ಗದಗ: ಮದುವೆಯಾಗಿ ಒಂದೇ ತಿಂಗಳಲ್ಲೇ ಜೋಡಿ ದೂರ ಆಗಿದ್ದರು, ಈ ಕುರಿತು ಆಕೆಯ ಗಂಡ ಠಾಣೆಗೆ ದೂರು ನೀಡಿದ್ದ. ಇದೀಗ ಗದಗ ಪೊಲೀಸರ ಕಾರ್ಯಾಚರಣೆಯಿಂದ ಜುಲೈ 14 ರಂದು ಹುಡಗಿಯನ್ನು ಮತ್ತೆ ಗಂಡನ ಮನೆಗೆ ಸೇರಿಸಿದ್ದಾರೆ. ನಿನ್ನೆ ಅದ್ಧೂರಿ ರಿಸೆಪ್ಷನ್ ಕೂಡ ನಡೆದಿದೆ. ಹೀಗೆ ನಗು ನಗುತಾ ಸಪ್ತಪದಿ ತುಳಿದಿರುವ ಈ ಜೋಡಿಯ ಹೆಸರು ಅಭಿಷೇಕ್ ಐಶ್ವರ್ಯ. ಗದಗ(Gadag) ನಗರದ ಡಿಸಿ ಮಿಲ್ ಪ್ರದೇಶದ ಯುವಕ ಅಭಿಷೇಕ್. ಹುಬ್ಬಳಿ ನಿವಾಸಿಯಾಗಿರುವ ಐಶ್ವರ್ಯಳನ್ನ ಕಳೆದ ಎರಡು ವರ್ಷಗಳ ಹಿಂದೆ ಮದುವೆಯೊಂದರಲ್ಲಿ ನೋಡಿ ಹುಡುಗಿ ಪರಿಚಯವಾಗಿದ್ದಳು. ಅಂದು ಆರಂಭವಾದ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಬೇಕೆಂದು ನಿರ್ಧಾರ ಮಾಡಿ, ಕುಟುಂಬಸ್ಥರಿಗೆ ಪ್ರೀತಿಯ ವಿಷಯ ತಿಳಿಸಿದ್ರು. ಹುಡುಗನ ಮನೆಯವರು ಮದುವೆಗೆ ಒಪ್ಪಿಕೊಂಡಿದ್ರು. ಆದ್ರೆ, ಹುಡುಗಿ ಮನೆಯವರು ಮದುವೆ ನಿರಾಕರಣೆ ಮಾಡಿದ್ದರು.
ದೇವಸ್ಥಾನದಲ್ಲಿ ಹುಡುಗಿ ಮನೆಯವರ ವಿರೋಧದ ನಡುವೆ ಮದುವೆಯಾಗಿ, 2023 ಜೂನ್ 23 ರಂದು ಗದಗನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ನೊಂದಣಿ ಮಾಡಿಸಿದ್ರು. ಆದಾದ ಮೇಲೆ ಹೊಸ ಜೀವನ ನಡೆಸಬೇಕೆಂದು ಹುಡುಗ ಹಾಗೂ ಹುಡುಗಿ ಗದಗನಲ್ಲಿ ವಾಸ ಮಾಡ್ತಾಯಿದ್ರು. ಆದ್ರೆ, ಜುಲೈ 12 ಡಿಸಿ ಮಿಲ್ ಪ್ರದೇಶದ ಹುಡಗನ ಮನೆಗೆ ನುಗ್ಗಿದ ಐಶ್ವರ್ಯ ಪೋಷಕರು ಸೇರಿದಂತೆ ಅವರ ಸಹಚರರು ಆಕೆಯನ್ನ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರಂತೆ ಎಂದು ಪತಿ ಅಭಿಷೇಕ್ ಮಹಿಳಾ ಠಾಣೆಗೆ ದೂರು ನೀಡಿದ್ದ. ಅಂದು ಟಿವಿ9 ಕೂಡ ವರದಿ ಮಾಡಿತ್ತು. ಎಸ್ಪಿ ಬಿ ಎಸ್ ನೇಮಗೌಡ ಅವ್ರು ಕೂಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು. ಅಲರ್ಟ್ ಆದ ಮಹಿಳಾ ಪೊಲೀಸರು ಹುಬ್ಬಳ್ಳಿಗೆ ಹೋಗಿ ಹುಡುಗಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ವಶಕ್ಕೆ ಪಡೆದಿದ್ದಾರೆ. ಆದ್ರೆ, ಐಶ್ವರ್ಯ ಪೊಲೀಸ್ ವಿಚಾರಣೆಯಲ್ಲಿ ತಾಯಿಯ ಕರೆ ಹಿನ್ನಲೆಯಲ್ಲಿ ನಾನೆ ಹೋಗಿದ್ದೇನೆ. ನನ್ನ ಯಾರೂ ಕಿಡ್ನ್ಯಾಪ್ ಮಾಡಿಲ್ಲ ಅಂತ ಹೇಳಿಕೆ ಕೊಟ್ಟಿದ್ದಾಳೆಂದು ಎಸ್ಪಿ ಹೇಳಿದ್ದಾರೆ.
ಇದನ್ನೂ ಓದಿ:‘ಐ ಲವ್ ಯೂ ಎಂದು ಹೇಳಬೇಡಿ, ಅದರ ಬದಲು…’; ಟಿಪ್ಸ್ ಕೊಟ್ಟ ಸಾನ್ಯಾ ಐಯ್ಯರ್
ಪರಸ್ಪರ ಪ್ರೀತಿ ಮಾಡಿದ್ದ ಜೋಡಿಗೆ ಯುವತಿ ಮನೆಯವ್ರು ವಿಲನ್ ಆಗಿದ್ರು. ಈಗ ಪೊಲೀಸರು ಹುಡಗಿಯನ್ನು ವಶಕ್ಕೆ ಪಡೆದುಕೊಂಡು ಗದಗ ಪತಿ ಅಭಿಷೇಕ್ ಗೆ ಒಪ್ಪಿಸಿದ್ದಾರೆ. ಹೀಗಾಗಿ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಹೆಂಡತಿ ಮನೆಗೆ ಬಂದಿದ್ದೇ ತಡ ಇವತ್ತು ಅಭಿಷೇಕ ಮತ್ತು ಐಶ್ವರ್ಯಳ ಅದ್ದೂರಿಯಾಗಿ ಆರಕ್ಷತೆ ನಡೆದಿದೆ. ಹೆಂಡತಿ ಕಿಡ್ನ್ಯಾಪ್ ನಿಂದ ಕಂಗಾಲಾಗಿದ್ದ ಅಭಿಷೇಕ್ ಮುಖದಲ್ಲಿ ಮಂದಹಾಸ ಮೂಡಿದೆ. ನಿನ್ನೆ ರಿಸೆಪ್ಷನ್ ಮಾಡಿಕೊಳ್ಳುವ ಮೂಲಕ ಹಿರಿಯರ ಸಮ್ಮುಖದಲ್ಲಿ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಆದ್ರೆ, ಹುಡಗಿ ಮನೆಯವ್ರು ಮಾತ್ರ ಈ ಆರಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ನನಗೆ ಸೊಸೆ ಬೇಕು ಅಂತಿದ್ದ ಅತ್ತೆಯೂ ಫುಲ್ ಖಷಿಯಾಗಿದ್ದು, ಇವತ್ತು ನನ್ನ ಮಗ ಸೊಸೆ ಒಂದಾಗಿದ್ದಾರೆ. ಬಹಳ ಖುಷಯಾಗಿದೆಯೆಂದು ಅಭಿಷೇಕ ತಾಯಿ ಹೇಳಿದ್ದಾಳೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:02 am, Sun, 16 July 23