೆ. ಭರತ್‌ಪುರದ ಘಟನೆಯು ಮಾನವೀಯತೆಗೆ ಕಳಂಕವಾಗಿದೆ, ವ್ಯವಸ್ಥೆ ಮತ್ತು ಡಿಜಿಪಿ ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಅದಕ್ಕಾಗಿಯೇ ಕ್ರಿಮಿನಲ್‌ಗಳು ನಿರ್ಭೀತರು

ರಾಜಸ್ಥಾನದಲ್ಲಿ ಟ್ರ್ಯಾಕ್ಟರ್‌ ಹತ್ತಿಸಿ ವ್ಯಕ್ತಿಯ ಹತ್ಯೆ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ, ಪ್ರಿಯಾಂಕಾಗೆ ಸವಾಲೆಸೆದ ಬಿಜೆಪಿ
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ರಶ್ಮಿ ಕಲ್ಲಕಟ್ಟ
|

Updated on: Oct 25, 2023 | 4:44 PM

Share

ದೆಹಲಿ ಅಕ್ಚೋಬರ್ 25: ಕಾಂಗ್ರೆಸ್ ಪಕ್ಷ (Congress) ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ (Rajasthan) ಟ್ರ್ಯಾಕ್ಟರ್‌ನಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಂದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ (BJP) ಬುಧವಾರ ವಾಗ್ದಾಳಿ ನಡೆಸಿದೆ. ಭರತ್‌ಪುರ ಜಿಲ್ಲೆಯ ಬಯಾನಾದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬನನ್ನು ಟ್ರ್ಯಾಕ್ಟರ್‌ ಹತ್ತಿಸಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದು, ಸಂತ್ರಸ್ತರ ದೂರಿಗಾಗಿ ಕಾಯುತ್ತಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ದಿನವೇ ಈ ಘಟನೆ ಬೆಳಕಿಗೆ ಬಂದಿದೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ, “ಭರತ್‌ಪುರದ ಬಯಾನಾದಲ್ಲಿ ಹಗಲು ಹೊತ್ತಿನಲ್ಲಿ ವ್ಯಕ್ತಿಯೊಬ್ಬನನ್ನು ಟ್ರ್ಯಾಕ್ಟರ್‌ ಹತ್ತಿಸಿ ಹತ್ಯೆ ಮಾಡಿದ್ದು ಭಯಾನಕವಾಗಿದೆ. ವಿಷಯವು ಪೊಲೀಸರ ಅರಿವಿನಲ್ಲಿರುವುದರಿಂದ, ನಂತರ ಪ್ರಶ್ನೆಗಳನ್ನು ಎತ್ತುವುದು ಸ್ಪಷ್ಟವಾಗಿದೆ. ಇದು ಖಂಡನೀಯ ಘಟನೆಯಾಗಿದೆ. ಗೆಹ್ಲೋಟ್ ಸರ್ಕಾರದ ಅಧಿಕಾರಾವಧಿಯಲ್ಲಿ ಕ್ರಿಮಿನಲ್ ಮತ್ತು ಅರಾಜಕತಾವಾದಿ ಮನಸ್ಥಿತಿಯ ಪರಿಣಾಮವಾಗಿದೆ. ಜೂಟಿ ಕಾಂಗ್ರೆಸ್, ಜೂಟಿ ಪ್ರಿಯಾಂಕಾ (ಕಾಂಗ್ರೆಸ್ ಮತ್ತು ಪ್ರಿಯಾಂಕಾ ಸುಳ್ಳುಗಾರರು)” ಎಂದು ಟ್ವೀಟ್ ಮಾಡಿದ್ದಾರೆ.

ರಾಜಸ್ಥಾನದ ವಿರೋಧ ಪಕ್ಷದ ನಾಯಕ ರಾಜೇಂದ್ರ ಸಿಂಗ್ ರಾಥೋಡ್, “ಅಪರಾಧಿಗಳು ಎಷ್ಟು ನಿರ್ಭೀತರಾಗಿದ್ದಾರೆ ಎಂದರೆ ಅವರು ಅಪರಾಧದ ವಿಡಿಯೊವನ್ನು ಬಿಡುಗಡೆ ಮಾಡುತ್ತಾರೆ. ಭರತ್‌ಪುರದ ಘಟನೆಯು ಮಾನವೀಯತೆಗೆ ಕಳಂಕವಾಗಿದೆ, ವ್ಯವಸ್ಥೆ ಮತ್ತು ಡಿಜಿಪಿ ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಅದಕ್ಕಾಗಿಯೇ ಕ್ರಿಮಿನಲ್‌ಗಳು ನಿರ್ಭೀತರು… ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ ಎಂದು ಪ್ರಿಯಾಂಕಾ ಗಾಂಧಿ ಹೇಳುತ್ತಾರೆ, ಆದರೆ ಇದು ಪುರುಷರ ನಾಡು ಎಂಬ ಕಾರಣಕ್ಕೆ ಅತ್ಯಾಚಾರಗಳು ನಡೆಯುತ್ತಿವೆ ಎಂದು ಹೇಳಿದ ತಮ್ಮ ಸಂಸದರ ಜೊತೆ ಅವರು ಜಗಳವಾಡಲಿಲ್ಲ.

ಆಕೆ ಯಾವುದೇ ಘಟನೆಯನ್ನು ಖಂಡಿಸಿಲ್ಲ ಅಥವಾ ಅಂತಹ ಘಟನೆಗಳ ಯಾವುದೇ ಸ್ಥಳಕ್ಕೆ ಭೇಟಿ ನೀಡಿಲ್ಲ. ಈಗ ರಿಪೋರ್ಟ್ ಕಾರ್ಡ್ ಜನರ ಮುಂದೆ ಇದೆ. ಅವರು ಕೆಳಗಿಳಿಯುವುದು ಖಚಿತ. ಅವರು ಅವಳು ಇಲ್ಲಿಗೆ ಬರುತ್ತಿದ್ದಾರೆ ಆದರೆ ಅದಕ್ಕಿಂತ ಮೊದಲು, ಆಕೆ ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ಅಪರಾಧದ ಬಗ್ಗೆ ಮಾತನಾಡಬೇಕು ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ: ಆಸ್ತಿ ವಿವಾದ, ಎರಡು ಕುಟುಂಬಗಳ ನಡುವೆ ಘರ್ಷಣೆ, ಟ್ರ್ಯಾಕ್ಟರ್ ಹತ್ತಿಸಿ ಓರ್ವನ ಕೊಲೆ

ರಾಜಸ್ಥಾನದ ಭರತ್‌ಪುರದ ಬಯಾನದಲ್ಲಿ ನಿರ್ಪತ್ ಎಂಬಾತನನ್ನು ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಲಾಗಿತ್ತು ಇದು ಕೇವಲ ಒಬ್ಬ ವ್ಯಕ್ತಿಯ ಹತ್ಯೆಯಲ್ಲ. ಇದು ಇಡೀ ರಾಜಸ್ಥಾನ, ಕಾಂಗ್ರೆಸ್ ಆಡಳಿತವಿರುವ ಎಲ್ಲ ರಾಜ್ಯಗಳ ಕುರಿತಾಗಿದೆ.  ಪ್ರಿಯಾಂಕಾ ವಾದ್ರಾ ಇಂದು ರಾಜಸ್ಥಾನ ತಲುಪುತ್ತಿದ್ದಾರೆ. ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಮೊದಲು ಆ ಗ್ರಾಮಕ್ಕೆ ಭೇಟಿ ನೀಡುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ. ಆಕೆ ಅಲ್ಲಿಗೆ ಹೋಗಿ ಪೊಲೀಸ್ ಅಧಿಕಾರಿಗಳನ್ನು, ಡಿಎಂ, ಎಸ್ಪಿಯನ್ನು ಅಮಾನತು ಮಾಡಿ, ಕೇವಲ ಭಾಷಣ, ಘೋಷಣೆಗಳಿಗೆಲ್ಲ ತನಗಿರುವ ಧೈರ್ಯ ತೋರಿಸಬೇಕು. ಆಕೆ ಗಟ್ಟಿಗಿತ್ತಿ ಎಂದು ತೋರಿಸಬೇಕು. ಇದು ಪ್ರಿಯಾಂಕಾ ವಾದ್ರಾಗೆ ಸವಾಲು. ಮೊದಲು ಅಲ್ಲಿಗೆ ಹೋಗುವಂತೆ ನಾನು ಅವಳಿಗೆ ಸವಾಲು ಹಾಕುತ್ತೇನೆ ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ