ಆಸ್ತಿ ವಿವಾದ, ಎರಡು ಕುಟುಂಬಗಳ ನಡುವೆ ಘರ್ಷಣೆ, ಟ್ರ್ಯಾಕ್ಟರ್ ಹತ್ತಿಸಿ ಓರ್ವನ ಕೊಲೆ
ಆಸ್ತಿಗಾಗಿ ಎರಡು ಕುಟುಂಬಗಳ ನಡುವೆ ನಡೆದ ಕಲಹ ತಾರಕಕ್ಕೇರಿ ಟ್ರ್ಯಾಕ್ಟರ್ ಹತ್ತಿಸಿ ಓರ್ವನನ್ನು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬನನ್ನು ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಆ ವ್ಯಕ್ತಿಯ ಮೇಲೆ ಎಂಟು ಬಾರಿ ಟ್ರಾಕ್ಟರ್ ಟ್ರ್ಯಾಕ್ಟರ್ ಹರಿಸಿದ್ದಾರೆ, ಆತ ಸಾಯುವವರೆಗೂ ಟ್ರ್ಯಾಕ್ಟರ್ನ್ನು ಮೈಮೇಲೆ ಹತ್ತಿಸುತ್ತಲೇ ಇದ್ದರು. ಬಹದ್ದೂರ್ ಸಿಂಗ್ ಮತ್ತು ಅತಾರ್ ಸಿಂಗ್ ಗುರ್ಜರ್ ಅವರ ಕುಟುಂಬಗಳು ಭರತ್‌ಪುರದಲ್ಲಿ ಭೂಮಿಗೆ ಸಂಬಂಧಿಸಿದಂತೆ ದೀರ್ಘಕಾಲದ ವ್ಯಾಜ್ಯ ಹೊಂದಿದ್ದವು.

ಆಸ್ತಿಗಾಗಿ ಎರಡು ಕುಟುಂಬಗಳ ನಡುವೆ ನಡೆದ ಕಲಹ ತಾರಕಕ್ಕೇರಿ ಟ್ರ್ಯಾಕ್ಟರ್ ಹತ್ತಿಸಿ ಓರ್ವನನ್ನು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬನನ್ನು ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಆ ವ್ಯಕ್ತಿಯ ಮೇಲೆ ಎಂಟು ಬಾರಿ ಟ್ರಾಕ್ಟರ್ ಟ್ರ್ಯಾಕ್ಟರ್ ಹರಿಸಿದ್ದಾರೆ, ಆತ ಸಾಯುವವರೆಗೂ ಟ್ರ್ಯಾಕ್ಟರ್ನ್ನು ಮೈಮೇಲೆ ಹತ್ತಿಸುತ್ತಲೇ ಇದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬಹದ್ದೂರ್ ಸಿಂಗ್ ಮತ್ತು ಅತಾರ್ ಸಿಂಗ್ ಗುರ್ಜರ್ ಅವರ ಕುಟುಂಬಗಳು ಭರತ್‌ಪುರದಲ್ಲಿ ಭೂಮಿಗೆ ಸಂಬಂಧಿಸಿದಂತೆ ದೀರ್ಘಕಾಲದ ವ್ಯಾಜ್ಯ ಹೊಂದಿದ್ದವು. ಇಂದು ಬೆಳಗ್ಗೆ ಬಹದ್ದೂರ್ ಸಿಂಗ್ ಅವರ ಕುಟುಂಬವು ವಿವಾದಿತ ಪ್ಲಾಟ್‌ಗೆ ಟ್ರ್ಯಾಕ್ಟರ್‌ನಲ್ಲಿ ತಲುಪಿದೆ. ಸ್ವಲ್ಪ ಸಮಯದ ನಂತರ ಗುರ್ಜರ್ ಕುಟುಂಬ ಕೂಡ ಅಲ್ಲಿಗೆ ಬಂದಿತ್ತು.
ಕೂಡಲೇ ಎರಡು ಕುಟುಂಬಗಳು ಘರ್ಷಣೆಗಿಳಿದು ಪರಸ್ಪರ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಗುಂಡಿನ ಸದ್ದು ಕೇಳಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಘರ್ಷಣೆಯ ಸಮಯದಲ್ಲಿ, ಅತರ್ ಸಿಂಗ್ ಅವರ ಮಗ ನಿರ್ಪತ್ ನೆಲಕ್ಕೆ ಬಿದ್ದಿದ್ದಾರೆ, ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ವ್ಯಕ್ತಿ ಸಾಯುವವರೆಗೂ ಹಲವು ಬಾರಿ ಆತನ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದಾನೆ. ಇತರರು ಮಧ್ಯಪ್ರವೇಶಿಸಿದಾಗ, ಆರೋಪಿಗಳು ತಡೆಯಲು ನಿರಾಕರಿಸಿದರು ಮತ್ತು ಸ್ಥಳದಲ್ಲೇ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮತ್ತಷ್ಟು ಓದಿ: Mumbai Crime News: ಆಸ್ತಿ ವಿಚಾರವಾಗಿ ಇಬ್ಬರು ಸಹೋದರಿಯರಿಗೆ ವಿಷ ಹಾಕಿ ಹತ್ಯೆ; ಕೃತ್ಯವೆಸಗಲು ಆರೋಪಿ 53 ಬಾರಿ ಗೂಗಲ್ ಸರ್ಚ್ ಮಾಡಿದ್ದ
ಘರ್ಷಣೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
ವರದಿಗಳ ಪ್ರಕಾರ, ಐದು ದಿನಗಳ ಹಿಂದೆ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿತ್ತು, ಬಹದ್ದೂರ್ ಸಿಂಗ್ ಮತ್ತು ಅವರ ಕಿರಿಯ ಸಹೋದರ ಜನಕ್ ಗಾಯಗೊಂಡಿದ್ದರು. ಅತರ್ ಸಿಂಗ್ ಅವರ ಪುತ್ರ ನಿರ್ಪತ್ ಸೇರಿದಂತೆ ಕುಟುಂಬದ ವಿರುದ್ಧ ಕುಟುಂಬವು ಪ್ರಕರಣ ದಾಖಲಿಸಲಾಗಿತ್ತು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ